ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಟಿ ರಾಖಿ ಸಾವಂತ್‌ರನ್ನು ಬಂಧಿಸಿದ ಮುಂಬೈ ಪೊಲೀಸರು!

Twitter
Facebook
LinkedIn
WhatsApp
274361540 500525321440957 2990542648308107578 n

ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಂಡಿರುತ್ತಾರೆ. ಇದೀಗ ಈ ನಟಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಕೇಸ್‌ವೊಂದರಲ್ಲಿ ರಾಖಿ ಸಾವಂತ್‌ರನ್ನು ಮುಂಬೈನ ಅಂಬೋಲಿ ಪೊಲೀಸರು ಗುರುವಾರ (ಜ.19) ಅರೆಸ್ಟ್ ಮಾಡಿದ್ದಾರೆ. ಅದಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿ ಸಾವಂತ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಬುಧವಾರ (ಜ.18) ವಿಚಾರಣೆ ನಡೆಸಿದ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆ ಹಿನ್ನೆಲೆಯಲ್ಲಿ ಇಂದು ಅವರನ್ನು ಬಂಧಿಸಲಾಗಿದೆ.

ದೂರು ನೀಡಿದ್ದ ಶೆರ್ಲಿನ್ ಚೋಪ್ರಾ
ಕಳೆದ ವರ್ಷ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಶೆರ್ಲಿನ್ ಚೋಪ್ರಾ ಮೀಟೂ ಆರೋಪ ಮಾಡಿದ್ದರು. ಆ ಕುರಿತಂತೆ ತಮ್ಮ ಹೇಳಿಕೆಯನ್ನು ಹಂಚಿಕೊಂಡಿದ್ದ ಶೆರ್ಲಿನ್ ಚೋಪ್ರಾ, ಬಳಿಕ ಸಲ್ಮಾನ್ ಖಾನ್‌ ಅವರನ್ನು ದೂರಿದ್ದರು. ಈ ಪ್ರಕರಣದಲ್ಲಿ ಸಾಜಿದ್ ಖಾನ್‌ರನ್ನು ಸಲ್ಮಾನ್ ರಕ್ಷಿಸುತ್ತಿದ್ದಾರೆ ಎಂದಿದ್ದರು. ಆದರೆ ಈ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿದ್ದ ರಾಖಿ ಸಾವಂತ್‌ ಶೆರ್ಲಿನ್ ಚೋಪ್ರಾ ಹೇಳಿಕೆಯನ್ನು ಖಂಡಿಸಿದ್ದರು ಮತ್ತು ಸಾಜಿದ್ ಖಾನ್‌ ಪರ ಬ್ಯಾಟ್ ಬೀಸಿದ್ದರು. ಆಗ ತಮ್ಮ ಮಾನಹಾನಿ ಆಗುವಂತೆ ಆಕ್ಷೇಪಾರ್ಹ ಭಾಷೆ ಬಳಸಿ ರಾಖಿ ಹೇಳಿಕೆ ನೀಡಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.

May be an image of 1 person

ಟ್ವೀಟ್ ಮಾಡಿರುವ ಶೆರ್ಲಿನ್
ರಾಖಿ ಸಾವಂತ್ ಅರೆಸ್ಟ್‌ಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಶೆರ್ಲಿನ್, ‘ಬ್ರೇಕಿಂಗ್ ನ್ಯೂಸ್‌!! ಅಂಬೋಲಿ ಪೊಲೀಸರು FIR 883/2022 ಸಂಬಂಧಿಸಿದಂತೆ ರಾಖಿ ಸಾವಂತ್‌ರನ್ನು ಅರೆಸ್ಟ್ ಮಾಡಿದ್ದಾರೆ. ರಾಖಿ ಸಾವಂತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ಕೋರ್ಟ್ ವಜಾ ಮಾಡಿದೆ..’ ಎಂದು ಬರೆದುಕೊಂಡಿದ್ಧಾರೆ.

ರಾಖಿ ಮದುವೆ ಸುದ್ದಿ ಬಹಿರಂಗ
ಈಚೆಗಷ್ಟೇ ರಾಖಿ ಸಾವಂತ್ ಅವರ ಮದುವೆ ಸುದ್ದಿ ಬಹಿರಂಗವಾಗಿತ್ತು. ಆದಿಲ್ ಜೊತೆಗೆ ರಾಖಿ ಸಾವಂತ್ 7 ತಿಂಗಳ ಹಿಂದೆಯೇ ಮದುವೆ ಆಗಿದ್ದಾರೆ. ‘ಆದಿಲ್ ಭೇಟಿಯಾಗಿ ಕೆಲ ತಿಂಗಳಾದ ನಂತರದಲ್ಲಿ ಮದುವೆ ಆಯಿತು. ಕಳೆದ ವರ್ಷ ಜುಲೈನಲ್ಲಿ ನಾನು ಮತ್ತು ಆದಿಲ್ ಮದುವೆಯಾದೆವು. ನಮ್ಮ ಮದುವೆ ಬಗ್ಗೆ ಗೊತ್ತಾದರೆ ತಂಗಿಗೆ ಹುಡುಗನನ್ನು ಹುಡುಕೋದು ಕಷ್ಟ ಅಂತ ಹೇಳಿದ್ರು. ರಾಖಿ ಸಾವಂತ್ ಜೊತೆ ಇದ್ದೇನೆ ಎಂದರೆ ಅದು ನಾಚಿಕೆ ಕೆಲಸ ಎಂದು ಆದಿಲ್ ಅಂದುಕೊಂಡಿದ್ದಾನೆ.. ನಾನು ಆದಿಲ್‌ರನ್ನು ಮದುವೆಯಾಗಿದ್ದೇನೆ ಎಂದು ಜಗತ್ತಿಗೆ ಹೇಳಬೇಕಿತ್ತು, ಆದರೆ ಹೇಳಲಾಗಲಿಲ್ಲ. ನಿಜಕ್ಕೂ ಆದಿಲ್ ಯಾಕೆ ನಮ್ಮ ಮದುವೆಯನ್ನು ಗುಟ್ಟಾಗಿ ಇಡುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ಪಾಲಕರಿಗೆ ಹೆದರಿ ಅವನು ಸುಮ್ಮನಿದ್ದಾನಾ ಎಂಬುದು ಗೊತ್ತಿಲ್ಲ. ಹಿಂದು ಹುಡುಗಿಯನ್ನು ಮದುವೆಯಾದೆ ಅಂತ ಆದಿಲ್ ಈ ರೀತಿ ಮಾಡುತ್ತಿದ್ದಾನಾ ಎಂದು ಕೂಡ ಗೊತ್ತಿಲ್ಲ..’ ಎಂದು ಈಚೆಗಷ್ಟೇ ರಾಖಿ ಸಾವಂತ್ ಹೇಳಿಕೆ ನೀಡಿದ್ದರು

May be an image of one or more people, long hair and people standing

ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದ ರಾಖಿ ಸಾವಂತ್ ಈಗ ಶೆರ್ಲಿನ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಅವರ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ಕಡೆಗೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ರಾಖಿ ಸಾವಂತ್ ಹೈಡ್ರಾಮಾಗೆ ಫುಲ್ ಸ್ಟಾಪ್ ಇಟ್ಟ ಆದಿಲ್ ಖಾನ್ ದುರಾನಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ