Saturday, December 10, 2022
ಮಂಗಳೂರು : ಕಾಂತಾರ ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಬಂದ ಜೋಡಿ ಮೇಲೆ ಹಲ್ಲೆ-ಹೈಕಮಾಂಡ್‌ ಹೇಳಿದರೆ ವರುಣದಿಂದಲೇ ಸ್ಪರ್ಧೆ: ಸಿದ್ದರಾಮಯ್ಯ-ಫ್ರಾನ್ಸ್‌ನಲ್ಲಿ 18ರಿಂದ 25 ವರ್ಷದ ಮಕ್ಕಳಿಗೆ ಕಾಂಡೋಮ್‌ ಫ್ರೀ-`ಕಾಂತಾರ’ ಸಿನಿಮಾ, ಬ್ಯಾನ್ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ-ಮಕ್ಕಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಆನೆಯ ನೀರಾಟ ನೋಡಿ... ವೈರಲ್ ವಿಡಿಯೋ-FIFA World Cup: ಕ್ರೊವೇಷಿಯಾ ಸವಾಲು ಗೆಲ್ಲುತ್ತಾ ಬಲಿಷ್ಠ ಬ್ರೆಜಿಲ್?-ಮಂಟಪ ರೆಡಿಯಾಗಿತ್ತು, ವರ ಕೂತಿದ್ದ, ವಧು ಮಾತ್ರ ಔಟ್‌ಫಿಟ್ ತರೋದನ್ನೇ ಮರೆತಿದ್ಲು !-ಸ್ತನದ ಕ್ಯಾನ್ಸರ್‌ ಗೆದ್ದು 38ನೇ ಹುಟ್ಟುಹಬ್ಬದ ದಿನ ಕೆಲಸಕ್ಕೆ ಮರುಳಿದ ನಟಿ ಹಂಸ ನಂದಿನಿ!-ಮದುವೆ ಮನೆಯಲ್ಲಿ ಅವಘಡ – ಸಿಲಿಂಡರ್ ಸ್ಫೋಟಿಸಿ 4 ಸಾವು, 60 ಮಂದಿಗೆ ಗಾಯ-ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ – ಸೆಕ್ಸ್ ಆಫರ್‌ ಕೊಟ್ಟು ಖೆಡ್ಡಾಕ್ಕೆ ಬೀಳಿಸಿದ ಖಾಕಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪತ್ನಿಯನ್ನು ಕೊಂದು ಆಕೆಯ ಶವವನ್ನು ತುಂಡರಿಸಿ ವಿಕೃತಿ ಮೆರೆದ ಪತಿ

Twitter
Facebook
LinkedIn
WhatsApp

ಲಕ್ನೋ: ಪತಿಯೊಬ್ಬ (Husband) ಪತ್ನಿಯ (Wife) ಶವವನ್ನು ತುಂಡರಿಸಿ ದೂರದ ಸ್ಥಳದಲ್ಲಿ ವಿಲೇವಾರಿ ಮಾಡಿರುವ ಪ್ರಕರಣ ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದೆ.

ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ರಾಮ್‌ಪುರ ಕಲಾನ್ ಪ್ರದೇಶದ ನಿವಾಸಿ ಜ್ಯೋತಿ ಅಲಿಯಾಸ್ ಸ್ನೇಹಾ ಎಂಬಾಕೆ ಮೃತ ಮಹಿಳೆಯಾಗಿದ್ದು, ಆಕೆಯ ಪತಿ ಪಂಕಜ್ ಮೌರ್ಯ ಹಾಗೂ ಆತನ ಸ್ನೇಹಿತ ದುರ್ಜನ್ ಪಾಸಿ ಬಂಧಿತ (Arrest) ವ್ಯಕ್ತಿಗಳು.

ಪಂಕಜ್ ಹತ್ತು ವರ್ಷದ ಹಿಂದೆ ಸ್ನೇಹಾಳನ್ನು ಮದುವೆಯಾಗಿದ್ದ. ಸ್ನೇಹಾ ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಹಲವು ದಿನಗಳಿಂದ ಆಕೆಗೆ ಬೇರೆಯವರ ಜೊತೆಗೂ ಸಂಬಂಧವಿದ್ದು, ಆಕೆ ಯಾರದ್ದೋ ಮನೆಯಲ್ಲಿ ಇರುತ್ತಿದ್ದಳು. ಇದರಿಂದಾಗಿ ಪ್ರತಿನಿತ್ಯ ಸ್ನೇಹಾ ಹಾಗೂ ಪಂಕಜ್ ಮಧ್ಯೆ ಜಗಳವಾಗುತ್ತಿತ್ತು. ಇದರಿಂದಾಗಿ ಪಂಕಜ್ ಸ್ನೇಹಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

ಇದಾದ ಬಳಿಕ ಯೋಜನೆಯನ್ನು ರೂಪಿಸಿ ತನ್ನ ಸ್ನೇಹಿತ ದುರ್ಜನ್ ಸಹಾಯದಿಂದ ಪತ್ನಿ ಸ್ನೇಹಾಳನ್ನು ಕೊಲೆ ಮಾಡಿದ್ದಾನೆ. ಅದಾದ ಬಳಿಕ ಯಾರಿಗೂ ಗೊತ್ತಾಗದಂತೆ ಸ್ನೇಹಾಳ ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ್ದಾನೆ. 

ಘಟನೆಗೆ ಸಂಬಂಧಿಸಿ ಸೀತಾಪುರ ಪೊಲೀಸರು ನವೆಂಬರ್ 8 ರಂದು ಗುಲಾರಿಹಾ ಪ್ರದೇಶದಿಂದ ಸ್ನೇಹಾಳ ದೇಹದ ಭಾಗಗಳನ್ನು ವಶಪಡಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ