- ಪುತ್ತೂರು, ಸುಳ್ಯ
- 9:31 ಫೂರ್ವಾಹ್ನ
- ಮೇ 26, 2023
ದಕ್ಷಿಣ ಕನ್ನಡ: ಬಲೂನ್ ಕಟ್ಟಿಕೊಂಡು ಶಾಂತಿಮೊಗರು ಸೇತುವೆಯಿಂದ ಕುಮಾರಧಾರ ನದಿಗೆ ಹಾರಿದ ವ್ಯಕ್ತಿ
Twitter
Facebook
LinkedIn
WhatsApp

ಕಡಬ : ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆಯ ಮೇಲಿಂದ ಕುಮಾರಧಾರ ನದಿಗೆ ಹಾರಿದ ಬಗ್ಗೆ ವರದಿಯಾಗಿದೆ.
ಆಲಂಕಾರಿನ ವ್ಯಕ್ತಿಯೊಬ್ಬರು ಶಾಂತಿಮೊಗರು ಸೇತುವೆಯ ಮೇಲೆ ಕಾರು ನಿಲ್ಲಿಸಿ ಬಲೂನ್ ಕಟ್ಟಿ ನೀರಿಗೆ ಹಾರಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ನೂರಾರು ಜನರು ಸೇರಿದ್ದು,ಮೃತ ಶರೀರವನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.