ದುಡ್ಡು ತೆಗೆದುಕೊಂಡು ಸುದೀಪ್ ಸಿನೆಮಾ ಮಾಡಿಕೊಡ್ತಿಲ್ಲ; ನಿರ್ಮಾಪಕರ ಆರೋಪಕ್ಕೆ ಟ್ವಿಟ್ ಮೂಲಕ ಖಡಕಾಗಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್!
ನಟ ಸುದೀಪ್ ಅವರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ ಎಂಬ ನಿರ್ಮಾಪಕರ ಆರೋಪಕ್ಕೆ ಟ್ವೀಟ್ ಮೂಲಕ ಕಿಚ್ಚ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.ಡಿಸೆಂಬರ್ 2022 ರಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೂಲಕ ಸುದೀಪ್ ಅವರಿಗೆ ಆರು ಪತ್ರಗಳನ್ನು ಬರೆದಿದ್ದೇನೆ, ಆದರೆ ಅವುಗಳಲ್ಲಿ ಒಂದಕ್ಕೆ ಮಾತ್ರ ಉತ್ತರಿಸಲಾಗಿದೆ ಎಂದು ಎಂಎನ್ ಕುಮಾರ್ ಆರೋಪ ಮಾಡಿದ್ದಾರೆ.
ಆಂಗ್ಲ ಭಾಷೆಯ ವಾಕ್ಯವನ್ನು ಉಲ್ಲೇಖಿಸಿರುವ ಸುದೀಪ್, ‘ಇದು ನಿಮಗೆ ತಿಳಿದಿರಲಿ. ಒಳ್ಳೆಯತನವು ಕುಶಲತೆ ಮತ್ತು ದುರುಪಯೋಗದ ಸಾಧನವಲ್ಲ. ಅದು ನಿಜವಾಗಿ ಪ್ರಕಾಶಿಸುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ವಿನಮ್ರರಾಗಿರಿ ಮತ್ತು ಸತ್ಯವಂತರಾಗಿರಿ’ ಎಂದು ಅರ್ಥ ಬರುವ ಮಾತೊಂದನ್ನು ಪೋಸ್ಟ್ ಮಾಡಿರುವ ಸುದೀಪ್ ಈ ಕೋಟ್ ನನಗೆ ಇಷ್ಟವಾಯಿತು. ನೀವೂ ಓದಿ ಎಂದಿದ್ದಾರೆ.ನಿರ್ಮಾಪಕರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಸುದೀಪ್ ಈ ಟ್ವೀಟ್ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ, ಆದರೆ ಅವರ ಹಿತೈಷಿಗಳು ಹಾಗೂ ಹತ್ತಿರದವರು ಹೇಳುವ ಪ್ರಕಾರ, ಸುದೀಪ್ ಯಾರಿಗೂ ಹಿಂಜರಿಯುವುದಿಲ್ಲ, ತಮ್ಮ ವಿರುದ್ಧದ ಆರೋಪಗಳಿಗೆ ಅವರು ನೇರವಾಗಿಯೇ ಉತ್ತರ ತಿಳಿಸಲು ಬಯಸುತ್ತಾರೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು.
Read this quote,,, a very good one.??#GoodnessUncompromised#k46 pic.twitter.com/cOIQ38q00L
— Kichcha Sudeepa (@KicchaSudeep) July 4, 2023
ಕಿಚ್ಚ ಸುದೀಪ್ ದುಡ್ಡು ತಗೊಂಡು ಸಿನಿಮಾ ಮಾಡಿಕೊಡ್ತಿಲ್ಲ: ನಿರ್ಮಾಪಕ ಕುಮಾರ್
“ನಟ ಸುದೀಪ್ ಅವರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ. ನಾನು ಅವರಿಗೆ ಅಡ್ವಾನ್ಸ್ ಹಣ ನೀಡಿದ್ದೇನೆ, ಯಾವಾಗ ಕೇಳಿದ್ರೂ ನಾಳೆ ಅಂತಾರೆ, ಏನು ಮಾಡಬೇಕು” ಎಂದು ನಿರ್ಮಾಪಕ ಕುಮಾರ್ ಎನ್ನುವವರು ಗಂಭೀರ ಆರೋಪ ಮಾಡಿದ್ದಾರೆ.
“ನಾನು ಕೆಸಿಎನ್ ಮೂವೀಸ್ನಿಂದ ಬಂದವನು. ನಾನು ಸುದೀಪ್ ಅವರ ಜೊತೆ ರಂಗ ಎಸ್ಎಸ್ಎಲ್ಸಿ, ಮಾಣಿಕ್ಯ, ಮುಕುಂದ ಮುರಾರಿ, ಕಾಶಿ ಫ್ರಂ ವಿಲೇಜ್ ಮುಂತಾದ ಸಿನಿಮಾ ಮಾಡಿದ್ದೇನೆ. ಸ್ವಾತಿ ಮುತ್ತು, ವಿಷ್ಣುವರ್ಧನ ಸೇರಿ ಕೆಲ ಸಿನಿಮಾಗಳ ವಿತರಣೆ ಕೂಡ ಮಾಡಿದ್ದೇನೆ. ಕಳೆದ 8 ವರ್ಷಗಳಿಂದ ನಾನು ನಿಮ್ಮ ಸಿನಿಮಾ ಮಾಡುತ್ತೇನೆ ಅಂತ ಹೇಳಿಕೊಂಡು ಬರುತ್ತಲೇ ಇದ್ದಾರೆ. ನಾವು ಸುದೀಪ್ ಅವರ ಮ್ಯಾನೇಜರ್ ಬಳಿ ಕಾಂಟ್ಯಾಕ್ಟ್ ಮಾಡಿದಾಗಲೂ ಸಿನಿಮಾ ಮಾಡ್ತೀವಿ ಅಂತಲೇ ಹೇಳುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಆದಮೇಲೆ ನಮ್ಮ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ದರು. ನಂದಕಿಶೋರ್ ಅವರಿಗೆ ಹಣ ಕೊಡಿ, ಅವರು ಕಥೆ ಮಾಡಲಿ ಎಂದು ಸುದೀಪ್ ಹೇಳಿದಂತೆ ನಾವು ಮಾಡಿದ್ದೇವೆ. ಈಗ ಸುದೀಪ್ ಅವರು ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ” ಎಂದು ಕುಮಾರ್ ಅವರು ಆರೋಪ ಮಾಡಿದ್ದಾರೆ.
“ಕಿಚ್ಚ ಸುದೀಪ್ ಅವರು ನನ್ನ ಸಿನಿಮಾಗಳಿಂದ ಒಂದು ರೂಪಾಯಿನೂ ಬಿಟ್ಟಿಲ್ಲ. ಸುದೀಪ್ ಅವರನ್ನು ರಂಗ ಎಸ್ಎಸ್ಎಲ್ಸಿ ಸಿನಿಮಾ ಮೂಲಕ ವಿದೇಶಕ್ಕೆ ಕರೆದುಕೊಂಡು ಹೋಗಿ ಶೂಟಿಂಗ್ ಮಾಡಿದ್ದು ನಾವು. ನನ್ನಂತೆ ಬಹಳ ಜನರಿಗೆ ಈ ರೀತಿ ಆಗ್ತಿದೆ, ಆದರೆ ಯಾರೂ ಮುಂದೆ ಬಂದು ಮಾತನಾಡೋಕೆ ರೆಡಿ ಆಗಿಲ್ಲ” ಎಂದು ಕುಮಾರ್ ಹೇಳಿದ್ದಾರೆ.
“ಸುದೀಪ್ ಅವರ ಅಡುಗೆ ಮನೆ ರಿಪೇರಿಗೆ ನಾನು 10 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಅವರ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಫೋಟೋ ಇದೆ, ಅದರ ಮೇಲೆ ಆಣೆ ಮಾಡಿ ದುಡ್ಡು ಯಾರತ್ರ ತಗೊಂಡ್ರು ಅಂತ ಹೇಳಲಿ” ಎಂದು ಕುಮಾರ್ ಹೇಳಿದ್ದಾರೆ.
“ನಮ್ಮ ಸಿನಿಮಾಗೆ ಸುದೀಪ್ ಅವರೇ ಮುತ್ತತ್ತಿ ಸತ್ಯರಾಜ್ ಅಂತ ಟೈಟಲ್ ಇಡಿಸಿದ್ದಾರೆ. ನಿಜಕ್ಕೂ ಆ ಟೈಟಲ್ ಬೇರೆಯವರ ಬಳಿ ಇತ್ತು, ಅದನ್ನು ನಾನೇ ಫೈಟ್ ಮಾಡಿ ತಗೊಂಡೆ. ಸುದೀಪ್ ಅವರು ಹೈದರಾಬಾದ್ನಿಂದ ರೈಟರ್ ಕರೆಸಿ ಅಂತ ಹೇಳುತ್ತಾರೆ, ನಾವು ಕರೆಸಿದ್ರೆ 1 ವಾರ ಆದರೂ ಅವರನ್ನು ಭೇಟಿ ಮಾಡೋದಿಲ್ಲ” ಎಂದು ಕುಮಾರ್ ಅವರು ಆರೋಪ ಮಾಡಿದ್ದಾರೆ.
“ನಾವು ಎಷ್ಟೇ ಬಾರಿ ಕಿಚ್ಚ ಸುದೀಪ್ ಅವರನ್ನು ಕಾಂಟ್ಯಾಕ್ಟ್ ಮಾಡಲು ಪ್ರಯತ್ನಪಟ್ಟರೂ ಕೈಗೆ ಸಿಗೋದಿಲ್ಲ. ನಿರ್ಮಾಪಕರು ನಾವು ಎಲ್ಲಿಂದ ದುಡ್ಡು ತಂದಿರುತ್ತೇವೆ ಅಂತ ನಿಮಗೆಲ್ಲ ಗೊತ್ತಿರುತ್ತದೆ, ನಾವೇ ದುಡ್ಡು ಕೊಟ್ಟು ಬೇಡುವ ಸಮಯ ಬಂದಿದೆ” ಎಂದು ಕುಮಾರ್ ಹೇಳಿದ್ದಾರೆ.
“ಕೊರೊನಾ ಸಮಯದಲ್ಲಿ 3 ವರ್ಷ ಸಿನಿಮಾ ಮಾಡೋಕೆ ಆಗಲಿಲ್ಲ. ಆದರೆ ಕೋಟಿಗೊಬ್ಬ, ಪೈಲ್ವಾನ್ ಸಿನಿಮಾ ನಂತರ ನಮ್ಮ ಜೊತೆ ಸುದೀಪ್ ಸಿನಿಮಾ ಮಾಡಬೇಕಿತ್ತು. ಈಗ ಸುದೀಪ್ ಅವರು ಮದ್ರಾಸ್ನಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದಾರೆ, ನಾವು ಈಗ ಏನು ಮಾಡಬೇಕು. ರಂಗ ಎಸ್ಎಸ್ಎಲ್ಸಿ ಸಮಯದಲ್ಲಿ ನಾನು ಸುದೀಪ್ ಅವರಿಗೆ ಹಣ ಕೊಡಬೇಕು ಅಂತ ಇರಲಿಲ್ಲ. ಸುದೀಪ್ ಅವರ ಮನೆ ಮುಂದೆ ನಿರ್ಮಾಪಕರೊಬ್ಬರು ಬಂದು ನಿಂತಿದ್ದರು. ಅವರಿಗೆ ಸುದೀಪ್ ಹಣ ಕೊಡಬೇಕಿತ್ತು. ಆಗ ನಾನು ಹಣ ಕೊಟ್ಟಿದ್ದೆ. ಇದು ಜಾಕ್ ಮಂಜು ಅವರಿಗೆ ಗೊತ್ತು. ಜಾಕ್ ಮಂಜು ಅವರನ್ನು ಕೇಳಿದ್ರೆ ನಿರ್ಮಾಪಕರು ಯಾರು ಅಂತ ಹೇಳುತ್ತಾರೆ. ಚಲನಚಿತ್ರಮಂಡಳಿ ಅವರು ಈ ಸಮಸ್ಯೆಯನ್ನು ಬಗೆಹರಿಸಬೇಕು, ಇದು ಬಗೆಹರಿದಿಲ್ಲ ಅಂದರೆ ಎಲ್ಲಿ ಧರಣಿ ಮಾಡಬೇಕು ಅಂತ ಗೊತ್ತಿಲ್ಲ, ನಾನು ಚಲನಚಿತ್ರಮಂಡಳಿಯ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನ್ನ ಜೊತೆ ಸುದೀಪ್ ಅವರು ಸಿನಿಮಾ ಮಾಡಿದರೂ ಪರವಾಗಿಲ್ಲ, ಮಾಡದಿದ್ದರೂ ಪರವಾಗಿಲ್ಲ, ಇದು ಬಗೆಹರಿಯಬೇಕು” ಎಂದು ಕುಮಾರ್ ಹೇಳಿದ್ದಾರೆ.
“ಕಿಚ್ಚ ಸುದೀಪ್ ಅವರು ನನ್ನ ಸಿನಿಮಾಗಳಿಂದ ಒಂದು ರೂಪಾಯಿನೂ ಬಿಟ್ಟಿಲ್ಲ. ಸುದೀಪ್ ಅವರನ್ನು ರಂಗ ಎಸ್ಎಸ್ಎಲ್ಸಿ ಸಿನಿಮಾ ಮೂಲಕ ವಿದೇಶಕ್ಕೆ ಕರೆದುಕೊಂಡು ಹೋಗಿ ಶೂಟಿಂಗ್ ಮಾಡಿದ್ದು ನಾವು. ನನ್ನಂತೆ ಬಹಳ ಜನರಿಗೆ ಈ ರೀತಿ ಆಗ್ತಿದೆ, ಆದರೆ ಯಾರೂ ಮುಂದೆ ಬಂದು ಮಾತನಾಡೋಕೆ ರೆಡಿ ಆಗಿಲ್ಲ” ಎಂದು ಕುಮಾರ್ ಹೇಳಿದ್ದಾರೆ.
“ಸುದೀಪ್ ಅವರ ಅಡುಗೆ ಮನೆ ರಿಪೇರಿಗೆ ನಾನು 10 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಅವರ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಫೋಟೋ ಇದೆ, ಅದರ ಮೇಲೆ ಆಣೆ ಮಾಡಿ ದುಡ್ಡು ಯಾರತ್ರ ತಗೊಂಡ್ರು ಅಂತ ಹೇಳಲಿ” ಎಂದು ಕುಮಾರ್ ಹೇಳಿದ್ದಾರೆ.”ಕಿಚ್ಚ ಸುದೀಪ್ ಅವರು ನಮ್ಮ ಜೊತೆ ಮಾತನಾಡಲಿ, ನಾನೇ ತಪ್ಪು ಮಾಡಿದ್ರೆ ನಾನು ಸುದೀಪ್ ಅವರ ಕಾಲು ಕೆಳಗೆ ನುಗ್ಗುವೆ” ಎಂದು ಕುಮಾರ್ ಹೇಳಿದ್ದಾರೆ.