ಶನಿವಾರ, ಜೂನ್ 15, 2024
ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!-HSRP ನಂಬರ್ ಪ್ಲೇಟ್ ಅಳವಡಿಸುವ ಬಗ್ಗೆ ಮಹತ್ವದ ಅಪ್ಡೇಟ್; ಇಲ್ಲಿದೆ ಮಾಹಿತಿ-ಇಂದು ಯುಎಸ್ಎ ಮತ್ತು ಭಾರತ ತಂಡ ಮುಖಾಮುಖಿ; ಯಾರಿಗೆ ಗೆಲುವು..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆ.!-ಉಳ್ಳಾಲ ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸಮುದ್ರ ಪಾಲು; ಮೂವರ ರಕ್ಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೆಹಲಿ ಶಾಸಕರಿಗೆ ಸಂಬಳ ಏರಿಕೆ. ಆದರೆ ದೇಶದಲ್ಲಿ ಕಡಿಮೆ ಸಂಬಳ ಇರುವ ಶಾಸಕರು ಇರುವುದು ದೆಹಲಿಯಲ್ಲಿ!!

Twitter
Facebook
LinkedIn
WhatsApp
ದೆಹಲಿ ಶಾಸಕರಿಗೆ ಸಂಬಳ ಏರಿಕೆ. ಆದರೆ ದೇಶದಲ್ಲಿ ಕಡಿಮೆ ಸಂಬಳ ಇರುವ ಶಾಸಕರು ಇರುವುದು ದೆಹಲಿಯಲ್ಲಿ!!

ನವದೆಹಲಿ:ಕೇಂದ್ರ ಸರ್ಕಾರವು ಅನುಮೋದಿಸಿದ ದೆಹಲಿ ನಗರದ ಶಾಸಕರ ಪರಿಷ್ಕೃತ ವೇತನವನ್ನು ದೆಹಲಿ ಸರ್ಕಾರವು ಸ್ವೀಕರಿಸಿದ್ದು, ಇದರ ಅಡಿಯಲ್ಲಿ ವೇತನ ಮತ್ತು ಭತ್ಯೆ ಸೇರಿ ತಿಂಗಳಿಗೆ 90,000 ರೂಪಾಯಿಗಳನ್ನು ಶಾಸಕರು ಪಡೆಯಲಿದ್ದಾರೆ.
ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಅನುಸಾರವಾಗಿ ಶಾಸಕರ ವೇತನ ಹೆಚ್ಚಳಕ್ಕೆ ದೆಹಲಿ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡಿದೆ ಎಂದು ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
“ಕೇಂದ್ರದ ಪ್ರಸ್ತಾವನೆಯಂತೆ ಶಾಸಕರ ವೇತನ ಹೆಚ್ಚಳಕ್ಕೆ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. ದೆಹಲಿ ಶಾಸಕರು ಕೇವಲ 30,000 ಸಾವಿರ ಸಂಬಳ ಪಡೆಯುತ್ತಾರೆ.  ದೆಹಲಿಯ ಶಾಸಕರು ಭಾರತದಾದ್ಯಂತ ಕಡಿಮೆ ಸಂಬಳ ಪಡೆಯುವ ಶಾಸಕರಾಗಿ ಮುಂದುವರಿಯಲಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ 10 ವರ್ಷಗಳಿಂದ ದೆಹಲಿ ಶಾಸಕರ ಸಂಬಳ ಮತ್ತು ಭತ್ಯೆಯನ್ನು ಹೆಚ್ಚಿಸಿರಲಿಲ್ಲ. ಶಾಸಕರ ಮೂಲ ಮಾಸಿಕ ವೇತನ 12,000 ರೂಪಾಯಿ, ಭತ್ಯೆಗಳು ಸೇರಿ 54,000 ಸಾವಿರ ರೂಪಾಯಿ ಪಡೆಯುತ್ತಿದ್ದರು. ಈಗ ಭತ್ಯೆ ಮತ್ತು ಸಂಬಳ ಸೇರಿ 90,000 ಸಾವಿರ ಪಡೆಯಲಿದ್ದಾರೆ.
 
ದೆಹಲಿಯಲ್ಲಿ ಜೀವನ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದರೂ, ಕೇಂದ್ರವು ವಿಧಿಸಿರುವ ನಿರ್ಬಂಧವು ದೆಹಲಿಯ ಶಾಸಕರನ್ನು ದೇಶದ ಅತ್ಯಂತ ಕಡಿಮೆ ಆದಾಯದ ಶಾಸಕರಲ್ಲಿ ಒಬ್ಬರನ್ನಾಗಿಸಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳ ಶಾಸಕರು ಸುಮಾರು 1.5 ಲಕ್ಷ ವೇತನ ಪಡೆಯುತ್ತಾರೆ. ಇದು  ದೆಹಲಿಯ ಶಾಸಕರು ಗಳಿಸುವ ಮೊತ್ತಕ್ಕಿಂತ 2 ಪಟ್ಟು ಹೆಚ್ಚು. 2011 ರಿಂದ ದೆಹಲಿಯ ಶಾಸಕರ ಸಂಬಳ ಏರಿಕೆಯಾಗಿಲ್ಲ. ದೆಹಲಿಯ ಶಾಸಕರು ಇತರ ರಾಜ್ಯಗಳ ಶಾಸಕರ ವೇತನ ಸರಿಸಮಾನವಾಗಿರಬೇಕು ಎಂದು ದೆಹಲಿ ಸರ್ಕಾರ MHA ಗೆ ಮನವಿ ಮಾಡಿತ್ತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಟ್ಟು 90,000 ರೂಪಾಯಿಗಳಲ್ಲಿ 30,000 ಮೂಲ ವೇತನ, 25,000 ಕ್ಷೇತ್ರ ಭತ್ಯೆ, 15,000 ಸೆಕ್ರೆಟರಿಯಟ್ ಭತ್ಯೆ, ದೂರವಾಣಿ ಮತ್ತು ಸಾರಿಗೆಗಾಗಿ ತಲಾ 10,000 ರೂಪಾಯಿಗಳನ್ನು ಒಳಗೊಂಡಿದೆ ಎಂದು ಸರ್ಕಾರ ತಿಳಿಸಿದೆ.
ಈ ಪ್ರಸ್ತಾವನೆಯು ಕಳೆದ ಐದು ವರ್ಷಗಳಿಂದ ಕೇಂದ್ರದ ಬಳಿಯಿತ್ತು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು