- ರಾಜ್ಯ
- 2:26 ಅಪರಾಹ್ನ
- ಜನವರಿ 31, 2023
ಪ್ರಧಾನಿ, ರಾಷ್ಟ್ರಪತಿ ಮಾಡುತ್ತೇವೆ ಎಂದರೂ ನಾನು ಬಿಜೆಪಿಗೆ ಸೇರಲಾರೆ: ಸಿದ್ದರಾಮಯ್ಯ
Twitter
Facebook
LinkedIn
WhatsApp

ರಾಮನಗರ: “ಬಿಜೆಪಿಯವರು ನನ್ನನ್ನು ಪ್ರಧಾನಿ ಅಥವಾ ರಾಷ್ಟ್ರಪತಿ ಮಾಡುತ್ತೇವೆ ಎಂದರೂ ನಾನು ಬಿಜೆಪಿ ಸೇರಲಾರೆ. ನನ್ನ ಹೆಣವೂ ಕೂಡ ಆರೆಸ್ಸೆಸ್ ಜೊತೆಗೆ ಹೋಗಲು ಸಾಧ್ಯವಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳು ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸುತ್ತವೆ.
ಜೆಡಿಎಸ್‌ಗೆ ಯಾವುದೇ ಸಿದ್ಧಾಂತ ಅಥವಾ ಅರ್ಹತೆ ಇಲ್ಲ. ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಅವರು ಕೈಜೋಡಿಸುತ್ತಾರೆ ಎಂದು ತಿಳಿಸಿದರು.