ಬುಧವಾರ, ಫೆಬ್ರವರಿ 8, 2023
ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್-ಯುವತಿಗೆ ಮೆಸೇಜ್ ಮಾಡಿದಕ್ಕೆ ಸಹೋದರನಿಂದ ಯುವಕನ ಮೇಲೆ ಹಲ್ಲೆ-ಮದುವೆಗೂ ಮುಂಚೆ ಕಂಡೀಷನ್ಸ್ ಅಪ್ಲೈ- ಬೆಂಗಳೂರಿನ ವಧು, ವರರ ನಯಾ ಟ್ರೆಂಡ್-ಟರ್ಕಿ ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 8 ಸಾವಿರ; ಗಾಯಾಳುಗಳ ಸಂಖ್ಯೆ 35 ಸಾವಿರ, ರಕ್ಷಣಾ ಕಾರ್ಯಕ್ಕೆ ಅಡಚಣೆ-ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು-ಕಾರ್ಕಳ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ-ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು-ಬೈಕ್‌ನಲ್ಲಿ ರಾಂಚಿ ಸ್ಟೇಡಿಯಂನಿಂದ ಬಿಂದಾಸ್‌ ಆಗಿ ಹೊರಟ ಎಂ ಎಸ್ ಧೋನಿ..! ವಿಡಿಯೋ ವೈರಲ್-ಹೊಸ ಮುಖದ ಬಗ್ಗೆ ರಾಹುಲ್ ಗಾಂಧಿ ಒಲವು. ಕೊಡಗಿನಲ್ಲಿ ಪೊನ್ನನ್ನ,ಡಾ. ಮಂತರ್ ಗೌಡ, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಬಹುತೇಕ ಫಿಕ್ಸ್.-ಡಿಕ್ಕಿಹೊಡೆದ ಗಡಿಬಿಡಿಗೆ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ; ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪಾನಿಪುರಿ ತಿನ್ನುತ್ತಿದ್ದ ಮೂವರು ಅಕ್ಕತಂಗಿಯರ ಮೇಲೆ ಹರಿದ ಕಾರು: ತಂಗಿ ಸಾವು

Twitter
Facebook
LinkedIn
WhatsApp
ಪಾನಿಪುರಿ ತಿನ್ನುತ್ತಿದ್ದ ಅಕ್ಕತಂಗಿಯರ ಮೇಲೆ ಹರಿದ ಕಾರು: ತಂಗಿ ಸಾವು

ನೋಯ್ಡಾ: ರಸ್ತೆ ಬದಿ ಪಾನಿಪುರಿ ತಿನ್ನುತ್ತಿದ್ದ ಮೂವರು ಸಹೋದರಿಯರ ಮೇಲೆ ಕಾರೊಂದು ಹರಿದ ಪರಿಣಾಮ ತಂಗಿ ಮೃತಪಟ್ಟರು ಅಕ್ಕಂದಿರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಕಾರು ಚಾಲಕ ಪಾನಮತ್ತನಾಗಿ ಕಾರು ಚಾಲಾಯಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ನೋಯ್ಡಾದ ಸದರ್‌ಪುರ ಪ್ರದೇಶದಲ್ಲಿ ಸೋನಂ ಬಜಾರ್ ಎಂಬಲ್ಲಿ ಭಾನುವಾರ ಸಂಜೆ ಈ ಅವಘಡ ಸಂಭವಿಸಿದೆ.

ಪೊಲೀಸರ ಪ್ರಕಾರ ಖಜೂರ್ ಕಾಲೋನಿ (Khajur Colony) ನಿವಾಸಿ ಪುಷ್ಪಾ (Pushpa) ಎಂಬುವವರು ತಮ್ಮ ಮೂವರು ಮಕ್ಕಳಾದ ಆರು ವರ್ಷದ ರಿಯಾ (Riya) 15 ವರ್ಷದ ಅನು (Anu) ಹಾಗೂ 18 ವರ್ಷದ ಅಂಕಿತಾ (Ankita) ಜೊತೆ ಸೋಮ್ ಬಜಾರ್‌ಗೆ (Som Bazar) ತೆರಳುತ್ತಿದ್ದರು. ಈ ವೇಳೆ ಮಕ್ಕಳು ಪಾನಿಪುರಿ (golgappas) ತಿನ್ನಬೇಕು ಎಂದು ಆಸೆ ವ್ಯಕ್ತಪಡಿಸಿದ್ದು, ಅದರಂತೆ ಮಕ್ಕಳು ರಸ್ತೆ ಬದಿ ನಿಂತುಕೊಂಡು ಪಾನಿಪುರಿ ತಿನ್ನುತ್ತಿರುವಾಗ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಮೂವರು ಸಹೋದರಿಯರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರು ವರ್ಷ ಮಗು ರಿಯಾ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ