ಭಾನುವಾರ, ಸೆಪ್ಟೆಂಬರ್ 8, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಡಿಸೆಂಬರ್ 10 ರಿಂದ 17 ರವರೆಗೆ ಕೇರಳ ಅಂತಾರಾಷ್ಟ್ರೀಯ ಸಿನಿಮೋತ್ಸವ.

Twitter
Facebook
LinkedIn
WhatsApp
ಡಿಸೆಂಬರ್ 10 ರಿಂದ 17 ರವರೆಗೆ ಕೇರಳ ಅಂತಾರಾಷ್ಟ್ರೀಯ ಸಿನಿಮೋತ್ಸವ.

ತಿರುವನಂತಪುರ: ಕೇರಳವು 26 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (international film festival) (ಐಎಫ್ಎಫ್ ಕೆ) (IFFK)ಕ್ಕೆ ಸಜ್ಜಾಗುತ್ತಿದೆ.
ಡಿಸೆಂಬರ್ 10 ರಿಂದ 17 ರವರೆಗೆ ಕೇರಳ ಚಲನಚಿತ್ರ ಅಕಾಡೆಮಿ ಮತ್ತು ರಾಜ್ಯ ಸಾಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗುವ ಈ ಚಲನಚಿತ್ರೋತ್ಸವವು ತಿರುವನಂತಪುರದಲ್ಲಿ ನಡೆಯಲಿದೆ. ಬೇರೆ ಭಾರತೀಯ ಭಾಷೆಗಳು, ಅಂತಾರಾಷ್ಟ್ರೀಯ ಸ್ಪರ್ಧೆ, ಮಲಯಾಳಂ ಸಿನಿಮಾಗಳ ಸ್ಪರ್ಧೆಗೆ ಸಿನಿಮಾ ನಿರ್ದೇಶಕರು ಮತ್ತು ನಿರ್ಮಾಪಕರಿಂದ ಸಿನಿಮಾಗಳನ್ನು ಆಹ್ವಾನಿಸಲಾಗಿದೆ.
ಬೇರೆ ಭಾಷೆಯ ಚಲನಚಿತ್ರಗಳ ಸಲ್ಲಿಕೆಗೆ ಶುಕ್ರವಾರ (ಸೆ. 10, 2021) ಕಡೆ ದಿನಾಂಕ. ಮಲಯಾಳಂ ಚಿತ್ರಗಳನ್ನು ಸಲ್ಲಿಸಲು ಸೆಪ್ಟೆಂಬರ್ 30 ರವರೆಗೆ ಅವಕಾಶವಿದೆ. ಅಕ್ಟೋಬರ್ 20 ರಂದು ಆಯ್ಕೆಗೊಂಡ ಸಿನಿಮಾಗಳ ಪಟ್ಟಿ ಬಿಡುಗಡೆಯಾಗಲಿದೆ. ವರ್ಷದಿಂದ ವರ್ಷಕ್ಕೆ ಈ ಚಿತ್ರೋತ್ಸವ ಗುಣಮಟ್ಟದ ದೃಷ್ಟಿಯಿಂದ ಮೆಚ್ಚುಗೆ ಗಳಿಸುತ್ತಿದೆ. ಈ ಚಿತ್ರೋತ್ಸವದ ಮತ್ತೊಂದು ವಿಶೇಷವೆಂದರೆ, ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿಕನ್ ಅಮೆರಿಕನ್ ದೇಶಗಳ ಸಿನಿಮಾಗಳಿಗೆ ಪ್ರತ್ಯೇಕ ಸ್ಪರ್ಧಾ ವಿಭಾಗವಿದೆ.
ಏಷ್ಯಾ, ಆಫ್ರಿಕಾ, ಲ್ಯಾಟಿಕನ್ ಅಮೆರಿಕ ದೇಶಗಳ ಸಿನಿಮಾ, ಮಲಯಾಳಂ ಸಿನಿಮಾ ಇಂದು ವಿಭಾಗದಲ್ಲಿ 14 ಸಿನಿಮಾಗಳನ್ನು ಆಯ್ಕೆ ಮಾಡಲಾಗುವುದು. ಈ ಪೈಕಿ ಉದಯೋನ್ಮುಖ ಚಿತ್ರ ನಿರ್ದೇಶಕರಿಗೆ ಅವಕಾಶ ಕಲ್ಪಿಸಲೆಂದೇ, ಆರು ಸಿನಿಮಾಗಳನ್ನು ಚೊಚ್ಚಲ ಅಥವಾ ಎರಡನೆ ಚಿತ್ರವನ್ನು ರೂಪಿಸುತ್ತಿರುವ ನಿರ್ದೇಶಕರಿಗೆ ಮೀಸಲಿಡಲಾಗಿದೆ. ಭಾರತೀಯ ಸಿನಿಮಾ ಇಂದು ವಿಭಾಗದಲ್ಲೂ ವಿವಿಧ ಭಾರತೀಯ ಭಾಷೆಗಳ 9 ಸಿನಿಮಾಗಳನ್ನು ಪರಿಗಣಿಸಲಾಗುವುದು.

ಸ್ಪರ್ಧಾ ವಿಭಾಗಗಳಲ್ಲದೇ, ಫೆಸ್ಟಿವಲ್ ಕಲೈಡೋಸ್ಕೋಪ್ (ಭಾರತೀಯ) ವಿಭಾಗದಲ್ಲೂ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ ಎಫ್ಐಎಪಿಎಫ್ (Affiliated competitive Feature Film Festivals), ಎಫ್ಐಎಪಿಎಫ್ (Affiliated competitive specialised Feature Film Festivals), ಎಫ್ಐಎಪಿಎಫ್ (Affiliated Non-competitive Feature Film Festivals), ಭಾರತೀಯ ಸಿನಿಮಾ ದಿಗ್ಗಜರ ಶಿಫಾರಸು ಸಿನಿಮಾಗಳು, ರಾಷ್ಟ್ರೀಯ ಪ್ರಶಸ್ತಿ ಪಡೆದ ಮಲಯಾಳಂ ಸಿನಿಮಾಗಳು, ರಾಜ್ಯ ಪ್ರಶಸ್ತಿ ಪಡೆದ ಸಿನಿಮಾಗಳನ್ನೂ ಪ್ರದರ್ಶಿಸಲಾಗುವುದು. ಆದರೆ ಒಟ್ಟೂ ಸಂಖ್ಯೆ ಎಂಟಕ್ಕೆ ನಿಗದಿಪಡಿಸಲಾಗಿದೆ. ಇದಲ್ಲದೇ, ವಿಶ್ವ ಸಿನಿಮಾ (ವರ್ಲ್ಡ್ ಸಿನಿಮಾ), ರೆಟ್ರಾಸ್ಪೆಕ್ಟಿವ್, ಹೋಮೇಜಸ್ ಇತ್ಯಾದಿ ವಿಭಾಗಗಳಲ್ಲೂ ಸಿನಿಮಾಗಳು ಪ್ರದರ್ಶಿತವಾಗಲಿವೆ.
ಪ್ರಶಸ್ತಿಗಳು (AWARDS)
ಸುವರ್ಣ ಚಕೋರಂ (Goldern Crow Pheasant)-20 ಲಕ್ಷ ರೂ. ನಗದನ್ನು ನಿರ್ದೇಶಕ-ನಿರ್ಮಾಕರಿಗೆ ನೀಡಲಾಗುವುದು.
ರಜತ ಚಕೋರಂ ಪ್ರಶಸ್ತಿಯನ್ನು (4 ಲಕ್ಷ ರೂ. ನಗದು)
ಅತ್ಯುತ್ತಮ ನಿರ್ದೇಶಕರಿಗೆ, ಚೊಚ್ಚಲ ಚಿತ್ರ ನಿರ್ದೇಶಕರಿಗೆ (3 ಲಕ್ಷ ರೂ. ನಗದು)
ತಾಂತ್ರಿಕ ಕ್ಷೇತ್ರದ ಪರಿಣಿತರು, ಅತ್ಯುತ್ತಮ ಅಭಿನಯಕ್ಕೂ, ತೀರ್ಪುಗಾರರ ಪ್ರಶಸ್ತಿಗೆ ಪ್ರಮಾಣ ಪತ್ರ ನೀಡಲಾಗುವುದು.
ಆಡಿಯನ್ಸ್ ಪೋಲ್ ನಿಂದ ಆಯ್ಕೆಯಾದ ಚಿತ್ರಕ್ಕೆ ರಜತ ಚಕೋರಂ (2 ಲಕ್ಷ ರೂ. ನಗದು) ಪ್ರಶಸ್ತಿ ಇರಲಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ivan dsouza ಐವನ್ ಡಿಸೋಜಾ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ Twitter Facebook LinkedIn WhatsApp ಮಂಗಳೂರು, ಆಗಸ್ಟ್​​ 28: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್​ಸಿ ಐವನ್ ಡಿಸೋಜಾ (Ivan D’Souza)  ಮನೆ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು