Friday, December 2, 2022
ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್-ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ-ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ-6ನೇ ತರಗತಿಯ ಬಾಲಕ ಹೃದಯಾಘಾತದಿಂದ ಸಾವು-ಭಾರತವಿಂದು ಜಗತ್ತಿನ ನಂ.1 ಹಾಲು ಉತ್ಪಾದಕ: ಕೇಂದ್ರ ಸಚಿವ ಪರುಷೋತ್ತಮ ರೂಪಲಾ-ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಮಗೆ ಪಾಠ ಮಾಡಬೇಕಿಲ್ಲ, ವಿಶ್ವಸಂಸ್ಥೆಗೆ ಭಾರತದ ದಿಟ್ಟ ಉತ್ತರ!-ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು-ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್-ಸೇಡು ತೀರಿಸಿಕೊಳ್ಳಲು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ 15ರ ಬಾಲಕ-ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯ 'ಸಮೃದ್ಧ ಕೊಡಗು' ಪರಿಕಲ್ಪನೆಯ ಮೂಲಕ ಕೊಡಗಿನಲ್ಲಿ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಧರ್ಮಸ್ಥಳ: ಬೊಲೋರೊ ವಾಹನ - ಸರ್ಕಾರಿ ಬಸ್ ಢಿಕ್ಕಿ, ಓರ್ವ ಸ್ಥಳದಲ್ಲೇ ಸಾವು -ಮಗು ಸೇರಿ ಏಳು ಮಂದಿಯ ಸ್ಥಿತಿ ಗಂಭೀರ

Twitter
Facebook
LinkedIn
WhatsApp

ಧರ್ಮಸ್ಥಳ: ಸರ್ಕಾರಿ  ಬಸ್ ಹಾಗೂ ಬೊಲೆರೋ ಕಾರಿನ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ  ಏಳುಮಂದಿ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳದ ಕುದ್ರಾಯ ಎಂಬಲ್ಲಿ  ಸಂಭವಿಸಿದೆ.

ಮಂಡ್ಯ ಜಿಲ್ಲೆಯಿಂದ ಹತ್ತು ಮಂದಿಯ ಕುಟುಂಬ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸುತ್ತಿತ್ತು. ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ವಾಹನವನ್ನು ರಸ್ತೆಯ ಬಲಕ್ಕೆ ಪಾರ್ಕ್ ಮಾಡಿ ನಿಲ್ಲಿಸಿ ಇಳಿದು ಅಂಗಡಿಗೆ ಹೋಗುತ್ತಿದ್ದ ವೇಳೆ ಧರ್ಮಸ್ಥಳ ಡಿಪೋದಿಂದ ಮೈಸೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ನಿಂತಿದ್ದವರಿಗೆ ಹಾಗೂ ಬೊಲೋರೊ ವಾಹನಕ್ಕೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ .

ಅಪಘಾತದಲ್ಲಿ ಚೆನ್ನಸಾಂದ್ರ ನಿವಾಸಿ ಮಾಹದೇವ(63) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐವರು ಮಹಿಳೆಯರು,  ಓರ್ವ ಗಂಡಸು, ಒಂದು ಮಗು ಸೇರಿ ಏಳು ಮಂದಿಗೆ ಗಂಭೀರ ಗಾಯವಾಗಿದ್ದು, ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಕುರಿತಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ