ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಂಟ್ವಾಳ ರಾಜಕೀಯದಲ್ಲಿ ರೋಚಕ ಟ್ವಿಸ್ಟ್. ರಾಜೇಶ್ ನಾಯಕ್ ಮೇಲೆ ರಮಾನಾಥ ರೈ ನೇರ ವಾಗ್ದಾಳಿ. ಮುಂದೇನಾಗಬಹುದು?

Twitter
Facebook
LinkedIn
WhatsApp
ಬಂಟ್ವಾಳ ರಾಜಕೀಯದಲ್ಲಿ ರೋಚಕ ಟ್ವಿಸ್ಟ್. ರಾಜೇಶ್ ನಾಯಕ್ ಮೇಲೆ ರಮಾನಾಥ ರೈ ನೇರ ವಾಗ್ದಾಳಿ. ಮುಂದೇನಾಗಬಹುದು?

ಬಂಟ್ವಾಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಈ ಮೊದಲು ರಮಾನಾಥ ರೈ ನೇರ ವಾಗ್ದಾಳಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಮೇಲೆ ಅಷ್ಟಾಗಿ ನಡೆಸಿರಲಿಲ್ಲ.

ಆದರೆ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ನಾಯಕ್ ಮೇಲೆ ಹಲವಾರು ಗುರುತರ ಆರೋಪಗಳನ್ನು ರಮಾನಾಥ ರೈ ಅವರು ಮಾಡಿದ್ದಾರೆ. ಇದುವರೆಗೆ ರಾಜಕೀಯವಾಗಿ ಶಾಂತವಾಗಿದ್ದ ಬಂಟ್ವಾಳದಲ್ಲಿ ಹೊಸ ಸಂಚಲನವನ್ನು ಇದು ಉಂಟು ಮಾಡಿದೆ.

ನೇರಾನೇರ ಜಿದ್ದಾಜಿದ್ದಿಗೆ ಬಂಟ್ವಾಳ ಸಿದ್ಧವಾಗುತ್ತಿರುವ ಮುನ್ಸೂಚನೆ ನಿನ್ನೆಯ ಪತ್ರಿಕಾಗೋಷ್ಠಿ ನೀಡಿದೆ. ಈ ಮೂಲಕ ರಮಾನಾಥ ರೈ ರಾಜೇಶ್ ನಾಯಕ್ ವಿರುದ್ಧ ಹೋರಾಟದ ಮುನ್ಸೂಚನೆ ನೀಡಿದ್ದಾರೆ.

ಆದರೆ ಸಂಘಟನಾತ್ಮಕವಾಗಿ ಬಂಟ್ವಾಳದಲ್ಲಿ ಬಲಿಷ್ಠವಾಗಿರುವ ಬಿಜೆಪಿ ಇದಕ್ಕೆ ತಿರುಗೇಟು ನೀಡಲು ಸಿದ್ಧವಾಗುತ್ತಿದೆ ಎನ್ನಲಾಗುತ್ತಿದೆ.
ಬಂಟ್ವಾಳದ ಬಿಜೆಪಿ ಜಿಲ್ಲೆಯ ಇತರ ಬಿಜೆಪಿ ಗಳಿಗಿಂತ ತಿರುಗೇಟು ನೀಡುವಲ್ಲಿ ಸಿದ್ಧಹಸ್ತ ವಾಗಿದೆ. ಈ ದೃಷ್ಟಿಯಲ್ಲಿ ಬಂಟ್ವಾಳದಲ್ಲಿ ರಮಾನಾಥ ರೈ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಲು ಸಿದ್ಧವಾಗುತ್ತಿದೆ ಎಂದು ಆಂತರಿಕ ಮೂಲಗಳಿಂದ ತಿಳಿದುಬಂದಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರ ಕರ್ನಾಟಕದಲ್ಲಿ ಗಮನಸೆಳೆದ ಕ್ಷೇತ್ರ. ಈ ಬಾರಿ ರಮಾನಾಥ ರೈಯವರು ರಾಜೇಶ್ ನಾಯ್ಕ್ ಅವರ ಕಾರ್ಯವೈಖರಿಯ ಬಗ್ಗೆ ನೇರ ಆರೋಪ ಮಾಡಿದ್ದಾರೆ.
ಇದು ಅಭಿವೃದ್ಧಿಯ ಹಾಗೂ ಶಾಸಕರ ಕಾರ್ಯವೈಖರಿಯ ಮೇಲೆ ಚರ್ಚೆ ಶುರು ಮಾಡುವುದರಲ್ಲಿ ಅನುಮಾನವಿಲ್ಲ. ಆದರೆ ಬಿಜೆಪಿ ಈ ಚರ್ಚೆಗೆ ಉತ್ತರ ನೀಡುತ್ತಾ ಅಥವಾ ಬಿಜೆಪಿ ಹೊಸ ವಿಷಯವನ್ನು ಮುನ್ನೆಲೆಗೆ ತರುತ್ತದೆಯೋ ಎಂಬುದನ್ನು ಕಾದುನೋಡಬೇಕಾಗಿದೆ. ಒಟ್ಟಿನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಮುಂದಿನ ದಿನಗಳಲ್ಲಿ ರಾಜಕೀಯ ಜಿದ್ದಾಜಿದ್ದಿಯಲ್ಲಿ ಜಿಲ್ಲೆಯ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು