ನಾಳೆ ಸಿಎಂ ಬೊಮ್ಮಾಯಿ ಮಂಗಳೂರಿಗೆ
Twitter
Facebook
LinkedIn
WhatsApp
ಮಂಗಳೂರು, ಮಾ 15 : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಳೆ ಮಂಗಳೂರಿಗೆ ಆಗಮಿಸಲಿದ್ದಾರೆ.
ನಾಳೆ ಬೆಳಗ್ಗೆ 10:30ಕ್ಕೆ ಮೇರಿ ಹಿಲ್ ಹೆಲಿಪ್ಯಾಡ್ ನಲ್ಲಿ ಬಂದು ಇಳಿಯಲಿದ್ದಾರೆ. ಬಳಿಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗುವ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ನಂತರ ತುಮಕೂರು ಜಿಲ್ಲೆಗೆ ತೆರಳಲ್ಲಿದ್ದಾರೆ ಎಂದು ಪ್ರಕಟಣೆಯ ತಿಳಿಸಿದೆ.