
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಥೈಲ್ಯಾಂಡ್, ವಿಯೆಟ್ನಾಮ್, ಇಸ್ರೇಲ್ ,ಶ್ರೀಲಂಕಾ ದೇಶಗಳಲ್ಲಿ ಜನಪ್ರಿಯವಾಗಿರುವ ಡ್ರ್ಯಾಗನ್ ಫ್ರೂಟ್ ಅನ್ನು ನಾವು ಬೆಳೆಯಬಹುದು.
ಭಾರತ ದೇಶದ ಭೂಪ್ರದೇಶ ಡ್ರ್ಯಾಗನ್ ಫ್ರೂಟ್ ಗೆ ಅನುಕೂಲಕರವಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇದರ ಸಸಿ ಯಾವುದೇ ಪರಿಸರದಲ್ಲಿ ಬೆಳೆಯುವ ಶಕ್ತಿ ಹೊಂದಿರುತ್ತದೆ.
ಸಸಿ ಕೇವಲ ವಾರ್ಷಿಕ 50 ಸೆಂಟಿಮೀಟರ್ ಮಳೆ ಬಿದ್ದರು ಚೆನ್ನಾಗಿ ಬೆಳೆಯುತ್ತದೆ. 20 ಸೆಂಟಿಗ್ರೇಡ್ ಹಾಗೂ 30 ಸೆಂಟಿಗ್ರೇಡ್ ನಡುವೆ ವಾತಾವರಣ ಇದ್ದರೆ ಈ ಹಣ್ಣಿನ ಸಸಿಗೆ ಅನುಕೂಲಕರವಾಗಿದೆ.
ಬಹಳಷ್ಟು ಪೌಷ್ಟಿಕಾಂಶಗಳನ್ನು ಈ ಹಣ್ಣು ಹೊಂದಿರುವ ಕಾರಣ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ವ್ಯಾಪಕ ವಾದಂತಹ ಬೇಡಿಕೆ ಇದೆ.
ಸಾವಯವ ಗೊಬ್ಬರಗಳನ್ನು ಬಳಸಿದರೆ ಇದರ ಸಸಿ ಚೆನ್ನಾಗಿ ಬೆಳೆಯುತ್ತದೆ. ಹನಿ ನೀರಾವರಿಯನ್ನು ಮಾಡಿದರೆ ಇದರ ಸಸಿಗಳು ಆರೋಗ್ಯವಂತವಾಗಿ ಬೆಳೆಯುತ್ತದೆ. ಒಂದು ಎಕರೆಗೆ ಐದರಿಂದ ಆರು ಟನ್ ಈ ಹಣ್ಣುಗಳನ್ನು ಪಡೆಯಬಹುದು.
ಇತ್ತೀಚಿಗೆ ಕರ್ನಾಟಕ, ಗುಜರಾತ್, ಅಸ್ಸಾಂ, ಹರಿಯಾಣ ,ಪಂಜಾಬ್, ಮಹಾರಾಷ್ಟ್ರಗಳಲ್ಲಿ ಈ ಹಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.
ಭಾರತದಲ್ಲಿ ಬೆಳೆಯುವ ಡ್ರಾಗನ್ ಫ್ರೂಟ್ ಗಳಲ್ಲಿ ಮೂರು ತರಹದ ಡ್ರಾಗನ್ ಫ್ರೂಟ್ ಗಳಿವೆ. ಪಿಂಕ್ ಡ್ರ್ಯಾಗನ್, ಕೆಂಪು ಮತ್ತು ಹಳದಿ ಬಣ್ಣದ ಡ್ರಾಗನ್ ಫ್ರೂಟ್ ಗಳಿವೆ.
1ಎಕರೆ ಡ್ರ್ಯಾಗನ್ ಫ್ರೂಟ್ ಬೆಳೆಯಲು ಸುಮಾರು ಅರವತ್ತು ಸಾವಿರ ರೂಪಾಯಿ ಖರ್ಚಾಗುತ್ತದೆ. ಈ ಕಾರಣದಿಂದ ಕಡಿಮೆ ಬಂಡವಾಳ ಹೂಡಿ ಹೆಚ್ಚು ಆದಾಯವನ್ನು ಈ ಹಣ್ಣಿನಿಂದ ಪಡೆಯುವುದಾಗಿದೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್