ಮಂಗಳವಾರ, ಮೇ 30, 2023
ಹಾವನ್ನು ಸೆರೆ ಹಿಡಿಯಲು ಹೋದಾಗ ನಾಗರ ಹಾವು ಕಚ್ಚಿ ಸ್ನೇಕ್ ನರೇಶ್ ಸಾವು!-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ; ಪದಕಗಳನ್ನು ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ-ಕ್ರೋಮಿಂಗ್ ಟ್ರೆಂಡ್ ಗೆ ಬಲಿಯಾದ 13 ವರ್ಷದ ಬಾಲಕಿ! ಬ್ಲೂವೇಲ್ ರೀತಿಯ ಈ ಗೇಮಿಂಗ್ ಯಾವುದು?-ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಡಿದು ವಿದ್ಯಾರ್ಥಿನಿ ಸಾವು-ಮಹಿಳೆಯರಿಗೂ ಕಂಬಳದಲ್ಲಿ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ-ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ನಟಿ ಇರಾ ಖಾನ್‌-ಉಡುಪಿ : ಗೇರುಬೀಜ ಸಾಗಾಟದ ಲಾರಿ ಪಲ್ಟಿ ಅಪಾಯದಿಂದ ಪಾರಾದ ಚಾಲಕ-ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಮುಗಿಸಿದ ಪತ್ನಿ- ತನಿಖೆಯಲ್ಲಿ ಸತ್ಯ ಬಯಲು

Twitter
Facebook
LinkedIn
WhatsApp
All about coconut tree 6
ದಾವಣಗೆರೆ: ಮಾ.23 ರಂದು ದಾವಣಗೆರೆ (Davanagere) ರಿಂಗ್ ರಸ್ತೆಯಲ್ಲಿ ಮಹಾಂತೇಶ್ (35) ಎಂಬ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣದ ಸತ್ಯ ತನಿಖೆಯಿಂದ ಹೊರಬಿದ್ದಿದೆ. ಪತ್ನಿ ಶ್ವೇತಾ (27) ಸಂಚು ರೂಪಿಸಿ ಪ್ರಿಯಕರ ಚಂದ್ರಶೇಖರ್ (28) ಜೊತೆ ಸೇರಿ ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.

ಆರೋಪಿ ಚಂದ್ರಶೇಖರ್ ರಾತ್ರಿ ವೇಳೆ ಮಹಾಂತೇಶ್‍ನನ್ನ ಕರೆದುಕೊಂಡು ಹೋಗಿ ಮದ್ಯದಲ್ಲಿ ನಿದ್ರೆ ಮಾತ್ರೆ ಸೇರಿಸಿ ಕುಡಿಸಿ ಹತ್ಯೆ ಮಾಡಿದ್ದ. ನಂತರ ಶವದ ಮೇಲೆ ಕಾರದಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕುತ್ತಿಗೆ ಕತ್ತರಿಸಿದ್ದ. 

ಹತ್ಯೆಯಾದ ಮಹಾಂತೇಶ್ ಹಾವೇರಿ ಜಿಲ್ಲೆಯ ಹಾನಗಲ್ (Hangal) ತಾಲೂಕಿನ ಬೈಚವಳ್ಳಿ ಗ್ರಾಮದ ನಿವಾಸಿ. ದಾವಣಗೆರೆಯಲ್ಲಿ ಕಟಿಂಗ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ.

ಶ್ವೇತಾ, ಮೆಡಿಕಲ್ ರೆಪ್ (Medical Representative) ಆಗಿದ್ದ ಬಾಲ್ಯ ಸ್ನೇಹಿತ ಚಂದ್ರಶೇಖರ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ವಿದ್ಯಾನಗರ (Vidyanagar) ಠಾಣೆ ಪೊಲೀಸರು ಕೊಲೆ ರಹಸ್ಯವನ್ನು ಬಯಲಿಗೆಳೆದಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ