ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಜೆಪಿ ಬೀದಿ ರಂಪಾಟ ಟ್ರೇಲರ್ ಅಷ್ಟೇ, ಪಿಚ್ಚರ್ ಅಭಿ ಬಾಕಿ ಹೈ..: ಬಿ.ಕೆ.ಹರಿಪ್ರಸಾದ್ ಲೇವಡಿ

Twitter
Facebook
LinkedIn
WhatsApp
download 5 1

ಬೆಂಗಳೂರು, ಜ. 15: ‘ಸ್ವಯಂ ಘೋಷಿತ ಶಿಸ್ತಿನ ಪಕ್ಷದ ಬೀದಿ ರಂಪಾಟ ರಾಜ್ಯದ ಜನರಿಗೆ ಮನರಂಜನೆಯ ‘ಸಂತೋಷ’ ಕೂಟ ಏರ್ಪಡಿಸಿದೆ. ಸ್ವಪಕ್ಷದ ನಾಯಕರಿಗೆ ಬಿರುದು ಬಾವಲಿಗಳ ಸುರಿಮಳೆ ಆಗುತ್ತಿದೆ. ಇದೊಂದು ಟ್ರೇಲರ್ ಅಷ್ಟೇ, ಬತ್ತಳಿಕೆಯ ಬಾಣಗಳು ಮತ್ತಷ್ಟು ‘ಸಂತೋಷ’ ಪಡಿಸುತ್ತದೆ ಕಾದು ನೋಡಿ’ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸರ್ಕಸ್‍ನಲ್ಲಿ ಪ್ರಾಣಿಗಳನ್ನ ತರಬೇತಿ ನೀಡಿ ಮೂಗುದಾರ ಹಾಕಿ ಮನರಂಜನೆ ಮಾಡಬಹುದು, ಅಪ್ಪಿತಪ್ಪಿ ಬಿಟ್ರೆ ಎಲ್ಲರನ್ನೂ ತಿಂದು ಹಾಕುತ್ತದೆ. ಬಿಜೆಪಿಯಲ್ಲಿ ಈಗಾಗುತ್ತಿರುವುದು ಅದೇ. ಕೊಲೆಗಡುಕತನ, ಪಿಂಪ್ ದಂಧೆ, ಹಫ್ತಾ ವಸೂಲಿ ತನ್ನವರನ್ನೂ ಬಿಡದೆ ತಿನ್ನುತ್ತಿದೆ. ಮೂಗುದಾರ ತಪ್ಪಿಯಾಗಿದೆ, ಹತ್ತೋಟಿಯಲ್ಲಿಡಲು ಸಾಧ್ಯವೇ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಬಿಜೆಪಿಯಲ್ಲಿ ಮೇಲೆಲ್ಲಾ ತಳಕು-ಬಳಕು-ಕೊಳಕು ನಾರುತ್ತಿದೆ. ಕಾಂಗ್ರೆಸ್ ತಟ್ಟೆಯಲ್ಲಿ ನೊಣ ಹುಡುಕದೇ, ನಿಮ್ಮಲ್ಲಿ ಹೆಗ್ಗಣ ಬಿದ್ದು ವಿಲ ವಿಲ ಒದ್ದಾಡುತ್ತಿದೆ ಒಮ್ಮೆ ಕಣ್ಣಾಡಿಸಿ. ಸರಕಾರ ಮ್ಯಾನೇಜ್ ಮಾಡುವ ಸಿಎಂ, ಪಕ್ಷದ ಮೇಲೆ ಹಿಡಿತವಿಲ್ಲದ ಕಾಮಿಡಿಯನ್ ಅಧ್ಯಕ್ಷರಾಗಿರುವಾಗ ಹಾದಿ ಬೀದಿಯಲ್ಲಿ ಹೊಡೆದಾಡುವಂತಾಗಿದೆ’ ಎಂದು ಅವರು ಟೀಕಿಸಿದ್ದಾರೆ.

‘ಸಿಎಂ ಆಗಲು ಎರಡುವರೆ ಸಾವಿರ ಕೋಟಿ ರೂ.ಹಣದ ಬೇಡಿಕೆ, ಮಂತ್ರಿಯಾಗಲು ಪಿಂಪ್ ಕೆಲಸ, ಸಿಡಿ ಬಿಡುಗಡೆಯ ಬೆದರಿಕೆ. ಮಾಜಿ ಸಿಎಂ ಮಗನ ದೃಷ್ಠವತಾರಗಳು. ಈ ಆರೋಪಗಳು ಕೇಂದ್ರದ ಮಾಜಿ ಮಂತ್ರಿ ಯತ್ನಾಳ್ ಸ್ವಪಕ್ಷದವರ ಮೇಲೆ ಎಗರಿ ಬಿದ್ದ ಪರಿ. ಅಕ್ರಮ ಹಣ ದಂಧೆಗಳ ಬಗ್ಗೆ ಸಿಬಿಐ, ಇಡಿ, ಐಟಿ ಎಲ್ಲವೂ ದಿಲ್ಲಿಯ ಚಳಿಯಲ್ಲಿ ಬೆಚ್ಚಗೆ ಕಾವು ಪಡೆಯುತ್ತಿರಬೇಕು’ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

‘ಬಿಜೆಪಿಯಲ್ಲಿ ಡ್ರೈವರ್ ಗಳನ್ನು ಕೊಲೆ ಮಾಡುವುದು ರೂಢಿಯಾಗುತ್ತಿದೆ. ಸಚಿವ ನಿರಾಣಿಯವರ ಮಾತಿನ ಮರ್ಮವೇನು? ಯತ್ನಾಳ್ ಅವರ ಡ್ರೈವರ್ ಕುಮಾರ್ ಕೊಲೆಯಾದದ್ದು ಹೇಗೆ? ಯಾವಾಗಾ? ಮುಚ್ಚಿಟ್ಟಿದ್ಯಾರು?, ಇದು ಮಂಗಳೂರಿನ ಪ್ರವೀಣ್ ನೆಟ್ಟಾರು ಕೊಲೆ ಮಾದರಿಯಂತಿದೆ. ಮಂಪರು ಪರೀಕ್ಷೆ ನಡೆದರೆ ಮಾತ್ರ ಸತ್ಯ ಬಹಿರಂಗವಾಗಲು ಸಾಧ್ಯ’ ಎಂದು ಅವರು ಆಗ್ರಹಿಸಿದ್ದಾರೆ.

‘ಶಾಸಕ ಯೋಗೇಶ್ವರ್ ಆಡಿಯೋದಲ್ಲಿ ವಿಶೇಷವೇನಿಲ್ಲ. ಕೊಲೆ ಪ್ರಕರಣದಲ್ಲಿ ನ್ಯಾಯಾಲಯವೇ ಛೀಮಾರಿ ಹಾಕಿ ಗಡಿ ಪಾರದ ಕೇಂದ್ರ ಗೃಹ ಸಚಿವರು ರೌಡಿಯಲ್ಲದೆ ಮತ್ತೇನು? ಅಧಿಕಾರಕ್ಕೇರಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕರಿಗೆ ಮನದಟ್ಟಾಗಿದೆ. ಹೀಗಾಗಿ ಆಪರೇಷನ್ ಕಮಲಾಸೂರರು ರಾಜ್ಯಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಜನ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

‘ಬಿಜೆಪಿಗೆ ಬಿಜೆಪಿಯೇ ಶತೃವಾಗಿದೆ. ಜನಾದೇಶ ಈಗಾಗಲೇ ಸ್ಪಷ್ಟವಾಗಿದೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವಂತೆ ಬಿಜೆಪಿ ನಾಯಕರು ಟ್ರೇಲರ್‍ಗಳು ಬಿಡುಗಡೆ ಮಾಡುತ್ತಿದ್ದಾರೆ. ಕಾವು ಹೆಚ್ಚಾದಂತೆ ಸಿನಿಮಾ, ಸಿಡಿಗಳು ಬಿಡುಗಡೆ ಆಗಬಹುದು. ಪಿಚ್ಚರ್ ಅಭಿ ಬಾಕಿ ಹೈ..!’ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ