ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪತ್ನಿ ಜೊತೆ ಅಕ್ರಮ ಸಂಬಂಧ: ಯುವಕನ ಭೀಕರ ಹತ್ಯೆ, ದೇಹ 12 ತುಂಡು!!

Twitter
Facebook
LinkedIn
WhatsApp
Murder title

ನವದೆಹಲಿ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮತ್ತು ದೇಹ ತುಂಡರಿಸಿದ ಘಟನೆ ಹಸಿರಾಗಿರುವಂತೆಯೇ ಇತ್ತ ಉತ್ತರ ಪ್ರದೇಶದಲ್ಲಿ ಇಂತಹುದೇ ಮತ್ತೊಂದು ಘಟನೆ ವರದಿಯಾಗಿದೆ.

ಶನಿವಾರ ಮಧ್ಯಾಹ್ನ 2 ಗಂಟೆಗೆ ಖೋಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಗೋಣಿಚೀಲದಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಚೀಲದ ಒಳಗಿನಿಂದ ಕೆಲವು ಅಂಗಗಳು ಹೊರಬಂದಿದ್ದವು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಯುವಕನೊಬ್ಬನ ಶವ ಸುಮಾರು 12 ತುಂಡುಗಳಾಗಿ ತುಂಡಾಗಿತ್ತು. ಮೃತನನ್ನು ಅಕ್ಷಯ್ ಎಂದು ಗುರುತಿಸಲಾಗಿದ್ದು, ಈತ ಮೂಲತಃ ರಾಜಸ್ಥಾನದ ಜೈಪುರ ಜಿಲ್ಲೆಯ ಕೊಟ್‌ಪುಟ್ಲಿ ನಿವಾಸಿ ಎಂದು ಡಿಸಿಪಿ ದೀಕ್ಷಾ ಶರ್ಮಾ ತಿಳಿಸಿದ್ದಾರೆ.

ತನಿಖೆ ನಡೆಸಿದ್ದ ಪೊಲೀಸರು ಜನವರಿ 19 ಅಥವಾ 20ರ ರಾತ್ರಿ ಅಕ್ಷಯ್‌ನನ್ನು ಕೊಲೆ ಮಾಡಲಾಗಿದೆ ಎಂದು ಪತ್ತೆ ಮಾಡಿದ್ದು, ಬಳಿಕ ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದ್ದರು. ತನಿಖೆಯಲ್ಲಿ, ಮೃತರು ಕೊನೆಯದಾಗಿ ಆದರ್ಶ ಕಾಲೋನಿ ಖೋಡಾದಲ್ಲಿ ವಾಸಿಸುವ ರಿಕ್ಷಾ ಚಾಲಕ ಮೀಲಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದ. ಪೊಲೀಸರು ಮೀಲಾಲ್‌ನನ್ನು ಕಸ್ಟಡಿಗೆ ತೆಗೆದುಕೊಂಡ ನಂತರ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ, ಅವನು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿದ್ದಾನೆ ಎಂದು ಹೇಳಿದ್ದಾರೆ.

ಅಕ್ಷಯ್ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿ ಮಿಲಾಲ್ ಹೇಳಿದ್ದಾನೆ. ತನ್ನ ಪತ್ನಿಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದ ಅಕ್ಷಯ್ ನನ್ನು ಹಲವು ಬಾರಿ ಹಿಡಿದಿದ್ದಾನೆ. ಮೃತ ಅಕ್ಷಯ್ ಮೂರು ವರ್ಷಗಳಿಂದ ಗಾಜಿಯಾಬಾದ್‌ನಲ್ಲಿ ನೆಲೆಸಿದ್ದ. ಆ ಸಮಯದಲ್ಲಿ ಮೀಲಾಲ್ ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಆರೋಪಿಗಳು ಅಕ್ಷಯ್ ನನ್ನು ಜೈಪುರದಿಂದ ಗಾಜಿಯಾಬಾದ್ ಗೆ ಕರೆದೊಯ್ದು ಪತ್ನಿಗೆ ಕರೆ ಮಾಡಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಕಾಲುವೆಯ ದಂಡೆಗೆ ಎಸೆದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ