
ಬೆಂಗಳೂರು: ನೀವೆನಾದ್ರೂ ಇನ್ಮುಂದೆ ಸಾಕು ನಾಯಿಗಳನ್ನು (Dog) ಹೊರಬಿಟ್ರೆ ಅದರ ಕಡೆ ಗಮನವಿಡಿ. ಏಕೆಂದರೆ ನಿಮಗೆ ಗೊತ್ತಿಲ್ದೇ ಶ್ವಾನಕ್ಕೆ ಬಿಸ್ಕತ್ ಹಾಕಿ ಕಳ್ಳತನ ಮಾಡ್ತಾರೆ ಜೋಕೆ. ಹೀಗೊಂದು ಘಟನೆ ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿದೆ.
ಕಳೆದ ಒಂದು ವಾರದ ಹಿಂದೆ ಮಾರತಹಳ್ಳಿಯ ಬಿಆರ್ ಲೇಔಟ್‍ನಲ್ಲಿ ಮುರಳಿ ಮಾಧವ್ ಎಂಬುವವರ ಸಾಕು ನಾಯಿಯನ್ನು ಖದೀಮನೊಬ್ಬ ಕದ್ದು ಎಸ್ಕೇಪ್ ಆಗಿದ್ದಾನೆ. ಇದೀಗ ಈ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಸಾಕು ನಾಯಿಗೆ ಬಿಸ್ಕತ್ ಹಾಕ್ತಿರೋ ಆ ವ್ಯಕ್ತಿನಾ ನೋಡಿದ್ರೆ, ಶ್ವಾನಪ್ರಿಯ ಅನ್ಕೊಬೇಕು. ಆದ್ರೆ, ಇತ ನಾಯಿಕದ್ದ ಕಳ್ಳ ಅಂತ ಗೊತ್ತಾಗಿದ್ದೇ, ತನ್ನ ಕೈ ಚಳಕ ತೋರಿಸಿದ ಮೇಲೆ.
ಮನೆಯಿಂದ ಹೊರ ಬಂದಿದ್ದ ಶ್ವಾನಕ್ಕೆ ಬಿಸ್ಕತ್ ತಿನ್ನಿಸಿ, ಬೈಕ್ ಹತ್ತಿಸಲು ಈ ಕಳ್ಳ ಪ್ರಯತ್ನಿಸಿದ್ದಾನೆ. ಬೈಕ್ ಹತ್ತದೇ ಇದ್ದಾಗ, ಕೈಯಲ್ಲೇ ಎತ್ಕೊಂಡು ಹೋಗಿದ್ದಾನೆ. 38 ಕೆ.ಜಿ ತೂಕವಿರುವ, ಒಂದುವರೆ ವರ್ಷದ ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯನ್ನು ಖದೀಮ ಕದ್ದು ಎಸ್ಕೇಪ್ ಆಗಿದ್ದಾನೆ. ಬಿಆರ್ ಲೇಔಟ್‍ನ ಎ2ಬಿ ಹತ್ರ ಈ ಶ್ವಾನ ಕಾಣೆಯಾಗಿತ್ತು. ಸಿಸಿಟಿವಿಗಳನ್ನು ಪರಿಶೀಲಿಸಿದ ಬಳಿಕ ಅಸಲಿ ಸತ್ಯ ಗೊತ್ತಾಗಿದೆ. ಇದೀಗ ಘಟನೆ ಬಳಿಕ ಶ್ವಾನದ ಮಾಲೀಕ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist