ದೇವರಿಗೆ ನಾಲಿಗೆಯನ್ನೇ ಕತ್ತರಿಸಿ ದಾನ ಕೊಟ್ಟ ಅಂಧ ಭಕ್ತ
ಬಳ್ಳಾರಿ: ದೇವರನ್ನು ಒಲಿಸಿಕೊಳ್ಳಲು ವ್ಯಕ್ತಿಯೊಬ್ಬ (Man) ತನ್ನ ನಾಲಿಗೆಯನ್ನೇ (Tongue) ಕತ್ತರಿಸಿ ದಾನ ಕೊಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿ (Bellary) ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ್ ತನ್ನ ನಾಲಿಗೆಯನ್ನು ಕತ್ತರಿಸಿ ದಾನ ಕೊಟ್ಟಿದ್ದಾನೆ. ಆತ ದೇವರ ನಾಲಿಗೆ ಕೇಳಿದೆ ಎಂದು ಚಾಕುವಿನಿಂದ ತನ್ನ ನಾಲಿಗೆಯನ್ನು ಕತ್ತರಿಸಿದ್ದಾನೆ. ಆತ ಶಂಕರಪ್ಪ ತಾತನಿಗಾಗಿ ನಾಲಿಗೆ ಕತ್ತರಿಸಿದ್ದಾನೆ ಎನ್ನಲಾಗಿದೆ.
ಇತ್ತೀಚೆಗೆ ಪೂಜಾರಿಯೊಬ್ಬರು ದೇವರ ವಿಗ್ರಹದ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದು ಎಲ್ಲೆಡೆ ವೈರಲ್ ಆಗಿತ್ತು. ಅದೇ ರೀತಿಯಾಗಿ ಕಣ್ಣುಗಳನ್ನು ನೀಡಿರುವಂತಹ ಘಟನೆಗಳು ಸಹ ನಡೆದಿದ್ದವು.
ವೀರೇಶ್ ನಾಲಿಗೆ ಕಟ್ ಮಾಡಿಕೊಂಡ ಭಕ್ತ. ಇದೇ ಭಕ್ತ ಒಂದು ವರ್ಷದ ಹಿಂದೆ ಬೆರಳು ಕಟ್ ಮಾಡಿಕೊಂಡು ದೇವರ ತಲೆಯ ಮೇಲೆ ಇಟ್ಟಿದ್ದ. ಈವಾಗ ತಮ್ಮ ನಾಲಿಗೆ ಕಟ್ ಮಾಡಿಕೊಳ್ಳುವ ಮೂಲಕ ಅಂಧ ಭಕ್ತಿ ಪ್ರದರ್ಶಿಸಿದ್ದಾನೆ.
ಬಲಕುಂದಿ ಗ್ರಾಮದ ಗುಡ್ಡದ ಮೇಲೆ ಇರುವ ಶಂಕರಪ್ಪ ದೇವಸ್ಥಾನದಲ್ಲಿ ಭಕ್ತ ವಿರೇಶ್ ಪ್ರತಿ ದಿನ ಪೂಜೆ ಮಾಡುತ್ತಿದ್ದ. ದೇವರನ್ನು ಒಲಿಸಿಕೊಳ್ಳಲು ನಾಲಗೆ ಕತ್ತರಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಚಾಕುವಿನಿಂದ ನಾಲಗೆ ಕತ್ತರಿಸಿಕೊಂಡಿದ್ದ ಯುವಕ ವೀರೇಶ್ ನಾಲಗೆ ಸಮೇತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಭಕ್ತನ ಹುಚ್ಚಾಟಕ್ಕೆ ಗ್ರಾಮಸ್ಥರು ಕಿಡಿಕಾರಿದ್ದು, ದೇವರಲ್ಲಿ ನಂಬಿಕೆ ಇರ್ಬೇಕು ಈ ರೀತಿ ಹುಚ್ಚು ನಂಬಿಕೆ ಇರಬಾರದು ಎಂದು ಹೇಳುತ್ತಿದ್ದಾರೆ.