
ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ – ಓರ್ವ ಮೃತ್ಯು, ಉಚ್ಚಿಲದ ವ್ಯಕ್ತಿಗೆ ಗಂಭೀರ ಗಾಯ
ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ – ಓರ್ವ ಮೃತ್ಯು, ಉಚ್ಚಿಲದ ವ್ಯಕ್ತಿಗೆ ಗಂಭೀರ ಗಾಯ
ನವದೆಹಲಿ: ಏರೋಸ್ಪೇಸ್ ಅಪ್ಲಿಕೇಶನ್‌ಗಳಿಗೆ ಸಂಕೀರ್ಣವಾದ ಘಟಕಗಳ ತಯಾರಿಕೆಗೆ ಬಳಸುವಂತ ಹೆಚ್ಚು ಸಾಮರ್ಥ್ಯದ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಡಿಆರ್‌ಡಿಒ ದೇಶೀಯವಾಗಿ ಅಭಿವೃದ್ಧಿ ಮಾಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ಲಾಪ್ ಟ್ರ್ಯಾಕ್‌ಗಳು, ಸ್ಲ್ಯಾಟ್, ಲ್ಯಾಂಡಿಂಗ್ ಗಿಯರ್ ಮತ್ತು ಲ್ಯಾಂಡಿಂಗ್ ಗಿಯರ್‌ನಲ್ಲಿನ ಡ್ರಾಪ್ ಲಿಂಕ್ ಸೇರಿದಂತೆ ಹಲವು ಘಟಕಗಳನ್ನು ಇದರಿಂದ ತಯಾರಿಸಬಹುದು ಎಂದು ಇಲಾಖೆ ಹೇಳಿದೆ.
ಉಕ್ಕುಗಳಿಗೆ ಹೋಲಿಸಿದರೆ ಬೀಟಾ ಟೈಟಾನಿಯಂ ಮಿಶ್ರಲೋಹ ಅತ್ಯುತ್ತಮ ತುಕ್ಕು ನಿರೋಧಕ ಗುಣ, ದೀರ್ಘ ಬಾಳಿಕೆಯ ಸಾಮರ್ಥ್ಯ ಹೊಂದಿದೆ. ದುಬಾರಿ ಲೋಹಗಳ ಬಳಕೆ ತಗ್ಗಿಸಲು ಇದು ಪರಿಣಾಮಕಾರಿಯೂ ಹೌದು. ಟೈಟಾನಿಯಂ ಜೊತೆಗೆ ವೆನಾಡಿಯಮ್, ಕಬ್ಬಿಣ, ಅಲ್ಯೂಮಿನಿಯಂ ಅನ್ನು ಒಳಗೊಂಡಿರುವ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪರ್ಯಾಯವಾಗಿ ಬಳಕೆ ಮಾಡುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಸಚಿವಾಲಯದ ಎಡಿಎ 15 ಕ್ಕೂ ಅಧಿಕ ಉಕ್ಕಿನ ಘಟಕಗಳನ್ನು ಗುರುತಿಸಿದೆ. ಮುಂದಿನ ದಿನಗಳಲ್ಲಿ ಇದನ್ನು ಬೀಟಾ ಟೈಟಾನಿಯಂ ಮಿಶ್ರಲೋಹ ತಯಾರಿಕೆಗೆ ಬಳಕೆ ಮಾಡಬಹುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ – ಓರ್ವ ಮೃತ್ಯು, ಉಚ್ಚಿಲದ ವ್ಯಕ್ತಿಗೆ ಗಂಭೀರ ಗಾಯ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್