ಬುಧವಾರ, ಮಾರ್ಚ್ 29, 2023
ರಾಜ್ಯದ ಅತಿ ಕಿರಿಯ ಮೇಯರ್​: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್​​​ ಆಗಿ ಡಿ. ತ್ರಿವೇಣಿ ಆಯ್ಕೆ-ಏ.1ರಿಂದ ಸಿಗರೇಟ್, ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಳ-ಮಂಗಳೂರು: ಸೌದಿಯಲ್ಲಿ ಅಪಘಾತ ಮಲ್ಲೂರಿನ ಯುವಕ ಮೃತ್ಯು-ಮಂಗಳೂರು: ಸೌದಿಯಲ್ಲಿ ಅಪಘಾತ ಮಲ್ಲೂರಿನ ಯುವಕ ಮೃತ್ಯು-ಬೆಳ್ತಂಗಡಿ: ಹೆಂಡತಿಗೆ ಕತ್ತಿಯಿಂದ ಕಡಿದ ಗಂಡ - ಪತ್ನಿಆಸ್ಪತ್ರೆಗೆ, ಪತಿ ರಕ್ತದೊತ್ತಡದಿಂದ ಸಾವು-ಶೋಭಿತಾ ಜೊತೆ ಡೇಟಿಂಗ್‌, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಗಚೈತನ್ಯ-ಸಂಭಾವನೆಗಾಗಿ ಎಂದೂ ಬೇಡಬಾರದು: ನಟಿ ಸಮಂತಾ-ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ, 13ಕ್ಕೆ ಮತ ಎಣಿಕೆ: ಚುನಾವಣಾ ಆಯೋಗ ಘೋಷಣೆ-ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಮುಗಿಸಿದ ಪತ್ನಿ- ತನಿಖೆಯಲ್ಲಿ ಸತ್ಯ ಬಯಲು-ಮಂಗಳೂರು: ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿ ಆವರಣದಲ್ಲಿ ಕ್ರಿ.ಶ 1423 ಕಾಲದ ಶಾಸನ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ತೆಂಗಿನ ಕಾಯಿ ಕೀಳಲು ಮರಕ್ಕೆ ಏರಿದ ವ್ಯಕ್ತಿ; ಹೃದಯಘಾತದಿಂದ ಮರದಲ್ಲಿಯೇ ಕೊನೆಯುಸಿರು!

Twitter
Facebook
LinkedIn
WhatsApp
ಮರ ಏರಿ ಪ್ರಜ್ಞೆ ತಪ್ಪಿದ

ಕೆಂಗೇರಿ: ತೆಂಗಿನಕಾಯಿ ಕೀಳಲು ತೆಂಗಿನ ಮರ ಏರಿದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮರದ ಮೇಲೆಯೇ ಕೊನೆಯುಸಿರೆಳೆದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಮೈಲಸಂದ್ರ ನಿವಾಸಿ ನಾರಾಯಣಪ್ಪ (60) ಮೃತಪಟ್ಟವರು. ಬೆಳಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ಮೈಲಸಂದ್ರದ ವಿಜಯಶ್ರೀ ಲೇಔಟ್‌ನಲ್ಲಿರುವ ವೆಂಕಟರಣ ದೇವಸ್ಥಾನ ಸಮೀಪದಲ್ಲಿ ಸುಮಾರು 50 ಅಡಿ ಎತ್ತರದ ತೆಂಗಿನ ಮರವಿದೆ. ಪ್ರತಿ ಬಾರಿಯೂ ನಾರಾಯಣಪ್ಪ ಅವರೇ ಈ ಮರದಲ್ಲಿ ಕಾಯಿ ಕೀಳುತ್ತಿದ್ದರು. ಸೋಮವಾರ ಬೆಳಗ್ಗೆ ಕೂಡ ಮರ ಹತ್ತಿದ್ದಾರೆ.

ಈ ವೇಳೆ ಅಲ್ಲಿಯೇ ಹೃದಯಾಘಾತವಾಗಿದೆ. ಬಹಳ ಹೊತ್ತಾದರೂ ಕೆಳಗೆ ಬಂದಿಲ್ಲ. ಫೋನ್‌ ಮಾಡಿದರೂ, ಕೂಗಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.ಅನಂತರ ಅಗ್ನಿಶಾಮಕ ಸಿಬ್ಬಂದಿ ಕ್ರೇನ್‌ ಮೂಲಕ ತೆಂಗಿನ ಮರದ ಮೇಲೆ ಕುಳಿತಿದ್ದ ನಾರಾಯಣಪ್ಪರನ್ನು ಕೆಳಗಿಳಿಸಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ