- ಸಿನೆಮಾ
- 5:20 ಅಪರಾಹ್ನ
- ಜನವರಿ 31, 2023
ಥೈಲ್ಯಾಂಡ್‌ನಲ್ಲಿ ನಟಿ ಸೋನು ಜೊತೆ ನೇಹಾ ಗೌಡ ಮೋಜು- ಮಸ್ತಿ
Twitter
Facebook
LinkedIn
WhatsApp

`ಬಿಗ್ ಬಾಸ್’ (Bigg Boss) ಖ್ಯಾತಿಯ ನೇಹಾ ಗೌಡ (Neha Gowda) ಇದೀಗ ಥೈಲ್ಯಾಂಡ್‌ಗೆ ಹಾರಿದ್ದಾರೆ. ಸಹೋದರಿ ಸೋನು (Sonu) ಜೊತೆ ನೇಹಾ ಜಾಲಿ ಮೂಡ್‌ನಲ್ಲಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ.
ಲಕ್ಷ್ಮಿ ಬಾರಮ್ಮ, ಬಿಗ್ ಬಾಸ್ ಕನ್ನಡ 9ರ ಮೂಲಕ ಮನೆ ಮಾತಾಗಿದ್ದ ನಟಿ ನೇಹಾ ಸದ್ಯ ಶೂಟಿಂಗ್ ಬ್ರೇಕ್ ಹಾಕಿ `ಗುಳ್ಟು’ ನಟಿ ಸೋನು ಜೊತೆ ಥೈಲ್ಯಾಂಡ್‌ಗೆ ತೆರಳಿದ್ದಾರೆ.
ನನ್ನ ಟ್ರ್ಯಾವೆಲ್ ಪಾರ್ಟ್ನರ್ ಎಂದು ಅಕ್ಕ ಸೋನು ಜೊತೆಗಿನ ಫೋಟೋವನ್ನ ನೇಹಾ ಶೇರ್ ಮಾಡಿದ್ದಾರೆ. ಬೀಚ್ ಬಳಿ ನಿಂತು ಕ್ಯೂಟ್ ಆಗಿ ಇಬ್ಬರು ಪೋಸ್ ಮಾಡಿದ್ದಾರೆ.
ಇನ್ನೂ 2 ವರ್ಷಗಳ ನಂತರ ನೇಹಾ ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್ ಆಗ್ತಿದ್ದಾರೆ. `ನಮ್ಮ ಲಚ್ಚಿ’ ಸೀರಿಯಲ್ ಮೂಲಕ ಮಿಂಚಲು ನೇಹಾ ರೆಡಿಯಾಗಿದ್ದಾರೆ.