ದ್ವಿತೀಯ ಪಿಯುಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Exam Result) ಇಂದು ಬುಧವಾರ ಪ್ರಕಟಗೊಂಡಿದ್ದು, ರಾಜ್ಯಾದ್ಯಂತ ಶೇಕಡಾ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಮರುಮೌಲ್ಯಮಾಪನಕ್ಕೆ ಅವಕಾಶ: ವಿದ್ಯಾರ್ಥಿಗಳಿಗೆ ತಮಗೆ ಬಂದ ಅಂಕಗಳ ಬಗ್ಗೆ ಸಂದೇಹಗಳು, ಅಸಮಾಧಾನಗಳಿದ್ದಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಾಗಿ, ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮೌಲ್ಯಮಾಪನ ಮಂಡಳಿ ಹೇಳಿದೆ.
The #Karnataka School Examination and Assessment Board (KSEAB) announced the 2nd PUC result 2024. Out of the 6,81,079 students who appeared for the 2nd #PUC exams, 5,52,690 successfully passed, taking the overall pass percentage to 81.15 percent @santwana99 @XpressBengaluru pic.twitter.com/2YjAuQ5S7R
— Nagaraja Gadekal (@gadekal2020) April 10, 2024
ಸದ್ಯ ಈ ಪೋಸ್ಟ್ಗೆ 8 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಈ ರೀಲ್ಸ್ ನೋಡಿದ್ದಾರೆ. ‘ಮ್ಯಾನೇಜರ್ ಸಾಹೇಬ್ರೇ ನೀವು ಕಚೇರಿಯಲ್ಲಿ ಮ್ಯಾಚ್ ನೋಡ್ತಿದ್ರಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ದೊಡ್ಡ ಬ್ಯಾಡ್ ಲಕ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಎಲ್ಲರಿಗೂ ಕ್ಯಾಮೆರಾಗೆ ಕಾಣಿಸಿಕೊಳ್ಳಬೇಕು ಎಂದಿರುತ್ತದೆ. ನಿಮಗೆ ಹಾಗೆ ಇರಲಿಲ್ಲ. ಆದರೂ ಕ್ಯಾಮೆರಾ ನಿಮ್ಮನ್ನು ಹುಡುಕಿ ಬಂದಿದೆ. ಎಂತಹ ದುರಾದೃಷ್ಟ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಮರುಮೌಲ್ಯಮಾಪನ 2024 ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಅಧಿಕೃತ ವೆಬ್‌ಸೈಟ್ – kseab.karnataka.gov.in ಗೆ ಭೇಟಿ ನೀಡಿ
ಸ್ಕ್ಯಾನ್ ಮಾಡಿದ ಪ್ರತಿಗಳ ಅರ್ಜಿ ನಮೂನೆಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ
ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ
ಫಾರ್ಮ್ ಜೊತೆಗೆ ಅರ್ಜಿ ಶುಲ್ಕವನ್ನು ಸಲ್ಲಿಸಿ
ಭವಿಷ್ಯದ ಉಲ್ಲೇಖಕ್ಕಾಗಿ ಸ್ವೀಕೃತಿ ಫಾರ್ಮ್ ಡೌನ್‌ಲೋಡ್ ಮಾಡಿ
ಸ್ಕ್ಯಾನ್ ಮಾಡಿದ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ತಮ್ಮ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪಿಡಿಎಫ್ ನ್ನು ಸ್ವೀಕರಿಸುತ್ತಾರೆ. ನಂತರ ಅವರು ಮರುಪರಿಶೀಲಿಸಲು ಬಯಸುವ ಉತ್ತರಗಳನ್ನು ಶಾರ್ಟ್‌ಲಿಸ್ಟ್ ಮಾಡಬಹುದು. ಮರುಮೌಲ್ಯಮಾಪನ ಅರ್ಜಿಯನ್ನು ಇದೇ ರೀತಿ ಭರ್ತಿ ಮಾಡಿ. ಪ್ರತಿ ವಿಷಯದ ಸ್ಕ್ಯಾನ್ ಮಾಡಿದ ಪ್ರತಿಗೆ 530ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿ ವಿಷಯದ ಮೌಲ್ಯಮಾಪನಕ್ಕೆ 1,670 ರೂಪಾಯಿ ನಿಗದಿ ಮಾಡಲಾಗಿದೆ.