- ರಾಷ್ಟ್ರೀಯ
- 11:57 ಫೂರ್ವಾಹ್ನ
- ಮಾರ್ಚ್ 15, 2023
ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಶವ ಪತ್ತೆ – 21ರ ಮಗಳು ಪೊಲೀಸರ ವಶಕ್ಕೆ
Twitter
Facebook
LinkedIn
WhatsApp

ಮುಂಬೈ: ಪ್ಲಾಸ್ಟಿಕ್ ಚೀಲದೊಳಗೆ (Plastic Bag) 53 ವರ್ಷದ ಮಹಿಳೆಯ (Woman) ಶವವೊಂದು ಪತ್ತೆಯಾದ ಘಟನೆ ಮುಂಬೈನ (Mumbai) ಲಾಲ್‍ಬಾಗ್ ಪ್ರದೇಶದಲ್ಲಿ ನಡೆದಿದೆ.
ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಸಹೋದರ ಹಾಗೂ ಸೋದರಳಿಯ ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಪಾರ್ಟ್‍ಮೆಂಟ್‍ನಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಮಹಿಳೆಗೆ 21 ವರ್ಷದ ಮಗಳಿದ್ದು (Daughter), ಆಕೆ ಮಹಿಳೆಯನ್ನು ತಿಂಗಳುಗಟ್ಟಲೆ ಬಚ್ಚಲಲ್ಲಿ ಬೀಗ ಹಾಕಿ ನಂತ ಅವಳನ್ನು ಕೊಂದ ಆರೋಪಗಳು ಇವೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಶವ ಪತ್ತೆಯಾದ ಬೆನ್ನಲ್ಲೇ ಮಹಿಳೆಯ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.