ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೇವೇಗೌಡರ ಭೇಟಿ ಮಾಡಿ ಆಶೀರ್ವಾದ ಪಡೆದ ಸಿಎಂ ಬೊಮ್ಮಾಯಿ.

Twitter
Facebook
LinkedIn
WhatsApp
ಒಲಿಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಈಜುಗಾರ್ತಿ; ವಿಶ್ವ ದಾಖಲೆ ನಿರ್ಮಿಸಿದ ಎಮ್ಮಾ ಮೆಕಿಯನ್‌!

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ. ಈ ವೇಳೆಯಲ್ಲಿ ರಾಜ್ಯದ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಾರೆ. ಅಲ್ಲದೇ ಮೇಕೆದಾಟು ಯೋಜನೆಯ ವಿಚಾರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಗೆ ಭೇಟಿ ನೀಡಿದ್ದ ಅವರು ದೇವೆಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆಯಲ್ಲಿ ದೇವೇಗೌಡ ರು ಬೊಮ್ಮಾಯಿ ಅವರನ್ನು ಸನ್ಮಾನಿಸಿ ಆಶೀರ್ವಾದ ಮಾಡಿದ್ದಾರೆ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸವರಾಜ್‌ ಬೊಮ್ಮಾಯಿ ಅವರು, ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದವನ್ನು ಪಡೆದುಕೊಂಡಿದ್ದು, ಖುಷಿಯಾಗಿದೆ ಎಂದಿದ್ದಾರೆ.

ತಾನು ಸಚಿವನಾಗಿದ್ದ ವೇಳೆಯಲ್ಲಿಯೂ ದೇವೇಗೌಡರು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನವನ್ನು ಮಾಡಿದ್ದಾರೆ. ಮುಂದೆಯೂ ಅವರ ಮಾರ್ಗದರ್ಶನವನ್ನು ಪಡೆಯುತ್ತೇನೆ. ರಾಜ್ಯದ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದೇನೆ. ಮೇಕೆದಾಟು ವಿಚಾರವಾಗಿ ಸರ್ವ ಪಕ್ಷ ಸಭೆ ಪಡೆದು ಮುಂದಿನ ಯೋಜನೆ ರೂಪಿಸಲಾಗುವುದು ಎಂದಿದ್ದಾರೆ.

ಈ ಹಿಂದೆ ಜನತಾದಳದಲ್ಲಿದ್ದ ಸಿಎಂ ಬೊಮ್ಮಾಯಿ ಹಾಗೂ ಜೆಡಿಎಸ್‌ ವರಿಷ್ಠ ದೇವೇಗೌಡರ ಭೇಟಿ ಇದೀಗ ಕುತೂಹಲವನ್ನು ಮೂಡಿಸಿದೆ. ಎಚ್.ಡಿ.ರೇವಣ್ಣ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು