
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಬೆಂಗಳೂರು: ಲಾಕ್‌ಡೌನ್ ವಿಸ್ತರಣೆಯ ಬಗ್ಗೆ ಊಹಾಪೋಹಗಳ ನಡುವೆಯೇ ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವತ್ಥನಾರಾಯಣ , ಜೂನ್ 7 ರ ನಂತರ ರಾಜ್ಯ ಅನ್ ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ. ಹಂತಹಂತವಾಗಿ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ.ಅದನ್ನು ವಿಸ್ತರಿಸಲಾಗುತ್ತಿದೆ ಎಂಬ ಊಹಾಪೋಹಗಳು ಇದೆ. ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್, ತಜ್ಞರು ಮತ್ತು ಇತರರಿಂದ ಸರ್ಕಾರ ಅಭಿಪ್ರಾಯ ಸಂಗ್ರಹಿಸುತ್ತಿದೆ ಮತ್ತು ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಟಿಎಸಿಯ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿ ಚರ್ಚಿಸಿದ್ದೇನೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಅನ್ ಲಾಕ್ ಮಾಡಿದರೆ ಅದು ಹಂತ ಹಂತವಾಗಿರಬೇಕು ಮತ್ತು ಅದನ್ನು ಒಮ್ಮೆಗೇ ಮಾಡಲು ಸಾಧ್ಯವಿಲ್ಲ, ಏಕೆಂದರೆ ಕೊರೋನಾ ನಮ್ಮ ನಿರೀಕ್ಷೆಗಳ ಮಟ್ಟಕ್ಕೆ ಇಲ್ಲ. , ಪ್ರಕರಣಗಳು ಕಡಿಮೆಯಾಗಿದ್ದರೂ, ಅದು ಇನ್ನೂ 5 ಶೇ. ಗಿಂತ ಕಡಿಮೆ ಇಲ್ಲ. ಹಲವಾರು ಜಿಲ್ಲೆಗಳಲ್ಲಿಕೊರೋನಾ ಇನ್ನೂ ಹೆಚ್ಚಿರುವುದರಿಂದ ನಾವು ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್