
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾರಣಾಂತಿಕ ಬೆದರಿಕೆಯೊಂದಿಗೆ ದೂರವಾಣಿ ಕರೆ ಮಾಡಿದ 22 ವರ್ಷದ ಯುವಕನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ಸಲ್ಮಾನ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ನಿನ್ನೆ ರಾತ್ರಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಶಾನ್ಯ ದೆಹಲಿಯ ಖಜೂರಿ ಖಾಸ್ ಪೊಲೀಸ್ ಠಾಣೆಯ ಪೊಲೀಸರು ಆತನನ್ನು ಬಂಧಿಸಿ ದೆಹಲಿ ಪೊಲೀಸರ ಹಿರಿಯ ಅಧಿಕಾರಿಗಳು ಪ್ರಶ್ನಿಸಿ ಆತನ ಬಗ್ಗೆ ತಿಳಿಸಿದ್ದಾರೆ.
ಸಲ್ಮಾನ್ ಅವರ ವಿರುದ್ಧ ಹಲವಾರು ಪ್ರಕರಣಗಳಿವೆ ಮತ್ತು ಜಾಮೀನಿನಿಂದ ಹೊರಬಂದಿದ್ದಾನೆ ಎಂದು ಪೊಲೀಸರು ಪ್ರಶ್ನಿಸಿದಾಗ ತಿಳಿದುಬಂದಿದೆ. ಈತ ಮತ್ತೆ ಜೈಲಿಗೆ ಮರಳುವ ಸಲುವಾಗಿ ಬೆದರಿಕೆ ಕರೆ ಮಾಡಿದ್ದಾನೆ.
ಕಳೆದ ವರ್ಷ ಜನವರಿಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾರಣಾಂತಿಕ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಉದ್ದೇಶಿತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಅವರು ಆನ್‌ಲೈನ್‌ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್