ಶುಕ್ರವಾರ, ಜೂನ್ 9, 2023
ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟ ಪ್ರಕರಣ: ಮೊಮ್ಮಗನ ಬಂಧನ-ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ-ಬಾಬಾಬುಡನಗಿರಿಯಲ್ಲಿ ಶೌಚಾಲಯ ಸಮಸ್ಯೆ; ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ-ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪಾರ್ಕಿಂಗ್‌ ಏರಿಯಾದಲ್ಲಿ ಮಲಗಿಸಿದ್ದ 3 ವರ್ಷದ ಮಗು ಮೇಲೆ ಹರಿದ ಕಾರು

Twitter
Facebook
LinkedIn
WhatsApp
14

ಹೈದರಾಬಾದ್: ಪಾರ್ಕಿಂಗ್‌ ಏರಿಯಾದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ ಎಸ್ ಯುವಿ ಕಾರು ಹರಿದು ಮಗು ಮೃತಪಟ್ಟಿರುವ ಘಟನೆ ಹೈದರಬಾದ್‌ ನಲ್ಲಿ ನಡೆದಿರುವುದು ವರದಿಯಾಗಿದೆ.

ಕಲಬುರಗಿಯ ಶಹಬಾದ್‌ ಮೂಲದ ಮಹಿಳೆಯಾಗಿರುವ  ಕವಿತಾ ತನ್ನ ಎರಡು ಮಕ್ಕಳೊಂದಿಗೆ ಕೆಲಸ ಹುಡುಕಿಕೊಂಡು ಹೈದರಬಾದ್‌ ಗೆ ಬಂದಿದ್ದಾರೆ. ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಹಯತ್‌ನಗರದ ಲೆಕ್ಚರ್ಸ್‌ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಕೆಲಸ ಮಾಡಲು ತೆರಳಿದ್ದಾರೆ. ಮಧ್ಯಾಹ್ನ ಊಟವಾದ ಬಳಿಕ ತನ್ನ 3 ವರ್ಷದ ಮಗು ಲಕ್ಷ್ಮೀಯನ್ನು ಸೆಕೆಯೆಂದು ಅಪಾರ್ಟ್‌ ಮೆಂಟ್‌ ನ ಬೇಸ್‌ ಮೆಂಟ್‌ ನಲ್ಲಿ ಮಲಗಿಸಿದ್ದಾರೆ.

ಪಾರ್ಕಿಂಗ್‌ ಏರಿಯಾದಲ್ಲಿ ಮಗು ಮಲಗಿದ್ದು ಈ ವೇಳೆ ಎಸ್ ಯುವಿ ಕಾರು ಪಾರ್ಕ್‌ ಮಾಡುವ ನಿಟ್ಟಿನಲ್ಲಿ ಬಂದು ಮಲಗಿದ್ದ ಮಗುವಿನ ಮೇಲೆ ಹರಿದು ಮತ್ತೆ ಹಿಂದಕ್ಕೆ ಹೋಗಿದೆ. ತಲೆಗೆ ತೀವ್ರತರದ ಏಟಾಗಿ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಘಟನೆ ಸಂಬಂಧ ಮಗುವಿನ ತಾಯಿ ಕವಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿಯಲ್ಲಿ ಘಟನೆಯ ವಿಡಿಯೋ ರೆಕಾರ್ಡ್‌ ಆಗಿದೆ. ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ