ಬುಧವಾರ, ಫೆಬ್ರವರಿ 8, 2023
ಟರ್ಕಿ ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 8 ಸಾವಿರ; ಗಾಯಾಳುಗಳ ಸಂಖ್ಯೆ 35 ಸಾವಿರ, ರಕ್ಷಣಾ ಕಾರ್ಯಕ್ಕೆ ಅಡಚಣೆ-ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು-ಕಾರ್ಕಳ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ-ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು-ಬೈಕ್‌ನಲ್ಲಿ ರಾಂಚಿ ಸ್ಟೇಡಿಯಂನಿಂದ ಬಿಂದಾಸ್‌ ಆಗಿ ಹೊರಟ ಎಂ ಎಸ್ ಧೋನಿ..! ವಿಡಿಯೋ ವೈರಲ್-ಹೊಸ ಮುಖದ ಬಗ್ಗೆ ರಾಹುಲ್ ಗಾಂಧಿ ಒಲವು. ಕೊಡಗಿನಲ್ಲಿ ಪೊನ್ನನ್ನ,ಡಾ. ಮಂತರ್ ಗೌಡ, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಬಹುತೇಕ ಫಿಕ್ಸ್.-ಡಿಕ್ಕಿಹೊಡೆದ ಗಡಿಬಿಡಿಗೆ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ; ಬೈಕ್ ಸವಾರ ಸ್ಥಳದಲ್ಲಿಯೇ ಸಾವು-ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ-ಮಂಗಳೂರು: ವಿಷಾಹಾರ ಸೇವಿಸಿದ ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ ಹಲವರು ಚೇತರಿಕೆ-ಬೆಳ್ತಂಗಡಿ: ಏಕಾಲದಲ್ಲಿ ಉಜಿರೆಯ ಲಾಡ್ಜ್‌‌ಗಳ ಮೇಲೆ ವಿಶೇಷ ಪೊಲೀಸ ತಂಡ ದಾಳಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

Twitter
Facebook
LinkedIn
WhatsApp
ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

ಬಿಗ್ ಬಾಸ್ ಮನೆಯಲ್ಲಿ (Bigg boss) ಹೈಲೈಟ್ ಆಗಿರುವ ಮತ್ತೊಂದು ಜೋಡಿ ಅಂದ್ರೆ ರಾಕೇಶ್ ಅಡಿಗ (Rakesh Agiga) ಮತ್ತು ಅಮೂಲ್ಯ ಗೌಡ (Amulya Gowda) ಇದೀಗ ಬೇರೆ ಬೇರೇ ಆಗಿದ್ದಾರೆ. ಟೀ ವಿಚಾರಕ್ಕೆ ಮನಸ್ತಾಪ ಆಗಿ, ದೂರ ದೂರ ಆಗಿದ್ದಾರೆ.

ದೊಡ್ಮನೆಯಲ್ಲಿ ಸೋನು ನಂತರ ರಾಕೇಶ್‌ಗೆ ಸಖತ್ ಕ್ಲೋಸ್ ಆಗಿರೋದೆ ಅಮೂಲ್ಯ ಗೌಡ, ಮೊದಲಿನಿಂದಲೂ ಅಮ್ಮು ಮತ್ತೆ ರಾಕಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಪ್ರಶಂಸೆ ವ್ಯಕ್ತಪಡಿಸುತ್ತಿದ್ದ ಈ ಜೋಡಿಯ ನಡುವೆ ಬಿರುಕು ಉಂಟಾಗಿದೆ. ಟೀ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಗಲಾಟೆನೇ ಆಗಿದೆ. ಅಮ್ಮು ಮುನಿಸಿಗೆ ರಾಕಿ ಮನವೊಲಿಸಲು ಸೋತಿದ್ದಾರೆ. 

ಟೀ ಅವರವರೇ ಮಾಡಿಕೋತ್ತಾರಾ, ಎಲ್ಲರಿಗೂ ಮಾಡೋದಾ ಎಂದು ರಾಕಿ ಮನೆ ಮಂದಿಗೆ ಕೇಳಿದ್ದಾರೆ. ಈ ವೇಳೆ ನನಗೆ ಹಾಲಿಗೆ ಜಾಸ್ತಿ ನೀರು ಹಾಕಬೇಡಿ. ನನಗೆ ಒಂದು ಪ್ಯಾಕೇಟ್ ಹಾಲು ಕೊಟ್ಟು ಬಿಡಿ ಎಂದು ಈ ವೇಳೆ ಅಮೂಲ್ಯ ಹೇಳಿದ್ದಾರೆ. ನನಗೆ ಪ್ರತಿಕ್ರಿಯೆ ನೀಡಿಲ್ಲ ನೀವು ಎಂದು ಅಮ್ಮು, ರಾಕಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾರಿ ಈ ವೇಳೆ ನನ್ನ ಗಮನಕ್ಕೆ ಬಂದಿಲ್ಲ ಎಂದ ರಾಕಿ ಮಾತಿಗೆ, ನಾನು ನಿಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದು ಹಿಂಸೆ ಆಯ್ತು. ನೀವು ಎರಡು ಹೆಜ್ಜೆ ಮುಂದೆ ಬಂದಿದ್ದರೆ ನಿಮ್ಮ ಇಗೋ ಕಮ್ಮಿಯಾಗುತ್ತಿರಲಿಲ್ಲ ಎಂದಿದ್ದಾರೆ.

ನನಗೆ ಕಾಮನ್ ಸೆನ್ಸ್ ಇಲ್ಲಾ, ನಿಮ್ಮ ಅಷ್ಟು ಥಿಂಕಿಂಗ್ ಲೆವಲ್‌ಗೆ ನಾನಿಲ್ಲ ಎಂದು ರಾಕಿ ಮುಂದೆ ಕಣ್ಣೀರಿಟ್ಟಿದ್ದಾರೆ. ಒಟ್ನಲ್ಲಿ ರಾಕಿ ಕ್ಯಾಪ್ಟೆನ್ಸಿ ಸಮಯದಲ್ಲಿ ಟೀ ವಿಚಾರಕ್ಕೆ ದೊಡ್ಡ ಕಲಹ ಉಂಟಾಗಿದೆ. ಈ ಜೋಡಿ ಇದೀಗ ದೂರ ದೂರ ಆಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ