ಭಾನುವಾರ, ಮೇ 26, 2024
ಎಸ್ಆರ್ ಹೆಚ್ ತಂಡದ ಮಾಲಕಿ ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ಹಿನ್ನೆಲೆ ಏನು..!-ಉಡುಪಿ: ನಡು ರಸ್ತೆಯಲ್ಲೇ ಎರಡು ತಂಡದ ಯುವಕರ ನಡುವೆ ಗ್ಯಾಂಗ್ ವಾರ್; ಇಲ್ಲಿದೆ ವಿಡಿಯೋ-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಪೋರ್ಷೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತನ ತಂದೆಗೆ ನ್ಯಾಯಾಂಗ ಬಂಧನ ; ಇಬ್ಬರು ಪೊಲೀಸರು ಅಮಾನತು..!-miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?-ಮಧ್ಯಪ್ರಿಯರಿಗೆ ಜೂನ್ ಮೊದಲ ವಾರದಲ್ಲಿ ಎಣ್ಣೆ ಸಿಗೋದು ಡೌಟ್..!-ಹಾರ್ದಿಕ್ ಪಾಂಡ್ಯಾ ಮತ್ತು ನತಾಶಾ ದಾಂಪತ್ಯ ಜೀವನದಲ್ಲಿ ಬಿರುಕು? ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ಸುದ್ದಿ..!-ಧರ್ಮಸ್ಥಳದಿಂದ ವಾಪಸ್ಸಾಗುತ್ತಿದ್ದ ವೇಳೆ ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ..!-ಅಚ್ಚರಿ ಘಟನೆ; ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!

Twitter
Facebook
LinkedIn
WhatsApp
ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!

ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಅವರಿಗೆ ಬೆಂಗಳೂರು ಟ್ರಾಫಿಕ್‌ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ಧಾರಾವಾಹಿಯ ದೃಶ್ಯವೊಂದರಲ್ಲಿ ಹೆಲ್ಮೆಟ್‌ ಧರಿಸದೆ ಸ್ಕೂಟರ್‌ನಲ್ಲಿ ಸಂಚರಿಸಿದ ಕಾರಣಕ್ಕೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಸದ್ಯ ಝೀ ಕನ್ನಡ ವಾಹಿನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ʼಸೀತಾ ರಾಮʼ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ನಾಯಕಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2023ರ ಜುಲೈ 17ರಂದು ಆರಂಭವಾದ ಈ ಧಾರಾವಾಹಿ ವೀಕ್ಷಕರ ಗಮನ ಸೆಳೆಯುತ್ತಿದೆ. ಆರಂಭವಾಗಿ ಸುಮಾರು 10 ತಿಂಗಳು ಕಳೆದಿದ್ದರೂ ಈಗಲೂ ಟಾಪ್‌ ಲಿಸ್ಟ್‌ನಲ್ಲಿದೆ. ಉತ್ತಮ ಟಿಆರ್‌ಪಿ ಪಡೆದುಕೊಳ್ಳುತ್ತಿರುವ ಈ ಧಾರಾವಾಹಿಯ ದೃಶ್ಯವೇ ಸದ್ಯ ವೈಷ್ಣವಿ ಗೌಡ ಅವರಿಗೆ ಫಜೀತಿ ತಂದಿಟ್ಟಿದೆ.

ಏನಿದು ಪ್ರಕರಣ?

ʼಸೀತಾ ರಾಮʼ ಧಾರಾವಾಹಿಯ 14ನೇ ಸಂಚಿಕೆಯ ದೃಶ್ಯ ಸದ್ಯ ಪ್ರಕರಣದ ಕೇಂದ್ರ ಬಿಂದು. ಇದರಲ್ಲಿ ಸೀತಾ (ವೈಷ್ಣವಿ ಗೌಡ) ಹಾಗೂ ಆಕೆಯ ಗೆಳೆತಿ ಪ್ರಿಯಾ (ಶ್ವೇತಾ ಶಂಕರಪ್ಪ) ಸ್ಕೂಟರ್‌ನಲ್ಲಿ ತೆರಳುವ ದೃಶ್ಯವಿದೆ. ಸ್ಕೂಟರ್‌ ಓಡಿಸುತ್ತಿದ್ದ ಶ್ವೇತಾ ಹೆಲ್ಮೆಟ್ ಧರಿಸಿದ್ದರೆ ಹಿಂದಿನ ಸೀಟಿನಲ್ಲಿದ್ದ ವೈಷ್ಣವಿ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಉಲ್ಲೇಖಿಸಿ ಮಂಗಳೂರಿನ ಜಯಪ್ರಕಾಶ್‌ ಎಕ್ಕೂರು ಎನ್ನುವವರು ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು. ವೈಷ್ಣವಿ ಗೌಡ ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರಿಗೆ ಬಳಿಕ ಧಾರಾವಾಹಿಯ ಶೂಟಿಂಗ್ ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ನಡೆದ ವಿಚಾರ ಗೊತ್ತಾಗಿತ್ತು. ಬಳಿಕ ಇದನ್ನು ಬೆಂಗಳೂರಿನ ರಾಜಾಜಿನಗರ ಠಾಣೆಗೆ ವರ್ಗಾಯಿಸಲಾಯಿತು. ಸದ್ಯ ಸ್ಕೂಟರ್‌ ಮಾಲೀಕರಾದ ಸವಿತಾ ಹಾಗೂ ವೈಷ್ಣವಿ ಅವರಿಗೆ ತಲಾ 500 ರೂ. ದಂಡ ವಿಧಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಸ್ಪರ್ಧಿ ಆಗಿದ್ದ ಅವರು ಆ ಬಳಿಕ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸೋಕೆ ಆರಂಭಿಸಿದರು. ಈ ಧಾರಾವಾಹಿ ಇತ್ತೀಚೆಗೆ 200 ಎಪಿಸೋಡ್ ಪೂರ್ಣಗೊಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ