
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಶಿವಮೊಗ್ಗ: ತನ್ನನ್ನು ಪ್ರೀತಿ ಮಾಡುವಂತೆ ಬೆನ್ನಿಗೆ ಬಿದ್ದಿದ್ದ ಯುವಕನಿಂದ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕರಿಮನೆ ಗ್ರಾಮದಲ್ಲಿ ನಡೆದಿದೆ.
ಹೊಸನಗರ ತಾಲೂಕಿನ ಸಹನಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸಹನಾ ಹೊಸ ನಗರದ ಹೋಲಿ ರೆಡಿಮೆಡ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ಪ್ರಶಾಂತ್ ಕನ್ನಳ್ಳಿಯ ನಿವಾಸಿಯಾಗಿದ್ದು, ತನ್ನನ್ನು ಪ್ರೀತಿಸುವಂತೆ ಆಗಾಗ ಸಹಾನ ಫೋನ್‍ಗೆ ಕರೆ ಮಾಡಿ ಪದೇ ಪದೇ ಪೀಡಿಸುತ್ತಿದ್ದ. ಈ ಬಗ್ಗೆ ಮೃತ ಸಹನಾ ಕೂಡ ತನ್ನ ತಾಯಿಯ ಜೊತೆ ಹೇಳಿಕೊಂಡಿದ್ದಳು. ನಂತರ ಸಹನಾಳ ತಂದೆ ತಾಯಿ ಪ್ರಶಾಂತ್ಗೆ ತನ್ನ ಮಗಳಿಗೆ ಫೋನ್ ಮಾಡಬೇಡ, ಅವಳ ಹಿಂದೆ ಹೋಗಬೇಡ ಎಂದು ಬುದ್ದಿ ಹೇಳಿದ್ದರು. ಬುದ್ದಿ ಹೇಳಿದ ಬಳಿಕವೂ ಪ್ರಶಾಂತ್ ತನ್ನ ಚಾಳಿಯನ್ನು ಮುಂದುವರಿಸಿದ್ದ. ಇದರಿಂದ ಬೇಸತ್ತ ಸಹನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನಮ್ಮ ಮಗಳ ಆತ್ಮಹತ್ಯೆಗೆ ಪ್ರಶಾಂತ್ ಕಾರಣ ಎಂದು ಸಹನಾ ಪೋಷಕರಾದ ಸುಧಾಕರ್ ಹಾಗೂ ಮಮತ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಹನಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಪ್ರಶಾಂತ್ ಕಾಣೆ ಯಾಗಿದ್ದಾನೆ. ಈ ಬಗ್ಗೆ ಹೊಸನಗರ ಪೊಲೀಸರು ತನಿಖೆ ಆರಂಭಿಸಿದ್ದು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್