ದೆಹಲಿಯಲ್ಲಿ ಭೂಕಂಪ – ಮನೆಯಿಂದ ಹೊರ ಬಂದ ಜನತೆ
Twitter
Facebook
LinkedIn
WhatsApp
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (Delhi) ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭೂಕಂಪ (Earthquake) ಸಂಭವಿಸಿದ್ದು ಕಟ್ಟಡಗಳು ಅಲುಗಾಡಿವೆ.
ಭೂಕಂಪದ ಕೇಂದ್ರಬಿಂದುವನ್ನು ನೆರೆಯ ನೇಪಾಳದಲ್ಲಿ (Nepal) ಗುರುತಿಸಲಾಗಿದೆ. ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ವರದಿಗಳ ಪ್ರಕಾರ ದೆಹಲಿಯಲ್ಲಿ ಮಂಗಳವಾರ ಮಧ್ಯಾಹ್ನ 2:30ರ ವೇಳೆಗೆ ಭೂಕಂಪನದ ಅನುಭವವಾಗಿದೆ. ಜನರು ಭಯಭೀತರಾಗಿ ಮನೆ, ಕಚೇರಿಗಳಿಂದ ಹೊರಗೆ ಓಡಿದ್ದಾರೆ.
ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್, ಪಿಥೋರ್‌ಗಢ್ ಹಾಗೂ ಅಲ್ಮೋರಾ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿರುವುದಾಗಿ ವರದಿಯಾಗಿದೆ.ಸದ್ಯ ಇಲ್ಲಿಯವರೆಗೆ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.