ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ (Pakistan) ಶೇ.30-40 ರಷ್ಟು ರಿಯಾಯಿತಿ ದರದಲ್ಲಿ ಕಚ್ಚಾ ತೈಲ (Crude Oil) ನೀಡಲು ರಷ್ಯಾ (Russia) ನಿರಾಕರಿಸಿದೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಮಾಸ್ಕೋದಲ್ಲಿ ನಡೆದ ಮಾತುಕತೆಯ ವೇಳೆ ಪಾಕಿಸ್ತಾನದ ನಿಯೋಗವು ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಮಾಡುವಂತೆ ಕೋರಿತ್ತು. ಆದರೆ ಪಾಕ್ ಕೋರಿಕೆಯನ್ನು ರಷ್ಯಾ ನಿರಾಕರಿಸಿದೆ. ಪಾಕಿಸ್ತಾನದ ಪೆಟ್ರೋಲಿಯಂ ರಾಜ್ಯ ಸಚಿವ ಮುಸಾದಿಕ್ ಮಲಿಕ್ ಮತ್ತು ಮಾಸ್ಕೋದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ರಷ್ಯಾದೊಂದಿಗೆ ಮಾತುಕತೆ ನಡೆಸಿದ್ದರು.
ಇದೀಗ ಏನನ್ನೂ ನೀಡಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳುವುದರೊಂದಿಗೆ ಮಾತುಕತೆ ಕೊನೆಗೊಂಡಿದೆ. ಪಾಕಿಸ್ತಾನದ ಬೇಡಿಕೆಯನ್ನು ಪರಿಗಣಿಸಲಾಗುವುದು. ರಾಜತಾಂತ್ರಿಕ ಮಾರ್ಗಗಳ ಮೂಲಕ ಏನು ಮಾಡಬಹುದೆಂದು ಆಲೋಚಿಸಿ ತಿಳಿಸಲಾಗುವುದು ಎಂದು ಪಾಕಿಸ್ತಾನಕ್ಕೆ ಭರವಸೆ ನೀಡಿದೆ.
ಪಾಕಿಸ್ತಾನದ ಅಧಿಕೃತ ನಿಯೋಗವು ನವೆಂಬರ್ 29 ರಂದು ಮಾಸ್ಕೋಗೆ ಭೇಟಿ ನೀಡಿ ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತ್ತು. ಈ ವೇಳೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ, ಪಾವತಿ ವಿಧಾನ ಮತ್ತು ಸಾಗಣೆ ವೆಚ್ಚದ ಬಗ್ಗೆ ಚರ್ಚಿಸಿತ್ತು.
ನವೆಂಬರ್ 13 ರಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್, ರಷ್ಯಾದ ತೈಲ ಖರೀದಿಸುವುದನ್ನು ಅಮೆರಿಕ ತಡೆಯಲು ಸಾಧ್ಯವಿಲ್ಲ. ತೈಲ ಖರೀದಿಗೆ ಚಿಂತನೆ ನಡೆದಿದ್ದು, ಶೀಘ್ರವೇ ಆ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದರು.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist