ಶನಿವಾರ, ಜುಲೈ 13, 2024
13 ರಲ್ಲಿ 10 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ INDIA ಮೈತ್ರಿಕೂಟ; ಬಿಜೆಪಿಗೆ 2 ಸ್ಥಾನ-ಪಿಚ್‌ನ ಮಣ್ಣು ತಿಂದ ರಹಸ್ಯ; ರೋಹಿತ್ ಶರ್ಮ ಹೇಳಿದ್ದೇನು?-ವಾಲ್ಮೀಕಿ ನಿಗಮ, ಮುಡಾ ಹಗರಣ ನ್ಯಾಯಯುತ ತನಿಖೆಗಾಗಿ ಸಿಬಿಐಗೆ ವಹಿಸಬೇಕು: ಸಂಸದ ಯದುವೀರ್ ಒಡೆಯರ್-ಡಿಸಿಸಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಗೌಡ; ಉಪಾಧ್ಯಕ್ಷರಾಗಿ ಮರಿಯಪ್ಪ ಅವಿರೋಧ ಆಯ್ಕೆ!-ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸುವ ವಿಡಿಯೋ ವೈರಲ್; ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ಮನೋರಮಾ ವಿರುದ್ಧ ಎಫ್ಐಆರ್!-WCL 2024: ಇರ್ಫಾನ್ - ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್, ಭಾರತ - ಪಾಕಿಸ್ತಾನ ಫೈನಲ್​ಗೆ ಲಗ್ಗೆ!-ಬಿಜೆಪಿ ಮೈತ್ರಿಕೂಟಕ್ಕೆ ಪರಿಷತ್ತಿನ ಚುನಾವಣೆಯಲ್ಲಿ 11ರ ಪೈಕಿ 9 ಸ್ಥಾನಗಳಲ್ಲಿ ಜಯ!-Aparna: ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ಇನ್ನಿಲ್ಲ-ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!-ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್​ ಗಂಭೀರ್ ನೇಮಕ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜಿಲ್ಲೆಯಲ್ಲಿ ಖಾಸಗಿ ಮತ್ತು ಸಿಟಿ ಬಸ್‌ ಸಂಚಾರ ಜುಲೈ 1ರಿಂದ ಸೀಮಿತ ಸಂಖ್ಯೆಯಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ.

Twitter
Facebook
LinkedIn
WhatsApp
ದಕ್ಷಿಣ ಕನ್ನಡದಲ್ಲಿ ಜೂನ್ ಅಂತ್ಯದ ವರೆಗೆ ರಸ್ತೆಗೆ  ಖಾಸಗಿ ಬಸ್ ಇಳಿಯಲ್ಲ!!

ಮಂಗಳೂರು: ಹಲವು ಕಾರಣಗಳಿಂದ ದಕ್ಷಿಣ ಕನ್ನಡದಲ್ಲಿ ಸಿಟಿ ಮತ್ತು ಜಿಲ್ಲಾ ಬಸುಗಳು ತಮ್ಮ ಸಂಚಾರವನ್ನು ಇನ್ನು ಆರಂಭ ಮಾಡಿಲ್ಲ. ಜಿಲ್ಲೆಯಲ್ಲಿ ಖಾಸಗಿ ಮತ್ತು ಸಿಟಿ ಬಸ್‌ ಸಂಚಾರ ಜುಲೈ 1ರಿಂದ ಸೀಮಿತ ಸಂಖ್ಯೆಯಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ. ಗುರುವಾರ ಮೂಡುಬಿದಿರೆಯಲ್ಲಿ ನಡೆದ ಬಸ್‌ ಮಾಲಕರ ಸಂಘದ ಸಭೆಯಲ್ಲಿ ಇದಕ್ಕೆ ಬಹುತೇಕ ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ.
ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಮತ್ತು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು ಮಾತನಾಡಿ, ಜು. 1ರಿಂದ ಖಾಸಗಿ ಬಸ್‌ಗಳು ಸೇರಿದಂತೆ ಮಂಗಳೂರು ನಗರದಲ್ಲಿ ಸಿಟಿ ಬಸ್‌ಗಳು ಸೀಮಿತ ಸಂಖ್ಯೆಯಲ್ಲಿ ಕಾರ್ಯಾಚರಣೆ ಆರಂಭವಾಗುತ್ತದೆ. ತೆರಿಗೆ ವಿನಾಯಿತಿ ಸಹಿತ ಕೆಲವೊಂದು ಬೇಡಿಕೆಗಳನ್ನು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಕೆಗೆ ಮತ್ತೂಮ್ಮೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ತಿಂಗಳಲ್ಲಿ ಕೇವಲ 7 ದಿನ ಬಸ್ ಓಡಿಸಿದರೆ, 1 ತಿಂಗಳ ತೆರಿಗೆ ಕಟ್ಟಬೇಕು. ಇದು ಕಷ್ಟ ಸಾಧ್ಯ. ಈಗಿನ ಡೀಸೆಲ್ ಬೆಲೆಯಲ್ಲಿ ಶೇ 50 ರಷ್ಟು ಪ್ರಯಾಣಿಕರನ್ನು ಕರೆದೊಯ್ಯುವುದು ನಷ್ಟ ಉಂಟಾಗಲಿದೆ. ಅಲ್ಲದೇ ನಗರದಾದ್ಯಂತ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಲಾಗಿದೆ. 2 ತಿಂಗಳಿನಿಂದ ನಿಂತಿದ್ದ ಬಸ್‌ಗಳನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ ದುರಸ್ತಿ ಮಾಡಿಸಬೇಕಿದೆ ಎಂದು ಬಸ್‌ ಮಾಲೀಕರು ತಿಳಿಸಿದ್ದಾರೆ. ಆದಾಗ್ಯೂ ಪರಿಸ್ಥಿತಿಯನ್ನು ಗಮನಿಸಿ ಜುಲೈ 1 ರಿಂದ ಸಿಟಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸರಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸಲು ಸಾಧ್ಯವಿಲ್ಲ. ಬಸ್ಸಲ್ಲಿರುವ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ನಮಗೆ ಯಾವುದೇ ಆದಾಯ ಲಭಿಸದು. ಬಸ್ ಸಾರಿಗೆ ಉದ್ಯಮದ ಭವಿಷ್ಯದ ಹಿತದೃಷ್ಟಿಯಿಂದ ಜುಲೈ 1ರಿಂದ ಬಸ್ ಸಂಚಾರ ಆರಂಭಿಸಲು ಮುಂದಾಗಿದ್ದೇವೆ ಎಂದಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!

ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!

ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..! Twitter Facebook LinkedIn WhatsApp Mangalore: ಕಡಲನಗರಿ ಮಂಗಳೂರನ್ನು(Mangalore) ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್​ನ್ನು ಕೃತ್ಯ ನಡೆದ ಐದೇ ಗಂಟೆಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು