- ಅಂತಾರಾಷ್ಟ್ರೀಯ
- 1:33 ಅಪರಾಹ್ನ
- ಜನವರಿ 30, 2023
ಪತಿಯ ಮುಖದ ಮೇಲೆ ಆ್ಯಸಿಡ್ ಎರಚಿದ ಪತ್ನಿ! ಕಾರಣ ಏನು ಗೊತ್ತೆ?
Twitter
Facebook
LinkedIn
WhatsApp

ಲಕ್ನೋ: ತಡವಾಗಿ ಮನೆಗೆ ಬಂದ ಕಾರಣಕ್ಕಾಗಿ ಪ್ರಶ್ನೆ ಮಾಡಿದ ಪತಿ ಮೇಲೆ ಪತ್ನಿಯೇ ಆ್ಯಸಿಡ್ ಎಸೆದ ಘಟನೆ ಉತ್ತರಪ್ರದೇಶದ ಕಾನ್ಪುರದ ಕೂಪರ್‌ಗಂಜ್ ಪ್ರದೇಶದಲ್ಲಿ ಶನಿವಾರ ರಾತ್ರಿ (ಜ.28 ರಂದು) ನಡೆದಿದೆ.
ಡಬ್ಬು ಎನ್ನುವ ವ್ಯಕ್ತಿ ತನ್ನ ಪತ್ನಿ ರಾತ್ರಿ ಮನೆಗೆ ತಡವಾಗಿ ಬಂದ ಕಾರಣಕ್ಕೆ ಯಾಕೆ ಮನೆಗೆ ಬರಲು ತಡವಾಯಿತು ಎಂದು ಕೇಳಿದ್ದಾನೆ. ಈ ಮಾತಿಗೆ ತುಸು ಹೆಚ್ಚೇ ಸಿಟ್ಟಾದ ಪತ್ನಿ ಪೂನಂ ಪತಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಪತ್ನಿ ಆಕ್ರೋಶಗೊಂಡು ಬಾತ್ ರೂಂನಲ್ಲಿದ್ದ ಆ್ಯಸಿಡ್ ಬಾಟಲಿ ತೆಗೆದುಕೊಂಡು ಮುಖದ ಮೇಲೆ ಎಸೆದಿದ್ದಾರೆ.
ಸದ್ಯ ಪತಿ ಡಬ್ಬು ಆಸ್ಪತ್ರೆಗೆ ದಾಖಲಾಗಿದ್ದು, ಪತ್ನಿ ವಿರುದ್ಧ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.