ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತಂದೆ-ತಾಯಿ ಸಮಾಧಿ ಬಳಿ ದುನಿಯಾ ವಿಜಯ್ ಹುಟ್ಟುಹಬ್ಬ; ರಿಲೀಸ್ ಆಯ್ತು ‘ಭೀಮ’ ಫಸ್ಟ್ ಲುಕ್

Twitter
Facebook
LinkedIn
WhatsApp
maxresdefault 1

ಸೆಲೆಬ್ರಿಟಿಗಳು ಬರ್ತ್​​ಡೇನ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಾರೆ. ಕೆಲವು ಬಾರಿ ಕುಟುಂಬದ ಜತೆ ಹುಟ್ಟುಹಬ್ಬ ಆಚರಿಸಿದರೆ ಇನ್ನೂ ಕೆಲವು ಸಲ ಅಭಿಮಾನಿಗಳ ಜತೆ ಸಮಯ ಕಳೆಯುತ್ತಾರೆ. ದುನಿಯಾ ವಿಜಯ್ (Duniya Vijay) ಅವರು  ಭಿನ್ನವಾಗಿ ಬರ್ತ್​ಡೇ (ಜನವರಿ 20) ಆಚರಿಸಿಕೊಂಡಿದ್ದಾರೆ. ತಂದೆ-ತಾಯಿ ಸಮಾಧಿ ಬಳಿ ಅವರು ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ. ಈ ವಿಶೇಷ ದಿನದಂದು ದುನಿಯಾ ವಿಜಯ್​ ಮುಂದಿನ ಸಿನಿಮಾ ‘ಭೀಮ’ದ (Bheema Movie) ಫಸ್ಟ್​ ಲುಕ್ ಟೀಸರ್ ರಿಲೀಸ್ ಆಗಿದೆ.

‘ಸಲಗ’ ಸಿನಿಮಾ ಮೂಲಕ ಡೈರೆಕ್ಟರ್​ ಆಗಿ ದುನಿಯಾ ವಿಜಯ್ ಯಶಸ್ಸು ಕಂಡರು. ಪಕ್ಕಾ ರೌಡಿಸಂ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿತ್ತು. ಈ ಚಿತ್ರ ಸೂಪರ್ ಹಿಟ್ ಆಯಿತು. ನಿರ್ದೇಶನದ ಜತೆಗೆ ಅವರು ಆ ಸಿನಿಮಾದಲ್ಲಿ ನಟಿಸಿದ್ದರು. ಈಗ ದುನಿಯಾ ವಿಜಯ್ ಅವರು ‘ಭೀಮ’ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅವರ ನಿರ್ದೇಶನದ ಎರಡನೇ ಸಿನಿಮಾ ಇದು.

ದುನಿಯಾ ವಿಜಯ್ ಬರ್ತ್​ಡೇ ಪ್ರಯುಕ್ತ ‘ಭೀಮ’ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೀಸರ್​​ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಚ್ಚುಗಳು ಝಳಪಿಸಿವೆ. ಇದು ಕೂಡ ರೌಡಿಸಂ ಕಥೆ ಎಂಬುದು ಟೀಸರ್​ನಲ್ಲಿ ಸ್ಪಷ್ಟವಾಗುತ್ತದೆ. ಟೀಸರ್ ನೋಡಿದವರು ಇಷ್ಪಟ್ಟಿದ್ದಾರೆ. ಈ ಸಿನಿಮಾ ಯಶಸ್ಸು ಕಾಣಲಿ ಎಂದು ಹಾರೈಸುತ್ತಿದ್ದಾರೆ.

ವಿಶೇಷವಾಗಿ ಬರ್ತ್​ಡೇ ಆಚರಿಸಿದ ದುನಿಯಾ ವಿಜಯ್

ದುನಿಯಾ ವಿಜಯ್ ಅವರು ಈ ಬಾರಿ ಬೆಂಗಳೂರು ಬಿಟ್ಟು ಹುಟ್ಟೂರಾದ ಆನೇಕಲ್​ನ ಕುಂಬಾರನಹಳ್ಳಿಗೆ ತೆರಳಿದ್ದಾರೆ. ಅಲ್ಲಿರುವ ಅಪ್ಪ-ಅಮ್ಮನ ಸಮಾಧಿ ಬಳಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ತಂದೆ-ತಾಯಿ ಮೇಲೆ ದುನಿಯಾ ವಿಜಯ್​ಗೆ ಅಪಾರ ಪ್ರೀತಿ ಇತ್ತು. ಅವರನ್ನು ಕಳೆದುಕೊಂಡ ನಂತರವೂ ಅವರು ಪ್ರೀತಿ ಮಾಡುವುದನ್ನು ನಿಲ್ಲಿಸಿಲ್ಲ ಎಂಬುದಕ್ಕೆ ಈ ಬರ್ತ್​ಡೇ ಆಚರಣೆಯೇ ಸಾಕ್ಷಿ.

‘ತಂದೆ ತಾಯಿ ಇಲ್ಲದೇ ಇರುವುದಕ್ಕೆ ನೋವಿದೆ. ಅವರಿಗೆ ನಾನು ಕಟ್ಟಿರುವ ಸಣ್ಣ ದೇವಸ್ಥಾನ ಇದು. ಆ ಜಾಗದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದು ಖುಷಿ ಇದೆ. ಇಲ್ಲಿ ಅಭಿಮಾನಿಗಳು ಬಂದಿದ್ದಾರೆ. ಅವರ್ಯಾರಿಗೂ ನೋವಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅವರು ನನಗೋಸ್ಕರ ಬರ್ತಾರೆ’ ಎಂದಿದ್ದಾರೆ ದುನಿಯಾ ವಿಜಯ್.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ