ನೂತನ ಸಂಸದೆ ಕಂಗನಾ ರಣಾವತ್ ಮೇಲೆ ಮಹಿಳಾ ಪೇದೆಯಿಂದ ಕಪಳಾ ಮೋಕ್ಷ..!
ಚಂಡೀಗಡ: ಹಿಮಾಚಲದ ಮಂಡಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿರುವ ಚಿತ್ರನಟಿ ಕಂಗನಾ ರನೌತ್ ಅವರಿಗೆ ಕೇಂದ್ರ ಕೈಗಾರಿಕಾ ರಕ್ಷಣಾ ದಳದ (ಸಿಐಎಸ್ಎಫ್) ಮಹಿಳಾ ಪೊಲೀಸ್ ಸಿಬ್ಬಂದಿ ಕುಲ್ವಿಂದರ್ ಕೌರ್ ಎನ್ನುವವರು ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಕಂಗನಾ ಅವರು ಚಂಡೀಗಡದಿಂದ ದೆಹಲಿಗೆ ಯುಕೆ707 ಸಂಖ್ಯೆಯ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ವಿಮಾನ ನಿಲ್ದಾಣ ಪ್ರವೇಶಿಸಿದ ಅವರು, ಚೆಕ್ ಇನ್ ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ಅಲ್ಲಿಂದ ಬೋರ್ಡಿಂಗ್ ಪಾಯಿಂಟ್‌ಗೆ ಹೋಗಿದ್ದರು. ಅಲ್ಲಿ, ಸಿಐಎಸ್ಎಫ್ ನ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ಬಂದು ಅವರಿಗೆ ಏನೇನೋ ಪ್ರಶ್ನೆಗಳನ್ನು ಕೇಳಿದ್ದು, ಅದೇ ವಿಚಾರವಾಗಿ, ಕಂಗನಾ ಹಾಗೂ ಸೆಕ್ಯುರಿಟಿ ಸಿಬ್ಬಂದಿಯ ನಡುವೆ ಮಾತಿಗೆ ಮಾತು ಬೆಳೆಯಿತು. ಆ ಸಂದರ್ಭದಲ್ಲಿ ಸಿಟ್ಟಿಗೆದ್ದ ಪೇದೆಯು, ಕಂಗನಾರವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ತೀವ್ರವಾಗಿ ನೊಂದಿರುವ ಕಂಗನಾ, ಅದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ದೆಹಲಿಗೆ ಬಂದಿಳಿದ ಕೂಡಲೇ ಸಿಐಎಸ್ಎಫ್ ಕೇಂದ್ರ ಕಚೇರಿಗೆ ತೆರಳಿ ಅಲ್ಲಿ, ಸಿಐಎಸ್ಎಫ್ ನಿರ್ದೇಶಕರಾದ ನೈನಾ ಸಿಂಗ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ನಡೆದ ಘಟನೆಗಳನ್ನು ವಿವರವಾಗಿ ಹೇಳಿದ್ದು, ಕೂಡಲೇ ತಮ್ಮ ಮೇಲೆ ಕೈ ಹಾಕಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಇತ್ತ, ಕಂಗನಾ ರನೌತ್ ನೀಡಿರುವ ದೂರಿನ ಮೇರೆಗೆ ತನಿಖೆ ನಡೆಸಿರುವ ಸಿಐಎಸ್ಎಫ್ ಅಧಿಕಾರಿಗಳು, ಆಕೆಗೆ ಕಪಾಳ ಮೋಕ್ಷ ಮಾಡಿದ ಭದ್ರತಾ ಸಿಬ್ಬಂದಿಯನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಹೆಚ್ಚಿನ ವಿಚಾರಣೆಗಗಾಗಿ ಸಿಐಎಸ್ಎಫ್ ಸಿಬ್ಬಂದಿಯು ಆತನನ್ನು ವಶಕ್ಕೆ ಪಡೆದಿದ್ದಾರೆಂದು ಮೂಲಗಳು ಹೇಳಿವೆ.
ಕಾರಣವೇನು?
ಕಪಾಳಕ್ಕೆ ಬಾರಿಸಲು ಕಾರಣ ಏನು ಎಂಬ ಬಗ್ಗೆ ಆ ಮಹಿಳಾ ಪೊಲೀಸ್ ಪ್ರತಿಕ್ರಿಯೆ ನೀಡಿದ್ದಾರೆ. ” 2020 ರಲ್ಲಿ ದೆಹಲಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಕುರಿತು ರೈತರ ಪ್ರತಿಭಟನೆ ನಡೆದಿದ್ದರು. ಆ ಬಗ್ಗೆ ನಟಿ ಕಂಗನಾ ಕೇವಲವಾಗಿ ಮಾತನಾಡಿದ್ದರು. 100 ರೂ. ಅಥವಾ 200 ರೂ. ನೀಡಿದ್ದರಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ಪ್ರತಿಭಟನೆಯಲ್ಲಿ ನಮ್ಮ ತಾಯಿ ಕೂಡ ಭಾಗಿಯಾಗಿದ್ದರು ” ಎಂದು ಹೇಳಿದ್ದಾರೆ.
ನಟಿ ಕಂಗನಾ ಪ್ರತಿಕ್ರಿಯೆ ಏನು?
ಘಟನೆ ಬೆನ್ನಲ್ಲೆ ನಟಿ ಕಂಗನಾ ನಾನು ಸುರಕ್ಷತವಾಗಿದ್ದೇನೆ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ. ” ನಾನು ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲಿನ ಸುರಕ್ಷತಾ ಸಿಬ್ಬಂದಿ ಕಪಾಳಕ್ಕೆ ಹೊಡೆದು ಅವಹೇಳನ ಮಾಡಿದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ. ದೆಹಲಿಯಲ್ಲಿ ನಡೆದ ರೈತರ ಹೋರಾಟವನ್ನು ನಾನು ಬೆಂಬಲಿಸುತ್ತೇನೆ ಎಂದು ಹೇಳಿದರು. ಕೂಡಲೇ ನಾನು ದೆಹಲಿಗೆ ಮರಳಿದೆ. ಸದ್ಯ ಸುರಕ್ಷತವಾಗಿದ್ದೇನೆ. ಆದರೆ. ಪಂಜಾಬ್‌ನಲ್ಲಿ ಬೆಳೆಯುತ್ತಿರುವ ತೀವ್ರವಾದ ಹಾಗೂ ಉಗ್ರವಾದವನ್ನು ಕೊನೆಗಾಣಿಸುವುದು ಹೇಗೆ?” ಎಂದು ಪ್ರಶ್ನೆ ಮಾಡಿದ್ದಾರೆ.