ಮಂಗಳವಾರ, ಜೂನ್ 25, 2024
Sports for change Kho Kho ಪಂದ್ಯಾಟ: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಯನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು-T20 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ-ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ-ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಗುಡ್ ನ್ಯೂಸ್; ಜಾಮೀನು ಮಂಜೂರು..!-ದರ್ಶನ್ ಸೇರಿದಂತೆ 17 ಆರೋಪಿಗಳ ಕಸ್ಟಡಿ ಅಂತ್ಯ; ಇಂದು ನ್ಯಾಯಾಲಯಕ್ಕೆ ಹಾಜರು.!-ರಾಜ್ಯದಲ್ಲಿ ಮುಂಗಾರು ಚುರುಕು; ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!-ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ.!-4 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಬಳಿಸಿ ದಾಖಲೆ ಬರೆದ ಲಾಕಿ ಫರ್ಗುಸನ್..!-ದರ್ಶನ್ ಫಾರಂ ಹೌಸ್ ಮ್ಯಾನೇಜರ್ ನಿಗೂಢ ಸಾವು; ಅನುಮಾನಾಸ್ಪದ ಸಾವು ಪ್ರಕರಣ ದಾಖಲು.!-ಶತಕದತ್ತ ಟೊಮೆಟೊ ದರ; ಮತ್ತಷ್ಟು ಏರಿಕೆಯಾಗಲಿದೆಯೇ ಟೊಮೆಟೊ ಬೆಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಮ್ಮ ಯೋಧರ ಮೇಲೆ ದಾಳಿಯಾದ ಮರುಕ್ಷಣವೇ ಪ್ರತಿದಾಳಿ ನಡೆಸುತ್ತೇವೆ - ಅಮೆರಿಕ ಅಧ್ಯಕ್ಷ ಜೋ ಬಿಡೆನ್‌‌ ಎಚ್ಚರಿಕೆ.

Twitter
Facebook
LinkedIn
WhatsApp
ನಮ್ಮ ಯೋಧರ ಮೇಲೆ ದಾಳಿಯಾದ ಮರುಕ್ಷಣವೇ ಪ್ರತಿದಾಳಿ ನಡೆಸುತ್ತೇವೆ – ಅಮೆರಿಕ ಅಧ್ಯಕ್ಷ ಜೋ ಬಿಡೆನ್‌‌ ಎಚ್ಚರಿಕೆ.

ವಾಷಿಂಗ್ಟನ್: “ನಮ್ಮ ಯೋಧರ ಮೇಲೆ ದಾಳಿಯಾದ ಮರುಕ್ಷಣವೇ ನಾವು ಪ್ರತಿ ದಾಳಿ ಮಾಡುತ್ತೇವೆ” ಎಂದು ತಾಲಿಬಾನಿಗಳಿಗೆ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್‌‌ ಎಚ್ಚರಿಸಿದ್ದಾರೆ.

ಶುಕ್ರವಾರ ತಡರಾತ್ರಿ ಅಫ್ಗಾನಿಸ್ತಾನ್ ವಿಷಯದ ಬಗ್ಗೆ ಮಾತನಾಡಿದ ಅವರು, “ಜಗತ್ತಿನಲ್ಲಿ ಇದು ಅತೀ ದೊಡ್ಡ ಸಮಸ್ಯೆಯಾಗಿದೆ. ಅಫ್ಗಾನ್‌ ನೆಲೆಯನ್ನು ಭಯೋತ್ಪಾದನೆಗೆ ಬಳಸಲು ಬಿಡುವುದಿಲ್ಲ” ಎಂದಿದ್ದಾರೆ.
“ಜುಲೈ ತಿಂಗಳಿನಿಂದ ಈವರೆಗೆ ನಾವು 18 ಸಾವಿರಕ್ಕೂ ಅಧಿಕ ಹಾಗೂ ಆಗಸ್ಟ್‌ 14ರ ಬಳಿಕ 13 ಸಾವಿರ ಜನರನ್ನು ಕಾಬೂಲ್‌ನಿಂದ ಸ್ಥಳಾಂತರ ಮಾಡಿದ್ದೇವೆ. ಜನರ ಏರ್‌ ಲಿಫ್ಟ್‌ ಕಾರ್ಯ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕಾಬೂಲ್‌ನಲ್ಲಿರುವ ಜನರ ಏರ್‌ಲಿಫ್ಟ್‌ ಮಾಡುವಲ್ಲಿ ಅಮೇರಿಕಾ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದ್ದಾರೆ.

“ಅಫ್ಗಾನಿಸ್ತಾನದೊಂದಿಗೆ ನಾವು 20 ವರ್ಷ ಕೆಲಸ ಮಾಡಿದ್ದೇವೆ. ಕಾಬೂಲ್‌ನಲ್ಲಿ ಸದ್ಯ ಅಮೇರಿಕಾದ 6 ಸಾವಿರ ಸೈನಿಕರಿದ್ದಾರೆ. ಒಂದು ವೇಳೆ ತಾಲಿಬಾನಿಗಳು ಅಮೇರಿಕಾ ಸೇನೆಯ ಮೇಲೆ ದಾಳಿ ಮಾಡಿದ್ದಲ್ಲಿ, ಮರುಕ್ಷಣವೇ ನಾವು ಪ್ರತಿದಾಳಿ ನಡೆಸುತ್ತೇವೆ. ಮುಂದಿನ ವಾರದಲ್ಲಿ ಅಫ್ಗಾನಿಸ್ತಾನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು” ಎಂದಿದ್ದಾರೆ.
“ನಮ್ಮ ಸೈನಿಕರು ಸದ್ಯ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಭದ್ರತೆ ನೀಡಿದ್ದು, ಜನರ ಏರ್‌ಲಿಫ್ಟ್‌ ಮಾಡಲು ಸಹಾಯ ಮಾಡುತ್ತಿದ್ದಾರೆ. ಅಮೇರಿಕಾ ಸೇರಿದಂತೆ ಬೇರೆ ದೇಶದ ಚಾರ್ಟರ್‌ ವಿಮಾನ ಹಾಗೂ ಜನರಿಗೆ ಅಮೇರಿಕಾ ಸೇನೆ ರಕ್ಷಣೆ ನೀಡುವ ಕಾರ್ಯವನ್ನು ಮಾಡುತ್ತಿವೆ” ಎಂದು ತಿಳಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು