
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಜಗತ್ ಪ್ರಸಿದ್ಧಿಯನ್ನು ಹೊಂದಿದ ತಾಜ್ಮಹಲ್ನ್ನೇ ಹೋಲುವ ಭವ್ಯ ಮನೆಯೊಂದನ್ನು ಮಧ್ಯ ಪ್ರದೇಶದ ಬುರ್ಹಾನ್ಪುರದಲ್ಲಿ ನಿರ್ಮಾಣ ಮಾಡಲಾಗಿದೆ. ಮೊಘಲರ ರಾಜ ಶೆಹಜಹಾನ್ನಿಂದ ನಿರ್ಮಾಣಗೊಂಡ ತಾಜ್ಮಹಲ್ ಪ್ರೀತಿಯ ಸಂಕೇತವಾಗಿದೆ.. ಪ್ರೀತಿಯ ಮಡದಿಗೆ ತಾಜ್-ಮಹಲನ್ನೇ ಉಡುಗೊರೆಯಾಗಿ ಕೊಡವ ಸಾಹಸಕ್ಕೆ ಇಳಿದಿದ್ದರು ಈ ಉದ್ಯಮಿ.
ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್‍ಮಹಲನ್ನು ಮೊಘಲ್ ಚಕ್ರವರ್ತಿಯಾದ ಷಹಜಹಾನ್ ತನ್ನ ಮಡದಿ ಮುಮ್ತಾಜ್ ನೆನಪಿಗಾಗಿ ನಿರ್ಮಿಸಿದನು. ಇದೊಂದು ಗೋರಿಯಾಗಿದ್ದು, ಪ್ರೇಮದ ಅಮರತ್ವವನ್ನು ಸಾರುವ ಸ್ಮಾರಕವು ಭಾರತೀಯ, ಪರ್ಶಿಯನ್ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ಅಪೂರ್ವ ಸಮ್ಮಿಲನದ ಮಾದರಿಯಾಗಿ ನಿಂತಿದೆ.
ಬುರ್ಹಾನ್ಪುರ ನಿವಾಸಿಯಾದ ಆನಂದ್ ಚೋಕ್ಸೆ ಶೆಹಜಹಾನ್ ಪತ್ನಿ ಮುಮ್ತಾಜ್ ಬುರ್ಹಾನ್ಪುರದಲ್ಲೇ ಸಾವನ್ನಪ್ಪಿದ್ದರೂ ಸಹ ಯಾಕೆ ತಮ್ಮ ಊರಿನಲ್ಲಿ ತಾಜ್ಮಹಲ್ ನಿರ್ಮಾಣ ಮಾಡಿಲ್ಲ ಎಂದು ಎಂದಿಗೂ ಯೋಚಿಸುತ್ತಿದ್ದರಂತೆ. ಮೊದಲು ತಾಜ್ಮಹಲ್ನ್ನು ತಪ್ತಿ ನದಿಯ ದಡದಲ್ಲೇ ನಿರ್ಮಾಣ ಮಾಡೋದಾಗಿ ಚಿಂತಿಸಿದ್ದ ಶಹಜಹಾನ ತದನಂತರ ಆಗ್ರಾದಲ್ಲಿ ನಿರ್ಮಾಣ ಮಾಡುವ ಮನಸ್ಸು ಮಾಡಲಾಯ್ತು ಎನ್ನುತ್ತಾರೆ ಇವರು.
4 ಮಲಗುವ ಕೋಣೆಯನ್ನು ಹೊಂದಿರುವ ಈ ತಾಜ್ ಮಹಲ್ ಮಾದರಿಯ ಮನೆಯನ್ನು ನಿರ್ಮಾಣ ಮಾಡಲು ಮೂರು ವರ್ಷ ತೆಗೆದುಕೊಳ್ಳಲಾಗಿದೆ. ನಿಜವಾದ ತಾಜ್ಮಹಲ್ನ್ನು ತುಂಬಾ ಗಾಢವಾಗಿ ಅಧ್ಯಯನ ಮಾಡಿ ಇಂಜಿನಿಯರ್’ಗಳು ಈ ಭವ್ಯ ಮನೆಯ ತಯಾರಿಯನ್ನು ನಡೆಸಿದ್ದರು. ಬಂಗಾಳ ಹಾಗೂ ಇಂದೋರ್ನ ಕಲಾವಿದರ ಸಹಾಯವನ್ನು ಪಡೆದು ಈ ತಾಜ್ ಮಹಲ್ ಮನೆಯನ್ನು ನಿರ್ಮಿಸಲಾಗಿದೆ. ಇಲ್ಲಿ ದೊಡ್ಡ ಹಾಲ್, ಕೆಳಗಿನ ಅಂತಸ್ತಿನಲ್ಲಿ 2 ಮಲಗುವ ಕೋಣೆ , ಮೇಲಿನ ಅಂತಸ್ತಿನಲ್ಲಿ 2 ಮಲಗುವ ಕೋಣೆ, 1 ಲೈಬ್ರರಿ ಹಾಗೂ ಒಂದು ಪ್ರಾರ್ಥನಾ ಮಂದಿರವನ್ನು ಇಡಲಾಗಿದೆ. ಈ ಮನೆಯ ಲೈಟಿಂಗ್ ವ್ಯವಸ್ಥೆ ಯಾವ ರೀತಿ ಮಾಡಲಾಗಿದೆ ಅಂದರೆ ಅದು ರಾತ್ರಿ ವೇಳೆ ತಾಜ್ಮಹಲ್ನಂತೆಯೇ ಪ್ರಜ್ವಲಿಸುತ್ತದೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್