ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜೈಂಟ್ ವ್ಹೀಲ್ ಆಡುವಾಗ ಬಾಲಕಿಯ ಕೂದಲು ಸಿಲುಕಿ ಕಿತ್ತು ಬಂತು ಚರ್ಮ – ಮೂವರ ವಿರುದ್ಧ ಕೇಸ್

Twitter
Facebook
LinkedIn
WhatsApp
mcms 6

ಮಂಡ್ಯ: ಜೈಂಟ್ ವ್ಹೀಲ್ ಆಟ ಆಡುವಾಗ ಮಹಾದುರಂತವೊಂದು ಮಂಡ್ಯದ (Mandya) ಶ್ರೀರಂಗಪಟ್ಟಣದಲ್ಲಿ ನಡೆದು ಹೋಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಯಿಂಟ್ ವೀಲ್ ಆಟಿಕೆ ಮಾಲೀಕ ಹಾಗೂ ಇಬ್ಬರು ಅಧಿಕಾರಿಗಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.

ಶನಿವಾರ ರಾತ್ರಿ ರಥಸಪ್ತಮಿ ಹಿನ್ನಲೆ ಶ್ರೀರಂಗನಾಥ ಬ್ರಹ್ಮೋರಥೋತ್ಸ ಜಾತ್ರೆವಿತ್ತು. ಆ ವೇಳೆ ರಂಗನಾಥ ಮೈದಾನದಲ್ಲಿ ರಮೇಶ್‌ ಎಂಬಾತ ಜೈಂಟ್ ವ್ಹೀಲ್ ಆಟಿಕೆ ನಡೆಸ್ತಿದ್ದ. 50 ರೂ. ಕೊಟ್ಟು ಜೈಂಟ್ ವ್ಹೀಲ್  ಏರಿದ್ದ 14 ವರ್ಷದ ಶ್ರೀವಿದ್ಯಾ ಎಂಬ ಬಾಲಕಿಯ (Girl) ತಲೆ ಕೂದಲು ವ್ಹೀಲ್ ಒಂದಕ್ಕೆ ಸಿಕ್ಕಿಕೊಂಡಿದೆ. ಆದ್ರೆ ಆ ಜೈಂಟ್ ವ್ಹೀಲ್ ಅನ್ನು ಕೂದಲು ಸಿಕ್ಕ ತಕ್ಷಣ ನಿಲ್ಲಿಸದ ಕಾರಣ ತಲೆಕೂದಲು ಸಮೇತ ತಲೆ ಚರ್ಮವೇ ಬೇರ್ಪಟ್ಟಿತ್ತು. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನ ಸದ್ಯ ಮೈಸೂರಿನ (Mysuru) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಸದ್ಯ ಕುಟುಂಬಸ್ಥರ ದೂರಿನನ್ವಯ ಶ್ರೀರಂಗಪಟ್ಟಣ ಪೊಲೀಸರು ಇದೀಗ ಮೂವರ ಮೇಲೆ ಎಫ್‌.ಐ.ಆರ್ ದಾಖಲಿಸಿದ್ದಾರೆ.‌ ಈ ದುರಂತಕ್ಕೆ ಕಾರಣವಾದ ಇಬ್ಬರು ಅಧಿಕಾರಿಗಳು ಈ ಕೇಸ್‌ನಲ್ಲಿ ಆರೋಪಿಯಾಗಿದ್ದಾರೆ.

ಜೈಂಟ್ ವ್ಹೀಲ್ ಆಟದಲ್ಲಿ ಮುಂಜಾಗ್ರತೆ ವಹಿಸದ ಮಾಲೀಕ ರಮೇಶ್ ಹಾಗೂ ಮುಂಜಾಗ್ರತ ಕ್ರಮಗಳನ್ನು ಪರಿಶೀಲಿಸದೇ, ತನಿಖೆ ನಡೆಸದೆ ಅನುಮತಿ ನೀಡಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ರಂಗನಾಥಸ್ವಾಮಿ ದೇಗುಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮೇಗೌಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಸಂದೀಪ್ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ