- ಅಂತಾರಾಷ್ಟ್ರೀಯ
- 4:09 ಅಪರಾಹ್ನ
- ಮೇ 24, 2023
ಪೆಟ್ರೋಲ್ ಹಾಕಿಸಿ 2000 ರೂ ನೋಟ್ ನೀಡಿದ್ದಕ್ಕೆ ಗ್ರಾಹಕನ ಸ್ಕೂಟರ್ ನಿಂದ ಪೆಟ್ರೋಲನ್ನೆ ಹೊರ ತೆಗೆದ ಸಿಬ್ಬಂದಿ!
Twitter
Facebook
LinkedIn
WhatsApp

ಲಕ್ನೋ: ಆರ್ ಬಿಐಯ 2000 ರೂ. ನೋಟು ಬದಲಾವಣೆ ನಿಯಮದಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ನೋಟು ಎಕ್ಸ್ ಚೆಂಜ್ ಮಾಡಿಕೊಳ್ಳಲು ಸೆ.30 ರವರೆಗೆ ಸಮಯವನ್ನು ನೀಡಿದೆ. ಆದರೆ ಜನ ಇನ್ನು ಕೂಡ ಒಂದಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.
2000 ರೂ.ನೋಟು ಕೊಟ್ಟದ್ದಕ್ಕಾಗಿ ವ್ಯಕ್ತಿಯೊಬ್ಬ ಪಜೀತಿಗೆ ಸಿಲುಕಿರುವ ಘಟನೆ ತಾರ್ ಪ್ರದೇಶದ ಜಲೌನ್ ನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದಾನೆ. ಪೆಟ್ರೋಲ್ ಹಾಕಿದ ಬಳಿಕ 2000 ರೂ. ನೋಟನ್ನು ಸಿಬ್ಬಂದಿಗೆ ನೀಡಿದ್ದಾನೆ. ಸಿಬ್ಬಂದಿ ಚಿಲ್ಲರೆ ಇಲ್ಲದೆ ಹಾಗೂ ಸದ್ಯ 2 ಸಾವಿರ ನೋಟಿನ ಬಗ್ಗೆ ನಡೆಯುತ್ತಿರುವ ಸ್ಥಿತಿಯ ಬಗ್ಗೆ ಅರಿತು, ಸ್ಕೂಟರ್ ಗೆ ಹಾಕಿದ ಪೆಟ್ರೋಲ್ ನ್ನು ಸಣ್ಣ ಪೈಪ್ ವೊಂದನ್ನು ಬಳಸಿ ಹೊರಕೆ ತೆಗೆದಿದ್ದಾನೆ.
ನಿಗರ್ ಪರ್ವೀನ್ ಎನ್ನುವವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಪೊಲೀಸರು ಹೇಳಿದ್ದಾರೆ.