ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೀಪಿಕಾ ಪಡುಕೋಣೆ ಜನ್ಮದಿನ; ನಾಲ್ಕು ವರ್ಷಗಳಿಂದ ಗೆಲುವು ಕಾಣದ ನಟಿಗೆ ಈ ವರ್ಷ ಸಿಗಲಿದೆ ಸಿಹಿ?

Twitter
Facebook
LinkedIn
WhatsApp
Stills Of Deepika Padukone At Chhapaak Movie Interview 1

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್​ನಲ್ಲಿ ಭದ್ರವಾಗಿ ನೆಲೆ ಊರಿದ್ದಾರೆ. ನಟ ರಣವೀರ್ ಸಿಂಗ್ ಅವರನ್ನು ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇಂದು (ಜನವರಿ 5) ದೀಪಿಕಾ ಬರ್ತ್​​ಡೇ (Deepika Padukone Birthday). ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ದೀಪಿಕಾಗೆ ವೃತ್ತಿಜೀವನದಲ್ಲಿ ಇತ್ತೀಚೆಗೆ ಹಿನ್ನಡೆ ಆಗಿದೆ.

glasses | Deepika padukone hot, Deepika padukone, Vogue eyewear

ಬ್ಯಾಕ್​​ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ಈ ವರ್ಷ ಅವರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ಹಲವು ದೊಡ್ಡ ಬಜೆಟ್​​ನ ಚಿತ್ರಗಳು ಅವರ ಕೈಯಲ್ಲಿ ಇವೆ. ಈ ಪೈಕಿ ಯಾವ ಚಿತ್ರ ದೀಪಿಕಾಗೆ ಗೆಲುವು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Deepika Padukone Hot And Sexy Photos - Deepika Padukone Hot Shorts, HD Png  Download - kindpngದೀಪಿಕಾ ಅವರು 2018ರಲ್ಲಿ ನಟಿಸಿದ ‘ಪದ್ಮಾವತ್​’ ಚಿತ್ರವೇ ಕೊನೆ. ಅದಾದ ಬಳಿಕ ಗೆಲುವು ಕಂಡಿಲ್ಲ. 2019ರಲ್ಲಿ ಅವರ ನಟನೆಯ ಯಾವ ಚಿತ್ರಗಳೂ ರಿಲೀಸ್ ಆಗಿಲ್ಲ. 2020ರಲ್ಲಿ ರಿಲೀಸ್ ಆದ ‘ಚಪಾಕ್​’ ಸಿನಿಮಾ ಸೋತಿತು. ಈ ಸಂದರ್ಭದಲ್ಲಿ ಅವರು ಜೆಎನ್​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಸಿನಿಮಾ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಈ ಚಿತ್ರ ಸೋಲಲು ದೀಪಿಕಾ ನಿರ್ಧಾರ ಕೂಡ ಕಾರಣ ಎನ್ನಲಾಗಿದೆ.

Deepika Padukone #Mastani Bajirao Mastani #1080P #wallpaper #hdwallpaper  #desktop | Mastani, Deepika padukone, Ranveer singh

2022ರ ‘ಗೆಹರಾಯಿಯಾ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಹಸಿಬಿಸಿ ದೃಶ್ಯ ಹೆಚ್ಚಿದೆ ಎಂಬ ಕಾರಣಕ್ಕೆ ಅನೇಕರು ಚಿತ್ರವನ್ನು ಟೀಕೆ ಮಾಡಿದರು. ಈ ಕಾರಣಕ್ಕೆ ಸಿನಿಮಾಗೆ ಗೆಲುವು ಕಾಣಬೇಕಿದೆ. ಈಗ ಬರ್ತ್​ಡೇ ತಿಂಗಳಲ್ಲಿ (ಜನವರಿ 25) ‘ಪಠಾಣ್​’ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ದೀಪಿಕಾ ನಾಯಕಿ. ಈಗಾಗಲೇ ಅವರು ‘ಬೇಷರಂ ಸಾಂಗ್​​..’ನಲ್ಲಿ ಹಾಕಿದ ಕೇಸರಿ ಬಣ್ಣದ ಬಿಕಿನಿ ವಿವಾದ ಹುಟ್ಟುಹಾಕಿದೆ. ಹೀಗಾಗಿ, ಚಿತ್ರಕ್ಕೆ ಬೈಕಾಟ್ ಬಿಸಿ ತಾಗಿದೆ.

Deepika Padukone - Wikipediaಶಾರುಖ್ ನಟನೆಯ ‘ಜವಾನ್​’ ಚಿತ್ರಕ್ಕೂ ದೀಪಿಕಾ ನಾಯಕಿ. ಹೃತಿಕ್ ರೋಷನ್ ಅಭಿನಯದ ‘ಫೈಟರ್​’ ಚಿತ್ರಕ್ಕೆ ದೀಪಿಕಾ ಹೀರೋಯಿನ್ ಆಗಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅವರು ತೊಡಗಿಕೊಂಡಿದ್ದಾರೆ. ಪ್ರಭಾಸ್ ಅಭಿನಯದ ‘ಪ್ರಾಜೆಕ್ಟ್​ ಕೆ’ ಚಿತ್ರದ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ.

Deepika Padukone Vogue photo-shoot shows how she has entered happy phase of  her life – GirlandWorld

‘ಫೈಟರ್​’ ಹಾಗೂ ‘ಪ್ರಾಜೆಕ್ಟ್​ ಕೆ’ 2024ರಲ್ಲಿ ರಿಲೀಸ್ ಆಗಲಿದೆ. ಉಳಿದಂತೆ ‘ಪಠಾಣ್​’ ಹಾಗೂ ‘ಜವಾನ್​’ ಈ ವರ್ಷ ರಿಲೀಸ್ ಆಗಲಿದೆ. ಈ ಪೈಕಿ ಯಾವುದು ಗೆಲುವು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ