ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೇಶದ ನೌಕಾಪಡೆ ಬತ್ತಳಿಕೆಗೆ ‘ಐಎನ್‌ಎಸ್‌ ವಾಗೀರ್‌’ ಜಲಾಂತರ್ಗಾಮಿ ಬಲ! ರಹಸ್ಯವಾಗಿ ಎದುರಾಳಿ ಪಡೆಗಳನ್ನು ನಾಶಗೊಳಿಸುವ ಸಾಮರ್ಥ್ಯ

Twitter
Facebook
LinkedIn
WhatsApp
ms 230123 vageer

ಮುಂಬೈ (ಜನವರಿ 24, 2023): ಹಿಂದೂ ಮಹಾಸಾಗರದ ಮೇಲೆ ಕಣ್ಣಿಟ್ಟು ಅಲ್ಲಿ ತನ್ನ ಚಟುವಟಿಕೆಯನ್ನು ಚೀನಾ ತೀವ್ರಗೊಳಿಸಿರುವಾಗಲೇ, ಭಾರತೀಯ ಸೇನೆಗೆ ಪ್ರಬಲ ಅಸ್ತ್ರವೊಂದು ಸೇರ್ಪಡೆಯಾಗಿದೆ. ‘ಐಎನ್‌ಎಸ್‌ ವಾಗೀರ್‌’ ಎಂಬ ಜಲಾಂತರ್ಗಾಮಿ ನೌಕೆ (ಸಬ್‌ ಮರೀನ್‌) ಸೋಮವಾರ ನೌಕಾಪಡೆ ಸೇವೆಗೆ ಸಮರ್ಪಣೆಯಾಗಿದೆ. ರಹಸ್ಯವಾಗಿ ಎದುರಾಳಿ ಪಡೆಗಳನ್ನು ನಾಶಗೊಳಿಸುವ ಸಾಮರ್ಥ್ಯ ಹೊಂದಿರುವ ಈ ಸಬ್‌ ಮರೀನ್‌ನಿಂದಾಗಿ ಭಾರತೀಯ ನೌಕಾಪಡೆಯ ಬಲ ಮತ್ತಷ್ಟು  ವೃದ್ಧಿಯಾದಂತಾಗಿದೆ. ವಿಶೇಷ ಎಂದರೆ, ಕಳೆದ 24 ತಿಂಗಳ ಅವಧಿಯಲ್ಲಿ ನೌಕಾಪಡೆ ಸೇರುತ್ತಿರುವ ಮೂರನೇ ಜಲಾಂತರ್ಗಾಮಿ ನೌಕೆ ಇದು. ಫ್ರಾನ್ಸ್‌ನಿಂದ ತಂತ್ರಜ್ಞಾನ ವರ್ಗಾಯಿಸಿಕೊಂಡು ಮುಂಬೈನ ಮಜಗಾಂವ್‌ ಡಾಕ್‌ ಶಿಪ್‌ಬಿಲ್ಡ​ರ್ಸ್‌ ಸಂಸ್ಥೆ ಈ ನೌಕೆಯನ್ನು ನಿರ್ಮಾಣ ಮಾಡಿದೆ.

‘ವಾಗೀರ್‌’ (Vagir) ಎಂದರೆ ಸಮುದ್ರ ಜೀವಿಯಾಗಿರುವ ಸ್ಯಾಂಡ್‌ ಶಾರ್ಕ್ ಎಂದರ್ಥ. ಈ ನೌಕೆ 220 ಅಡಿ ಉದ್ದ, 40 ಅಡಿ ಎತ್ತರವಿದೆ. ನೀರಿನೊಳಗೆ (Under Water) ಸೇರಿದರೆ 50 ದಿನ ಮೇಲೆ ಬರದೆ ಚಲಿಸಬಲ್ಲದು. ನೌಕಾಪಡೆ ಮುಖ್ಯಸ್ಥ (Chief of the Naval Staff) ಅಡ್ಮಿರಲ್‌ ಆರ್‌. ಹರಿಕುಮಾರ್‌ (Admiral R . Harikumar) ಸಮ್ಮುಖ ಈ ನೌಕೆಯನ್ನು ಸೇವೆಗೆ ಸೇರಿಸಿಕೊಳ್ಳಲಾಗಿದೆ. ಈ ನೌಕೆ ಮಾರಕ ವೇದಿಕೆಯಾಗಿದ್ದು, ಬಲಿಷ್ಠ ಶಸ್ತ್ರಾಸ್ತ್ರಗಳು, ಕಣ್ತಪ್ಪಿಸಿ ದಾಳಿ ನಡೆಸುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಇದರಿಂದ ನೌಕಾಪಡೆಯ ದಾಳಿ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ಹರಿಕುಮಾರ್‌ ತಿಳಿಸಿದ್ದಾರೆ.

ಫ್ರಾನ್ಸ್‌ (France) ಜತೆ ಒಪ್ಪಂದ ಮಾಡಿಕೊಂಡು ಮುಂಬೈನಲ್ಲಿ ಒಟ್ಟು 6 ಸಬ್‌ ಮರೀನ್‌ಗಳನ್ನು (Sub Marines) ನಿರ್ಮಾಣ ಮಾಡಲು ಭಾರತ ಉದ್ದೇಶಿಸಿದೆ. ಆ ಪೈಕಿ ವಾಗೀರ್‌ ಐದನೆಯದ್ದು. ಮತ್ತೊಂದು ಮುಂದಿನ ವರ್ಷ ಸೇವೆಗೆ ದೊರೆಯಲಿದೆ. 1973ರಿಂದ 2001ರವರೆಗೆ ಭಾರತೀಯ ನೌಕಾಪಡೆಯಲ್ಲಿ ವಾಗೀರ್‌ ಎಂಬ ಸಬ್‌ಮರೀನ್‌ ಸೇವೆ ಸಲ್ಲಿಸಿತ್ತು. ಇದೀಗ ಅದೇ ಹೆಸರನ್ನು ಬಳಸಿಕೊಳ್ಳಲಾಗಿದೆ.

ವಾಗೀರ್‌ ವೈಶಿಷ್ಟ್ಯ
2009ರಿಂದ ವಾಗೀರ್‌ ನೌಕೆಯ ನಿರ್ಮಾಣ ಆರಂಭವಾಗಿತ್ತು. ಕಳೆದ ಫೆಬ್ರವರಿಯಲ್ಲಿ ಅದು ಮೊದಲ ಸಂಚಾರ ಆರಂಭಿಸಿತ್ತು. 11 ತಿಂಗಳ ಕಾಲ ಸಮುದ್ರ ಯಾನ ನಡೆಸಿತ್ತು. 2022ರ ಡಿಸೆಂಬರ್‌ನಲ್ಲಿ ನೌಕಾಪಡೆಗೆ ಹಸ್ತಾಂತರ ಮಾಡಲಾಗಿತ್ತು. ಸಮುದ್ರದಾಳದಿಂದ ನೆಲದ ಮೇಲಿನ ಗುರಿಗಳಿಗೆ ದಾಳಿ ನಡೆಸಲು, ಸಬ್‌ ಮರೀನ್‌ಗಳ ಮೇಲೆ ಎರಗಲು, ಗುಪ್ತಚರ ಮಾಹಿತಿ ಸಂಗ್ರಹಿಸಲು, ಬಾಂಬ್‌ ಇಡಲು, ಸರ್ವೇಕ್ಷಣೆ ಸೇರಿ ಹಲವು ಕೆಲಸಗಳಿಗೆ ಈ ನೌಕೆ ಉಪಯೋಗಕ್ಕೆ ಬರಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ