ಶನಿವಾರ, ಅಕ್ಟೋಬರ್ 5, 2024
ಮಡಿಕೇರಿ ದಸರಾಕ್ಕೆ ದಸರಾ ಇತಿಹಾಸದಲ್ಲಿ ಅತಿ ಹೆಚ್ಚು 1.50 ಕೋಟಿ ರೂಪಾಯಿ ಅನುದಾನ: ಡಾ. ಮಂತರ್ ಗೌಡ-ಬಿಜೆಪಿಯಿಂದ ವಿಧಾನಪರಿಷತ್ತಿಗೆ ಕಾರ್ಯಕರ್ತ ಅಭ್ಯರ್ಥಿ: ಪುತ್ತೂರಿನ ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ.-30 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತ, 2 ಬಾರಿ ಜಿ. ಪಂ ಚುನಾವಣೆಯಲ್ಲಿ ಘಟಾನುಘಟಿಗಳನ್ನು ಸೋಲಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಯವರಿಗೆ ಸಿಗಬಹುದೇ ಕಾಂಗ್ರೆಸ್ ಟಿಕೆಟ್?-ಮುಡಾ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ; 14 ನಿವೇಶನ ವಾಪಸ್ ನೀಡಲು ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ!-Naravi: ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು-Udayanidhi Stalin: ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನೇಮಕ; ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ!-CM Siddaramaiah: ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು ಅಲ್ಲವೇ?-MLC Election:ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆ: ಕಾಂಗ್ರೆಸ್ಸಿನಿಂದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಡಿ. ಆರ್. ರಾಜು ಹೆಸರು ಮುಂಚೂಣಿಯಲ್ಲಿ.-Hathras: ಶಾಲೆಯ ಏಳಿಗೆಗಾಗಿ ಬಾಲಕನ ಬಲಿ, ಐವರ ಬಂಧನ-ಮುಡಾ ಕೇಸ್ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಮತ್ತು ತರಬೇತಿ -ದ.ಕ ಕಮಿಷನರ್ ಶಶಿಕುಮಾರ್

Twitter
Facebook
LinkedIn
WhatsApp
ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಮತ್ತು ತರಬೇತಿ -ದ.ಕ ಕಮಿಷನರ್ ಶಶಿಕುಮಾರ್

ಮಂಗಳೂರು:ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ಗೆ ದ.ಕ ಜಿಲ್ಲೆಯಿಂದ ನೇಮಕಾತಿ ಹೊಂದುತ್ತಿರುವಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ  ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡುವ ಉದ್ದೇಶದಿಂದ ಒಂದು ತಿಂಗಳ ಕಾರ್ಯಗಾರವನ್ನು ಮಂಗಳೂರು ನಗರ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ  ಇದರಲ್ಲಿ ಪೊಲೀಸ್ ಇಲಾಖೆಗೆ ಇತ್ತೀಚಿನ ತಂಡಗಳಲ್ಲಿ ನೇಮಕಾತಿ ಹೊಂದಿದ ಪಿ.ಎಸ್.ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ ನುರಿತ ತಂಡ ಒಂದು ತಿಂಗಳ ಕಾಲ ತರಬೇತಿಯನ್ನು ನೀಡಲಿದೆ ಎಂದು ತಿಳಿಸಿದರು.

  ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳು ಮತ್ತು ತರಬೇತಿಯ ನಿಯಮಗಳು ಈ ಕೆಳಗಿನಂತಿರುತ್ತವೆ.
     1. ವಿಳಾಸದ ಬಗ್ಗೆ ಅಧಿಕೃತ ದಾಖಲಾತಿಯನ್ನು ಸಲ್ಲಿಸುವುದು.
     2. ಯಾವುದೇ ಘಟಕದಲ್ಲಿ ಪಿಎಸ್ಐ/ಪಿ.ಸಿ ನೇಮಕಾತಿಯ ಇಟಿ/ಪಿಎಸ್ಟಿ (ಫಿಸಿಕಲ್ ಟೆಸ್ಟ್) ನಲ್ಲಿ ಉತ್ತೀರ್ಣಗೊಂಡ ಬಗ್ಗೆ       
               ದಾಖಲಾತಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
     3. ಅಭ್ಯರ್ಥಿಗಳು  RTPCR   ನೆಗೆಟೀವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವುದು 
     4. ದ.ಕ ಜಿಲ್ಲೆಯವರಿಗೆ ಮೊದಲ ಆದ್ಯತೆಯಿದ್ದು, ನಂತರದಲ್ಲಿ ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ 
              ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. 
     5. ಇದು ಕ್ರ್ಯಾಶ್ ಕೋರ್ಸ್ ರೀತಿಯ 30 ದಿನಗಳ ಕಾರ್ಯಾಗಾರವಾಗಿದ್ದು, ಪುರುಷ ಮತ್ತು ಮಹಿಳಾ ಆಕಾಂಕ್ಷಿಗಳೆಲ್ಲರಿಗೂ 
              ಅವಕಾಶವಿರುತ್ತದೆ.
     6. ಮೊದಲನೇ ಹಂತದಲ್ಲಿ 100 ಅಭ್ಯರ್ಥಿ/ಆಕಾಂಕ್ಷಿಗಳಿಗೆ ತರಬೇತಿಯನ್ನು ನೀಡಲಾಗುವುದು.
     7. ಊಟ ಮತ್ತು ವಸತಿ ಸೌಲಭ್ಯ ಉಚಿತವಾಗಿದ್ದು, ಕಡ್ಡಾಯವಾಗಿ ನಿಗದಿಪಡಿಸಿದ ಸ್ಥಳದಲ್ಲಿಯೇ ವಾಸ್ತವ್ಯವಿರುವುದು. 
               (ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ)
     8. ತರಗತಿ-ತರಬೇತಿ-ಓದುವುದು ಮುಂಜಾನೆ 08.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ಕಡ್ಡಾಯವಾಗಿದ್ದು,  
               ಅಭ್ಯರ್ಥಿಗಳು ಇಲ್ಲೇ ಇದ್ದು ಸಕ್ರಿಯವಾಗಿ ಪಾಲ್ಗೊಳ್ಳುವುದು.
     9.  ಅವಶ್ಯಕ ಅಧ್ಯಯನ ಸಾಮಾಗ್ರಿಗಳನ್ನು ವೈಯುಕ್ತಿಕವಾಗಿ ಅಭ್ಯರ್ಥಿಗಳೇ ಖರೀದಿ ಮಾಡಬೇಕು.
        ಈ ಪ್ರಕಾರ ತರಬೇತಿಗೆ ಆಸಕ್ತಿ/ಇಚ್ಚೆ ಹೊಂದಿರುವ ಆಕಾಂಕ್ಷಿಗಳು, ಸೋಮವಾರ ದಿ:09.08.2021 ರಿಂದ ಮಂಗಳೂರು ಪೊಲೀಸ್ ಕಮೀಷನರ್ ಕಛೇರಿಯಲ್ಲಿ ತೆರೆಯಲಾಗುವ REGISTRATION DESK ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಸಬಹುದು. ಈ ಕಾರ್ಯಾಗಾರಕ್ಕೆ ಸೈಂಟ್ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯು ವಾಸ್ತವ್ಯ, ಕ್ಲಾಸ್ ರೂಂ ಮತ್ತು ಲೈಬ್ರೇರಿಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ. kishor kumar botyadi

ಬಿಜೆಪಿಯಿಂದ ವಿಧಾನಪರಿಷತ್ತಿಗೆ ಕಾರ್ಯಕರ್ತ ಅಭ್ಯರ್ಥಿ: ಪುತ್ತೂರಿನ ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ.

ಬಿಜೆಪಿಯಿಂದ ವಿಧಾನಪರಿಷತ್ತಿಗೆ ಕಾರ್ಯಕರ್ತ ಅಭ್ಯರ್ಥಿ: ಪುತ್ತೂರಿನ ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ. Twitter Facebook LinkedIn WhatsApp ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ದಕ್ಷಿಣ ಕನ್ನಡ ಉಡುಪಿ ಕ್ಷೇತ್ರದಿಂದ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು