ಮಂಗಳವಾರ, ಜೂನ್ 18, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್..!

Twitter
Facebook
LinkedIn
WhatsApp
ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್..!

ಬೆಂಗಳೂರು: ಮೊನ್ನೆ ಬೆಂಗಳೂರು ಜಿಲ್ಲಾಡಳಿತದ ಅದೊಂದು ಆದೇಶಕ್ಕೆ ಮದ್ಯ ಪ್ರಿಯರು ಮದ್ಯದಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. 5 ದಿನಗಳ ಕಾಲ ಮದ್ಯದಂಗಡಿಗಳು ಕ್ಲೋಸ್‌‌ (Liquor ban) ಆಗುವ ಕಹಿ ಸುದ್ದಿಯನ್ನು ಕೇಳಿದ್ದೆ ತಡ ಮದ್ಯಪ್ರಿಯರು ಈಗಿನಿಂದಲೇ ಎಣ್ಣೆ ಸ್ಟಾಕ್‌ ಇಟ್ಟುಕೊಳ್ಳಲು ಮುಂದಾಗುತ್ತಿದ್ದಾರೆ.

ಅಂದಹಾಗೇ ಲೋಕಸಭಾ ಚುನಾವಣೆ ಹಾಗೂ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಹೊರಬೀಳಲಿರುವ ಕಾರಣ ರಾಜಧಾನಿ ಬೆಂಗಳೂರಲ್ಲಿ ಒಂದು ವಾರದ ಕಾಲ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧ (Liquor Bandh) ಮಾಡಿ ಮದ್ಯ ಮಾರಾಟ ರಹಿತ ದಿನಗಳೆಂದು (Dry day) ಘೋಷಣೆ ಮಾಡಲಾಗಿದೆ.

ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1ರ ಸಂಜೆ 4 ಗಂಟೆಯಿಂದ ಜೂನ್ 3 ರವರೆಗೆ ಬಾರ್ ಬಂದ್ ಬಂದ್‌ ಆಗಲಿದೆ. ಅದೇ ರೀತಿ, ಜೂನ್ 4 ರಂದು ದೇಶದಾದ್ಯಂತ ನಡೆದಿದ್ದ ಲೋಕಸಭಾ ಚುನಾವಣೆಯ ಮತ ಎಣಿಕೆ ಇದೆ. ಹಾಗಾಗಿ ಅಂದೂ ಸಹ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.

ಇನ್ನು ಜೂನ್ 6 ರಂದು ವಿಧಾನ ಪರಿಷತ್ತಿನ ಚುನಾವಣೆ ಮತ ಎಣಿಕೆ ಇರುವ ಕಾರಣ ಆ ದಿನವು ಬಾರ್ ಬಂದ್ ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಹೀಗಾಗಿ ಜೂನ್ ಮೊದಲ ವಾರ ಮದ್ಯ ಪ್ರಿಯರಿಗೆ ಎಣ್ಣೆ ಸಿಗುವುದು ಕಷ್ಟವಾಗಿದೆ. ಹೀಗಾಗಿ ಮದ್ಯಪ್ರಿಯರು ಈಗಿನಿಂದಲೇ ಎಣ್ಣೆ ಸ್ಟಾಕ್‌ ಇಟ್ಟುಕೊಳ್ಳೋಕೆ ಮುಗಿಬೀಳುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ