ತನ್ನನ್ನು ದ್ವೇಷಿಸುವವರಿಗೆ ರಶ್ಮಿಕಾ ಮಂದಣ್ಣ ಟಾಂಗ್
ಟಾಲಿವುಡ್ (Tollywood), ಬಾಲಿವುಡ್ (Bollywood) ಎಲ್ಲಾ ರಂಗದಲ್ಲೂ ರಶ್ಮಿಕಾ ಮಂದಣ್ಣಗೆ (Rashmika Mandanna) ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ನೇಮು ಫೇಮು ಜೊತೆಗೆ ಸಖತ್ ಟ್ರೋಲ್ ಆಗುತ್ತಿರುವ ರಶ್ಮಿಕಾ ಇದೀಗ ತನ್ನನ್ನು ಟೀಕೆ ಮಾಡುವವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬಹುಭಾಷಾ ನಟಿಯಾಗಿ ಮಿಂಚ್ತಿರುವ ನಟಿ ರಶ್ಮಿಕಾ, ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ತನ್ನನ್ನು ಟೀಕೆ ಮಾಡುವವರಿಗೆ ಕೂರ್ಗ್ ಬ್ಯೂಟಿ ಖಡಕ್ ಉತ್ತರ ನೀಡಿದ್ದಾರೆ.
ತನ್ನನ್ನು ದ್ವೇಷಿಸುವವರ ಬಗ್ಗೆ ಸಮಾರಂಭವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಾವು ಕಲಾವಿದರು, ನಮ್ಮನ್ನು ಎಲ್ಲರೂ ಪ್ರೀತಿಸಬೇಕು ಎಂದು ಭಾವಿಸುವುದು ತಪ್ಪು. ಒಳ್ಳೆಯ ಮಾತುಗಳ ಜೊತೆ ಟೀಕೆಗಳನ್ನ ಕೂಡ ಎದುರಿಸಬೇಕಾಗುತ್ತದೆ. ನಾವು ಪಬ್ಲಿಕ್ ಫಿಗರ್ ಆಗಿರುವ ಕಾರಣ ಇವೆಲ್ಲವೂ ಸರ್ವೇ ಸಾಮಾನ್ಯ. ಜನ ಬಹಳ ಪ್ರೀತಿಯಿಂದ ಗುರುತಿಸಿ ಮಾತನಾಡಿದಾಗ ಖುಷಿಯಾಗುತ್ತದೆ. ಈ ಖುಷಿಯ ನಡುವೆ ದ್ವೇಷ ಮತ್ತು ಟೀಕೆಗಳೆಲ್ಲ ಮರೆತು ಹೋಗುತ್ತದೆ.
`ಪುಷ್ಪ 2′ (Pushpa 2) ಸಿನಿಮಾದ ಚಿತ್ರೀಕರಣದಲ್ಲಿ ಸದ್ಯ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಇನ್ನೊಂದ್ ಕಡೆ ವಿಜಯ್ ದಳಪತಿ ನಟನೆಯ `ವಾರಿಸು’ (Varisu) ಸಿನಿಮಾ ಕೂಡ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.