ಬುಧವಾರ, ಮಾರ್ಚ್ 29, 2023
ಶೋಭಿತಾ ಜೊತೆ ಡೇಟಿಂಗ್‌, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಗಚೈತನ್ಯ-ಸಂಭಾವನೆಗಾಗಿ ಎಂದೂ ಬೇಡಬಾರದು: ನಟಿ ಸಮಂತಾ-ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ, 13ಕ್ಕೆ ಮತ ಎಣಿಕೆ: ಚುನಾವಣಾ ಆಯೋಗ ಘೋಷಣೆ-ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಮುಗಿಸಿದ ಪತ್ನಿ- ತನಿಖೆಯಲ್ಲಿ ಸತ್ಯ ಬಯಲು-ಮಂಗಳೂರು: ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿ ಆವರಣದಲ್ಲಿ ಕ್ರಿ.ಶ 1423 ಕಾಲದ ಶಾಸನ ಪತ್ತೆ-ಬೆಂಗಳೂರು: ಕಾರಿನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಮೃತದೇಹ ಪತ್ತೆ-ಉರ್ಫಿ ರೀತಿ ಮೈ ತೋರಿಸಿಕೊಂಡು ಓಡಾಡೋಕೆ ಧೈರ್ಯ ಇಲ್ಲ: ಟಾಂಗ್ ಕೊಟ್ಟ ಕರೀನಾ ಕಪೂರ್-ಕಳಪೆ ಗುಣಮಟ್ಟದ ಔಷಧಿ ತಯಾರಿಸಿದ 18 ಫಾರ್ಮಾ ಕಂಪೆನಿಗಳ ಲೈಸೆನ್ಸ್ ರದ್ದು..!-ನೀರಿನ ಆಳ ಪರೀಕ್ಷೆಗಿಳಿದು ಮೂವರು ವಿದ್ಯಾರ್ಥಿಗಳು ನೀರುಪಾಲು-ವಿಟ್ಲ: ತೆಂಗಿನ ಮರದಿಂದ ಬಿದ್ದ ವ್ಯಕ್ತಿ ಮೃತ್ಯು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಫೆ. 10ಕ್ಕೆ ಕೋಕಾ-ಕೋಲಾ ಕಂಪನಿಯ ಚೊಚ್ಚಲ ಮೊಬೈಲ್ ರಿಲೀಸ್

Twitter
Facebook
LinkedIn
WhatsApp
coca cola 1024x575 1

ವಿಶ್ವದಲ್ಲಿ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆ ಇಂದು ವಿಶಾಲವಾಗಿ ಬೆಳೆದು ನಿಂತಿದೆ. ಭರ್ಜರಿ ಬೇಡಿಕೆಯಲ್ಲಿರುವ ಮೊಬೈಲ್ ಮಾರುಕಟ್ಟೆಯಲ್ಲಿ ದಿನಕ್ಕೊಂದು ಫೋನ್ ಬಿಡುಗಡೆ ಆಗುತ್ತದೆ. ಇದರ ಜೊತೆಗೆ ಹೊಸ ಹೊಸ ಕಂಪನಿಗಳು ಕೂಡ ಹುಟ್ಟಿಗೊಳ್ಳುತ್ತಿದೆ. ಕಳೆದ ವರ್ಷ ನಥಿಂಗ್ ಎಂಬ ಕಂಪನಿ ತನ್ನ ಮೊಟ್ಟ ಮೊದಲ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್​ಫೋನ್ ಪರಿಚಯಿಸಿ ಮೋಡಿ ಮಾಡಿತ್ತು. ಇದೀಗ ಪ್ರಸಿದ್ಧ ಪಾನೀಯ ಸಂಸ್ಥೆ ಕೋಕಾ-ಕೋಲಾ (Coca-Cola) ತನ್ನ ಚೊಚ್ಚಲ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಾಗಿದೆ. ಸ್ಮಾರ್ಟ್‌ಫೋನ್‌ ತಯಾರಿಕಾ ರಿಯಲ್ ಮಿ ಬ್ರ್ಯಾಂಡ್ ಜೊತೆ ಕೈಜೋಡಿಸಿರುವ ಕೋಲಾ ಭಾರತದಲ್ಲಿ ಫೆಬ್ರವರಿ 10 ರಂದು ನೂತನ ಮೊಬೈಲ್ ಬಿಡುಗಡೆ ಮಾಡಲಿದೆ.

ರಿಯಲ್ ಮಿ ಜೊತೆ ಕೈ ಜೋಡಿಸಿರುವುದರಿಂದ ಈ ಹೊಸ ಸ್ಮಾರ್ಟ್‌ಫೋನ್‌ಗೆ ರಿಯಲ್‌ ಮಿ 10 ಪ್ರೊ ಎಂದು ಹೆಸರಿಡಲಿಲಾಗಿದೆ. ಸೋರಿಕೆಯಾದ ಚಿತ್ರಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ನ ರಿಯರ್‌ ಪ್ಯಾನೆಲ್ ವಿನ್ಯಾಸದಲ್ಲಿ ಡ್ಯುಯಲ್ ಟೋನ್ ಅನ್ನು ಪಡೆದುಕೊಂಡಿದೆ. ಅಂದರೆ ರಿಯರ್‌ ಪ್ಯಾನೆಲ್‌ನ ಮೂರನೇ ಒಂದು ಭಾಗವು ಕಪ್ಪು ಬಣ್ಣದಿಂದ ಕೂಡಿದೆ. ಹಾಗೆಯೇ ಉಳಿದ ಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಇದರ ಮೇಲೆ ಕೋಕ-ಕೋಲಾ ಬ್ರ್ಯಾಂಡಿಂಗ್ ಅನ್ನು ಸ್ಲ್ಯಾಪ್ ಮಾಡಲಾಗಿದೆ.

ರಿಯಲ್‌ ಮಿ 10 ಪ್ರೊ 5G ಫೀಚರ್ಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಮೂಲಗಳ ಪ್ರಕಾರ ಇದು 6.72 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್‌ ನೀಡಲಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಹಾಗೆಯೇ ರಿಯರ್‌ ಡ್ಯುಯಲ್ ಕ್ಯಾಮೆರಾ ರಚನೆ ಇದರಲ್ಲಿದ್ದು, 108 ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮೆರಾ ಸೆನ್ಸರ್‌ ಹಾಗೂ 2MP ಮ್ಯಾಕ್ರೋ ಸೆನ್ಸರ್‌ ಆಯ್ಕೆ ಇದೆ. ಇನ್ನು ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನಿನ ಬೆಲೆ 20,000 ರೂ. ಒಳಗಡೆ ಇರಬಹುದು ಎಂದು ಊಹಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ