- ರಾಜ್ಯ
- 9:37 ಫೂರ್ವಾಹ್ನ
- ಜನವರಿ 9, 2023
ಟೈರ್ ಬ್ಲಾಸ್ಟ್‌ನಿಂದ ವಾಹನ ಪಲ್ಟಿ – ಅಪಾರ ಪ್ರಮಾಣದ ಮದ್ಯ ನಾಶ
Twitter
Facebook
LinkedIn
WhatsApp

ಕಲಬುರಗಿ: ಟೈರ್ ಬ್ಲಾಸ್ಟ್ (tyre Blast) ಆಗಿ ಮದ್ಯ (Alcohol) ಸರಬರಾಜು ಮಾಡುತ್ತಿದ್ದ ವಾಹನ ಪಲ್ಟಿಯಾದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಹಸನಾಪುರ ಗ್ರಾಮದ ಬಳಿ ನಡೆದಿದೆ.
ಕಲಬುರಗಿ ನಗರದ ಗೋದಮಿನಿಂದ ಜೇವರ್ಗಿ ಪಟ್ಟಣದ ವೈನ್ ಶಾಪ್‍ಗಳಿಗೆ ಮದ್ಯವನ್ನು ಸರಬರಾಜು ಮಾಡಲು ಹೋಗುತ್ತಿದ್ದ ವಾಹನದ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಪರಿಣಾಮವಾಗಿ ಅಪಾರ ಪ್ರಮಾಣದ ಮದ್ಯದ ಬಾಟಲಿಗಳು ನಾಶವಾಗಿದೆ.
ಇನ್ನೂ ಘಟನೆ ವೇಳೆ ಯಾವುದೇ ಪ್ರಾಣಹಾನಿ ಆಗಿಲ್ಲ. ಚಾಲಕನಿಗೆ ಹಾಗೂ ಕ್ಲಿನರ್ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಕಲಬುರಗಿ ನಗರ ಸಂಚಾರಿ 1 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.