
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ವಾಷಿಂಗ್ಟನ್: ಕೊರೊನಾ ವ್ಯಾಧಿಯ ತುರ್ತು ಚಿಕಿತ್ಸೆಗೆ ಫೈಜರ್ ಕಂಪನಿ ಅಭಿವೃದ್ಧಿ ಪಡಿಸಿರುವ ‘ಪ್ಯಾಕ್ಸ್‌ಲೋವಿಡ್’ ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅನುಮತಿ ನೀಡಿದೆ.
ಓಮಿಕ್ರಾನ್ ಸೋಂಕಿನ ಪ್ರಸರಣ ವೇಗ ಶೇ. 73ರಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತು ಕ್ರಿಸ್‌ಮಸ್ ರಜೆಯ ಈ ದಿನಗಳಲ್ಲಿ ಜನರು ಸುತ್ತಾಡುವುದು ಹೆಚ್ಚಾಗುವ ಕಾರಣ ಎಫ್‌ಡಿಎ ಈ ಅನುಮತಿಯನ್ನು ನೀಡಿದ್ದು, ಕೋವಿಡ್ ರಿಸ್ಕ್ ಇರುವ 12 ವರ್ಷದ ಮೇಲ್ಪಟ್ಟವರು ಬಳಸಬಹುದಾಗಿದೆ.
‘ಪ್ಯಾಕ್ಸ್‌ಲೋವಿಡ್’ ಎರಡು ವಿಧದ ಮಾತ್ರೆಯಾಗಿದ್ದು, ಇದರ ಟ್ರಯಲ್‌ನಲ್ಲಿ ಕೋವಿಡ್ ಸೋಂಕಿತರು ಆಸ್ಪತ್ರೆ ಸೇರುವ ರಿಸ್ಕ್ ಮತ್ತು ಸಾವಿನ ಪ್ರಮಾಣವನ್ನು ಶೇ.88ರಷ್ಟು ಕಡಿಮೆ ಮಾಡಿದೆ. ಸಿಂಥೆಟಿಕ್ ಪ್ರತಿಕಾಯ ಚಿಕಿತ್ಸೆಗಿಂತ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕೋವಿಡ್ ಚಿಕಿತ್ಸೆಗೆ ಸುಲಭ ಪರಿಹಾರ ಆಗಿದೆ. ಏಕೆಂದರೆ ಸಿಂಥೆಟಿಕ್ ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.
ಫೈಜರ್ ಮಾತ್ರೆಯ ಉತ್ಪಾದನೆ ಹೆಚ್ಚಿಸಲು ಅನುಕೂಲವಾಗುವಂತೆ ಕಾನೂನನ್ನು ರೂಪಿಸುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಒಂದು ಕೋಟಿ ಮಾತ್ರೆಗಾಗಿ ಅಮೆರಿಕ 5.3 ಬಿಲಿಯನ್ ಡಾಲರ್ ವೆಚ್ಚ ಮಾಡುತ್ತಿದೆ. ಮೊದಲ ಹಂತದಲ್ಲಿ 2.65 ಲಕ್ಷ ಮಾತ್ರೆಗಳು ಜನವರಿಯಲ್ಲಿ ಮಾರುಕಟ್ಟೆಗೆ ಬರಲಿವೆ. ಉಳಿದ ಮಾತ್ರೆಗಳು ಬೇಸಿಗೆ ಹೊತ್ತಿಗೆ ಉತ್ಪಾದನೆ ಆಗಲಿದೆ ಎಂದು ಶ್ವೇತಭವನದ ಕೋವಿಡ್ ತಡೆ ವಿಭಾಗದ ಸಮನ್ವಯಕಾರ ಜೆಫ್ ಜಿಯೆಂಟ್ಸ್ ಹೇಳಿದ್ದಾರೆ.
ಯುರೋಪ್‌ನಲ್ಲೂ ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದ್ದು, ಇದನ್ನು ತಡೆಯಲು ಐರೋಪ್ಯ ಒಕ್ಕೂಟದ ಔಷಧ ನಿಯಂತ್ರಣ ಪ್ರಾಧಿಕಾರ ಕೂಡ ಫೈಜರ್ ಮಾತ್ರೆಯನ್ನು ಬಳಸಲು ಸದಸ್ಯ ರಾಷ್ಟ್ರಗಳು ತೀರ್ಮಾನಿಸಬಹುದು ಎಂದಿವೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್