ಭಾನುವಾರ, ಮೇ 26, 2024
ಹೈದರಾಬಾದನ್ನು 8 ವಿಕೆಟ್ ಗಳಿಂದ ಸೋಲಿಸಿ ಚಾಂಪಿಯನ್ಶಿಪ್ ಪಟ್ಟಕ್ಕೆ ಮುತ್ತಿಕ್ಕಿದ ಕೆಕೆಆರ್..!-ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್..!-ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ದಾರೆ; ರಘುಪತಿ ಭಟ್-ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್-ಎಸ್ಆರ್ ಹೆಚ್ ತಂಡದ ಮಾಲಕಿ ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ಹಿನ್ನೆಲೆ ಏನು..!-ಉಡುಪಿ: ನಡು ರಸ್ತೆಯಲ್ಲೇ ಎರಡು ತಂಡದ ಯುವಕರ ನಡುವೆ ಗ್ಯಾಂಗ್ ವಾರ್; ಇಲ್ಲಿದೆ ವಿಡಿಯೋ-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಪೋರ್ಷೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತನ ತಂದೆಗೆ ನ್ಯಾಯಾಂಗ ಬಂಧನ ; ಇಬ್ಬರು ಪೊಲೀಸರು ಅಮಾನತು..!-miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಜೊತೆ ಗಿನ ಮೈತ್ರಿಯೇ ನಮಗೆ ಮುಳು ವಾಯಿತು ಎಂದ ಸಿಪಿಎಂ

Twitter
Facebook
LinkedIn
WhatsApp
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಜೊತೆ ಗಿನ ಮೈತ್ರಿಯೇ ನಮಗೆ ಮುಳು ವಾಯಿತು ಎಂದ ಸಿಪಿಎಂ

ಕಲ್ಕತ್ತಾ: ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಕೆಸರೆರಚಾಟ ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿದೆ. ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಭಾರೀ ಕಳಪಡೆ ಪ್ರದರ್ಶನವನ್ನು ನೀಡಿದೆ. ಹೀಗಾಗಿ ಪಕ್ಷದ ವೈಫಲ್ಯಕ್ಕೆ ಕಾರಣಗಳ ಬಗ್ಗೆ ಚರ್ಚಿಸಲು ಸಿಪಿಎಂ ಎರಡು ದಿನಗಳ ಸಭೆಯನ್ನು ನಡೆಸಿದೆ. ಸಭೆಯಲ್ಲಿ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಪಕ್ಷವು ವಿಫಲವಾಗಿದ್ದು, ಇದಕ್ಕೆ ಇಂಡಿಯನ್ ಸೆಕ್ಯುಲರ್ ಫೋರ್ಸ್ (ಐಎಸ್ಎಫ್) ನೊಂದಿಗೆ ಕೈಜೋಡಿಸಿದ್ದೇ ಕಾರಣ ಎಂದು ಹಲವು ನಾಯಕರು ದೂಷಿಸಿದ್ದಾರೆ.

2016 ರ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದಕ್ಕೆ ಪಕ್ಷಕ್ಕೆ ಹಾನಿಯಾಗಿತ್ತು. ಈಗ ಅದು ಮತ್ತಷ್ಟು ಹೆಚ್ಚಾಗಿದೆ ಎಂದು ಅನೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಸಮಯದಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಪಡೆದಿದ್ದರೆ, ಎಡ ಪಕ್ಷಗಳು ಕೇವಲ 26 ಸ್ಥಾನಗಳನ್ನು ಗಳಿಸಿತ್ತು.
ಇತ್ತೀಚಿನ ಚುನಾವಣೆಯಲ್ಲಿ, ಎಡಪಂಥೀಯ, ಕಾಂಗ್ರೆಸ್ ಮತ್ತು ಐಎಸ್ಎಫ್ ಮೈತ್ರಿ ರಚಿಸಿದ್ದವು. ಆಡಳಿತಾರೂಢ ಟಿಎಂಸಿ ಮತ್ತು ಉದಯೋನ್ಮುಖ ಬಿಜೆಪಿಗೆ ವಿರುದ್ಧದ ಮತದಾರರನ್ನು ಕ್ರೂಢೀಕರಿಸಲು ಎಡರಂಗದ ಮೈತ್ರಿ ರಚನೆಯಾಗಿತ್ತು. ಆದರೆ, ಎಲ್ಎಫ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒದೇ ಒಂದು ಸ್ಥಾನವನ್ನು ಪಡೆಯಲು ವಿಫಲವಾದರೆ, ಐಎಸ್ಎಫ್ ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಮಾತ್ರ ಗೆದ್ದಿತು.

ಮೈತ್ರಿಕೂಟದಲ್ಲಿ ಐಎಸ್‌ಎಫ್ಅನ್ನು ಸೇರಿಸಿಕೊಳ್ಳುವುದು ಸರ್ವಾನುಮತದ ನಿರ್ಧಾರವಲ್ಲ. ಹೊಸದರೊಂದಿಗೆ ಕೈಜೋಡಿಸುವ ಪರವಾದವರು ಟಿಎಂಸಿಗೆ ಅಲ್ಪಸಂಖ್ಯಾತ ಮತಗಳು ಹೋಗುವುದನ್ನು ತಡೆಯಲು ಬಯಸಿದ್ದರು. ಆದರೆ, ತಂತ್ರವು ತಪ್ಪಾಗಿದೆ ಮತ್ತು ಸಿಪಿಎಂ ಯಾವಾಗಲೂ ಜಾತ್ಯತೀತತೆಯ ಧ್ವನಿಯಾಗಿರುವುದರಿಂದ ಮತದಾರರು ಅದನ್ನು ಸ್ವೀಕರಿಸಲಿಲ್ಲ ಎಂದು ರಾಜ್ಯ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಮುರ್ಷಿದಾಬಾದ್‌ನ ಕೆಲವು ಸ್ಥಾನಗಳಲ್ಲಿ ಐಎಸ್‌ಎಫ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ ಮೈತ್ರಿಕೂಟಕ್ಕೆ ಹಿನ್ನಡೆಯಾಯಿತು. ಕಾಂಗ್ರೆಸ್‌ ಪಕ್ಷವು ಸರಿಯಾದ ರೀತಿಯಲ್ಲಿ ಸ್ಥಾನಗಳನ್ನು ಹಂಚಿಕೊಳ್ಳಲಿಲ್ಲ ಎಂದು ಸಿಪಿಎಂ ಆರೋಪಿಸಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ – ರಘುಪತಿ ಭಟ್

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ – ರಘುಪತಿ ಭಟ್. ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು