ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೇವರು ಹೆಚ್ಚು ಪ್ರೀತಿಸುವ ನಾಡು ಕರ್ನಾಟಕ: ಸಿಎಂ ಬೊಮ್ಮಾಯಿ

Twitter
Facebook
LinkedIn
WhatsApp
cu dp 1674061508

ಚಿಕ್ಕಮಗಳೂರು(ಜ.19): ಕಲೆಯ ಸಾಂಸ್ಕೃತಿಕ ಸಿರಿ ಹೊಂದಿರುವ ಕರ್ನಾಟಕ ದೇವರುವ ಅತ್ಯಂತ ಹೆಚ್ಚು ಪ್ರೀತಿಸುವ ನಾಡು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಬಣ್ಣಿಸಿದರು. ನಗರದ ಜಿಲ್ಲಾ ಆಟದ ಮೈದಾನದಲ್ಲಿ ಇಂದು ಸಂಜೆ  ಆಯೋಜನೆಗೊಂಡಿದ್ದ ಚಿಕ್ಕಮಗಳೂರು ಹಬ್ಬ ಉದ್ಘಾಟಿಸಿ ಮಾತನಾಡಿದರು. ಕಲೆ, ಸಾಹಿತ್ಯದ ತವರುರಾದ ಚಿಕ್ಕಮಗಳೂರಲ್ಲಿ ಪಂಚ ಜೀವ ನದಿಗಳಿವೆ. ಶೃಂಗೇರಿಯಲ್ಲಿ ಶಾರದಾಂಬೆ, ತಾಯಿ ಅನ್ನಪೂರ್ಣೆ ನೆಲೆಸಿರುವ ನೆಲವೀಡು. ಇಂಥ ಪುಣ್ಯಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬರು ಧನ್ಯರು ಎಂದು ಮಲೆನಾಡ ಗುಣ ಮೌಲ್ಯ ಶ್ಳಾಘಿಸಿದರು. ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳು ಪ್ರವಾಸೋದ್ಯಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅವಕಾಶಗಳು ಇವೆ. ಅದ್ದರಿಂದ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಸ್ವಿಜರ್ ಲ್ಯಾಂಡ್ ಮಾದರಿಯಲ್ಲಿ ಈ ಎರಡು ಜಿಲ್ಲೆಗಳನ್ನು ಪ್ರವಾಸೋದ್ಯಮದಲ್ಲಿ ಬೆಳೆಸಬೇಕೆಂಬ ಇಚ್ಛೆ ನನ್ನದಾಗಿದೆ. ಇದಕ್ಕೆ ಬೇಕಾಗುವಷ್ಟು ಹಣವನ್ನು ಕೊಡುತ್ತೇನೆ. ತಡ ಮಾಡದೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಹೆಸರು ಚಿಕ್ಕದಾಗಿದ್ದರೂ ಇದರ ಖ್ಯಾತಿ ದೊಡ್ಡದು: 

ಇಡೀ ದೇಶದಲ್ಲಿ  ದೇವರು ಅತ್ಯಂತ ಪ್ರೀತಿ ಮಾಡುವ ರಾಜ್ಯ ಕರ್ನಾಟಕ. ಅಷ್ಟು ನಿಸರ್ಗ ನಮ್ಮ ರಾಜ್ಯಕ್ಕೆ ಕಾಣಿಕೆ ಕೊಟ್ಟಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಕವಿಗಳು ಹುಟ್ಟಿದ್ದಾರೆ, ಈ ನಾಡನ್ನು ಹಾಡಿ ಹೊಗಳಿದ್ದಾರೆ, ಕುವೆಂಪುರವರ ಹುಟ್ಟೂರು, ನಿಸರ್ಗ ಇರುವ ಕಡೆ ದೇವರು ನೆಲೆಸಿರುತ್ತಾರೆ.ನೀವೆಲ್ಲರೂ ಪುಣ್ಯವಂತರು. ಹೆಸರು ಚಿಕ್ಕದಾಗಿದ್ದರೂ ಇದರ ಖ್ಯಾತಿ ದೊಡ್ಡದಾಗಿದೆ. ಪಂಚ ನದಿಗಳು ಹುಟ್ಟಿರುವ ಏಕೈಕ ಜಿಲ್ಲೆ ಇದಾಗಿದೆ, ಇಡೀ ಕನ್ನಡ ನಾಡಿಗೆ ಈ ಜಿಲ್ಲೆ ಕೊಡುಗೆ ನೀಡದೆ ಎಂದ ಅವರು, ಪಶ್ಚಿಮಘಟ್ಟ ಉಳಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.ಹೊಯ್ಸಳ ಸಾಮ್ರಾಜ್ಯ ಸ್ಥಾಪನೆಯಾಗಿರುವ ನಾಡು. ಕಲೆ, ಸಂಸ್ಕೃತಿ ಜಗತ್ ಪ್ರಸಿದ್ಧಿಯಾಗಿದೆ.  ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ನಾಗಲಾಂಬಿಕೆ, ಶೃಂಗೇರಿಯ ಶಾರದಾಂಬೆಯ ನೆಲೆಬೀಡು 21ನೇ ಶತಮಾನದ ಶತಮಾನ, ಇಲ್ಲಿಂದ eನದ ಹೊಳೆ ಇಡೀ ವಿಶ್ವಕ್ಕೆ ಹರಡಿದೆ. ಅದರ ನೆರಳಿಲ್ಲಿರುವ ನೀವುಗಳು ಪುಣ್ಯವಂತರು. ಹೊಟ್ಟಿ ಮತ್ತು ನೆತ್ತಿ ತಣ್ಣಿಗೆ ಇರಬೇಕು, ಅನ್ನಪೂರ್ಣೇಶ್ವರಿ, eನ ಕೊಡುವ ಶಾರದಾಂಬೆ, ಇವೆರಡು ದೇಗುಲಗಳು ಈ ನಾಡಿನಲ್ಲಿವೆ ಎಂದರುಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ  ಮಲೆನಾಡು ಬಯಲುಸೀಮೆ ಒಳಗೊಂಡ ಸುಂದರವಾದ ಸಿರಿಯನ್ನು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು ಎಂದರು.

ಈ ಬಾರಿ ಸಿ.ಟಿ. ರವಿ ಅವರಿಗೆ ಆಶೀರ್ವಾದ ಮಾಡಬೇಕು, ಪ್ರಾಮಾಣಿಕವಾಗಿ ಅವರು, ಈ ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದ ಅವರು, ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ. ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಶಾಸಕ ಸಿ. ಟಿ ರವಿ  ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಇಂಧನ ಸಚಿವ ವಿ. ಸುನಿಲ್ ಕುಮಾರ್, ವಿಧಾಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಡಿ.ಎಸ್. ಸುರೇಶ್, ಎಸ್.ಎಲ್. ಭೋಜೇಗೌಡ, ಡಾ. ಪುನೀತ್ ರಾಜ್ಕುಮಾರ್ ರವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವಾ, ರೋನಾಲ್ಡ್ ಕೊಲೋಸೋ, ಉದ್ಯಮಿ ಕಿಶೋರ್ಕುಮಾರ್ ಹೆಗ್ಡೆ, ಜಾನಪದ ಕೋಗಿಲೆ ಮುಗುಳಿ ಲಕ್ಷ್ಮೀದೇವಮ್ಮ, ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ ಉಪಸ್ಥಿತರಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ