ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತಂತ್ರಗಾರಿಕೆ ಮೆರೆದ ಬಿಜೆಪಿ, ಕರಾವಳಿಯಲ್ಲಿ ಮತ್ತೆ ಕಾಂಗ್ರೆಸನ್ನು ಕಟ್ಟಿಹಾಕಲು ಸಫಲ?

Twitter
Facebook
LinkedIn
WhatsApp
ತಂತ್ರಗಾರಿಕೆ ಮೆರೆದ ಬಿಜೆಪಿ, ಕರಾವಳಿಯಲ್ಲಿ ಮತ್ತೆ ಕಾಂಗ್ರೆಸನ್ನು ಕಟ್ಟಿಹಾಕಲು ಸಫಲ?

ಬಿಎಸ್ವೈ ಅಧಿಕಾರವಧಿಯಲ್ಲಿ ಕರಾವಳಿಯ ಬಿಜೆಪಿ ಒಂದು ಹಂತದಲ್ಲಿ ಗೊಂದಲದಲ್ಲಿ ಇತ್ತು ಎಂಬುದು ವರದಿಗಳು ಹೇಳುತ್ತಿವೆ.
ಅಧಿಕಾರ ಬಿಎಸ್ವೈ ಮಗ ವಿಜಯೇಂದ್ರನ ಕೈಯಲ್ಲಿ ಕೇಂದ್ರೀಕೃತವಾಗಿತ್ತು ಎಂದು ಬಿಜೆಪಿಯ ಆಂತರಿಕ ಮೂಲಗಳು ಹೇಳುತ್ತವೆ.
ಈ ಕಾರಣದಿಂದ ಕರಾವಳಿಯ ಬಿಜೆಪಿಗೆ ಸಂಪೂರ್ಣ ವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬೊಮ್ಮಾಯಿ ಮುಖ್ಯಮಂತ್ರಿಯಾಗಿಸುವ ಮೂಲಕ ಬಿಎಸ್ವೈ ಬಣಕ್ಕೆ ಆದ್ಯತೆ ನೀಡಿದ್ದರು, ಹೈಕಮಾಂಡ್ ತನ್ನ ಬಿಗಿ ಪಟ್ಟನ್ನು ಇನ್ನಷ್ಟು ಬಿಗಿಯಾಗಿಸಿದೆ.

ಈ ಮೂಲಕ ಹೈಕಮಾಂಡ್ನಲ್ಲಿ ಅಧಿಕಾರ ಸ್ಥಾಪಿಸಿರುವ ಕರಾವಳಿಯ ನಾಯಕರು ಕರಾವಳಿ ಅಧಿಕಾರದಲ್ಲಿ ಸ್ವಾತಂತ್ರ್ಯ ಪಡೆಯುತ್ತಾರೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಮುಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಪ್ರಭಾವ ಕರಾವಳಿ ಅಧಿಕಾರದಲ್ಲಿ ಹೆಚ್ಚು ನಡೆಯಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

ಈ ಮೊದಲು ಬಿಎಸ್ವೈ ಮಗ ವಿಜಯೇಂದ್ರ ಕರಾವಳಿಯ ಅಧಿಕಾರದಲ್ಲಿ ತಾನು ಕೈಯಾಡಿಸುತ್ತಿದ್ದ ಕಾರಣ ಈ ಭಾಗದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಸಂಪೂರ್ಣ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಆಂತರಿಕ ಮೂಲಗಳು ಉಲ್ಲೇಖಿಸಿ ವರದಿಯಾಗಿದೆ.

ಹೈಕಮಾಂಡ್ ತನ್ನ ಶಕ್ತಿಯನ್ನು ತೋರ್ಪಡಿಸಿದೆ. ಆ ಮೂಲಕ ಇನ್ನೆರಡು ವರ್ಷ ಕರಾವಳಿಯ ಬಿಜೆಪಿ ನನ್ನ ಸಂಪೂರ್ಣ ಶಕ್ತಿಯೊಂದಿಗೆ ಆಡಳಿತ ನಡೆಸಲಿದೆ ಇದು ಕರಾವಳಿಯ ಕಾಂಗ್ರೆಸ್ಸಿಗೆ ಪ್ರಬಲ ಪೈಪೋಟಿ ನೀಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು ಹತ್ತಕ್ಕಿಂತ ಹೆಚ್ಚು ಬಣ ಗಳನ್ನು ಹೊಂದಿರುವ ಕರಾವಳಿ ಕಾಂಗ್ರೆಸ್ ತಂತ್ರಗಾರಿಕೆ ಇಲ್ಲದೆ ವೈಯಕ್ತಿಕವಾಗಿ ರಾಜಕಾರಣ ಮಾಡುತ್ತಿದೆ. ಕರಾವಳಿಯ ಕಾಂಗ್ರೆಸಿಗರು ಯಾವ ಬಣ ದಲ್ಲಿ ಗುರುತಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ ಬಣ ರಾಜಕೀಯದ ಬಗ್ಗೆ ಮೌನವಾಗಿದ್ದ ಕಾರಣ ಬಣ ರಾಜಕೀಯ ಜೋರಾಗಿದೆ ಎಂಬುದು ಕಾರ್ಯಕರ್ತರ ವಾದ. ಇನ್ನೋರ್ವ ನಾಯಕ ಬಿಕೆ ಹರಿಪ್ರಸಾದ್ ಕರಾವಳಿಯಲ್ಲಿ ಇನ್ನಿಲ್ಲದಂತೆ ಬಣ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಕಾರ್ಯಕರ್ತರ ಅನಿಸಿಕೆ.
ಈ ರೀತಿ ಹಲವಾರು ಸಣ್ಣ, ದೊಡ್ಡ ನಾಯಕರುಗಳು ಹಲವಾರು ಬಣಗಳಲ್ಲಿ ಹರಿದು ಹಂಚಿಹೋಗಿದೆ ಕಾಂಗ್ರೆಸ್. ಈ ನಡುವೆ ಬಿಜೆಪಿ ತಂತ್ರಗಾರಿಕೆ ಮೆರೆಯುತ್ತಿದ್ದು, ತನಗೆ ಆಡಳಿತ ವಿರೋಧಿ ಅಲೆ ಇದ್ದರೂ ಅದನ್ನು ಮೀರಿ ಸಂಘಟನಾತ್ಮಕವಾಗಿ ಕರಾವಳಿಯಲ್ಲಿ
ಯಶಸ್ಸು ಸಾಧಿಸಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ.

ಕರಾವಳಿಯಲ್ಲಿ ಕಾಂಗ್ರೆಸ್ ನಲ್ಲಿರುವ ವಿದ್ಯಾರ್ಥಿ ನಾಯಕರು ಗಳಿಂದಲೇ ಬಣ ರಾಜಕೀಯ ಜೋರಾಗಿದೆ, ಇನ್ನು ಯುವ ಕಾಂಗ್ರೆಸ್ ಮತ್ತು ಹಿರಿಯರ ಕಾಂಗ್ರೆಸ್ನಲ್ಲಿ ಕೇಳುವುದೇ ಬೇಡ ಎಂದು ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕರಾವಳಿಯಲ್ಲಿ ಯುವ ತಂತ್ರಗಾರಿಕೆಯ ನಾಯಕರುಗಳಿಗೆ ಆದ್ಯತೆ ಇಲ್ಲದೆ ಪಕ್ಷ ಸೊರಗಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ. ಕರಾವಳಿಯಲ್ಲಿ ಇನ್ನು ಪಕ್ಷದ ಸಾಮಾಜಿಕ ಜಾಲತಾಣ ಬಹಳಷ್ಟು ದುರ್ಬಲವಾಗಿದೆ ಹಾಗೂ ಪಕ್ಷದ ಹಿನ್ನೆಲೆಯಲ್ಲಿ, ಪ್ರಚಾರವಿಲ್ಲದೆ ಕೆಲಸ ಮಾಡುತ್ತಿರುವ ಯುವ ನಾಯಕರುಗಳನ್ನು ಪಕ್ಷ ಗುರುತಿಸುವ ಕೆಲಸ ಮಾಡುತ್ತಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ತಂತ್ರಗಾರಿಕೆಯ ಮೂಲಕ ಕರಾವಳಿಯಲ್ಲಿ ಒಂದು ಹಂತದಲ್ಲಿ ಹಿನ್ನಡೆಯಲ್ಲಿದ.
ಬಿಜೆಪಿ ಮೇಲುಗೈ ಸಾಧಿಸುವ ಸ್ಪಷ್ಟ ಸೂಚನೆ ಮುಖ್ಯಮಂತ್ರಿ ಬದಲಾವಣೆ ಹಾಗೂ ಹೊಸ ಮುಖ್ಯಮಂತ್ರಿ ಆಯ್ಕೆ ಮೂಲಕ ತೋರ್ಪಡಿಸಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು